ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್​

ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್​
ರಾಧಿಕಾ ಆಪ್ಟೆ, ಆದಿಲ್​ ಹುಸೇನ್​

Adil Hussain: ಪಾರ್ಚ್ಡ್​ ಸಿನಿಮಾದ ಒಂದು ದೃಶ್ಯದಲ್ಲಿ ನಟ ಆದಿಲ್​ ಹುಸೇನ್​ ಮತ್ತು ರಾಧಿಕಾ ಆಪ್ಟೆ ಸಂಪೂರ್ಣ ಬೆತ್ತಲಾಗಿ ನಟಿಸಿದ್ದರು. ಆ ಸನ್ನಿವೇಶದ ಚಿತ್ರೀಕರಣಕ್ಕೂ ಮುನ್ನ ತಮ್ಮಿಬ್ಬರ ನಡುವೆ ನಡೆದ ಮಾತುಕತೆ ಏನು ಎಂಬುದನ್ನು ಆದಿಲ್​ ಹುಸೇನ್​ ಈಗ ವಿವರಿಸಿದ್ದಾರೆ.

Madan Kumar

| Edited By: Rajesh Duggumane

Jun 01, 2021 | 4:55 PM

ನಟಿ ರಾಧಿಕಾ ಆಪ್ಟೆ ಅವರು 2016ರಲ್ಲಿ ತೆರೆಕಂಡ ‘ಪಾರ್ಚ್ಡ್​’ ಸಿನಿಮಾದಲ್ಲಿ ಸಂಪೂರ್ಣ ನಗ್ನವಾಗಿ ನಟಿಸಿದ್ದರು. ಆ ಸಿನಿಮಾ ತೆರೆಕಾಣುವುದಕ್ಕೂ ಮುನ್ನವೇ ಆ ದೃಶ್ಯದ ಕೆಲವು ತುಣುಕುಗಳು ಆನ್​ಲೈನ್​ನಲ್ಲಿ ಲೀಕ್​ ಆಗಿದ್ದವು. ಅದರಿಂದ ರಾಧಿಕಾ ಅವರ ವೈಯಕ್ತಿಕ ಜೀವನಕ್ಕೆ ತೊಂದರೆ ಆಗಿತ್ತು. ನಾಲ್ಕು ದಿನಗಳ ಕಾಲ ತಾವು ಮನೆಯಿಂದ ಹೊರಬಂದಿರಲಿಲ್ಲ ಎಂದು ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪಾರ್ಚ್ಡ್​ ಸಿನಿಮಾದ ಆ ನಗ್ನ ದೃಶ್ಯದಲ್ಲಿ ರಾಧಿಕಾ ಆಪ್ಟೆ ಜೊತೆ ನಟಿಸಿದ್ದು ಆದಿಲ್​ ಹುಸೇನ್​. ಅವರು ಕೂಡ ಈಗ ಆ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಪಾರ್ಚ್ಡ್​ ಸಿನಿಮಾದಲ್ಲಿ ರಾಧಿಕಾ ಆಪ್ಟೆ ಸೆ*ಕ್ಸ್​ ವರ್ಕರ್​ ಪಾತ್ರ ಮಾಡಿದ್ದರು. ಹಾಗಾಗಿ ಆ ಚಿತ್ರದಲ್ಲಿ ಕೆಲವು ಬೋಲ್ಡ್​ ದೃಶ್ಯಗಳಿದ್ದವು. ಒಂದು ದೃಶ್ಯದಲ್ಲಂತೂ ನಟ ಆದಿಲ್​ ಹುಸೇನ್​ ಮತ್ತು ರಾಧಿಕಾ ಸಂಪೂರ್ಣ ಬೆತ್ತಲಾಗಿ ನಟಿಸಿದ್ದರು. ಆ ಸನ್ನಿವೇಶದ ಚಿತ್ರೀಕರಣಕ್ಕೂ ಮುನ್ನ ತಮ್ಮಿಬ್ಬರ ನಡುವೆ ನಡೆದ ಮಾತುಕತೆ ಏನು ಎಂಬುದನ್ನು ಆದಿಲ್​ ಹುಸೇನ್​ ಈಗ ವಿವರಿಸಿದ್ದಾರೆ. ‘ರಾಧಿಕಾ ಕಲೆಗೆ ಬದ್ಧವಾಗಿರುವ ನಟಿ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಕೆಗೆ ಮತ್ತು ನನಗೆ ಕಲೆ ಮುಖ್ಯವಾಗುತ್ತದೆಯೇ ಹೊರತು ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ’ ಎನ್ನುವ ಮೂಲಕ ಆದಿಲ್​ ಹುಸೇನ್​ ಮಾತು ಆರಂಭಿಸಿದ್ದಾರೆ.

‘ಆ ನಗ್ನ ದೃಶ್ಯದಲ್ಲಿ ನಟಿಸುವುದಕ್ಕೂ ಮುನ್ನ ನಾವಿಬ್ಬರೂ ಮಾತನಾಡಿಕೊಂಡೆವು. ನಿಮ್ಮ ಬಾಯ್​ಫ್ರೆಂಡ್​ ಏನು ಹೇಳುತ್ತಾರೆ ಎಂದು ನಾನು ರಾಧಿಕಾಗೆ ಕೇಳಿದೆ. ತನಗೆ ಮದುವೆ ಆಗಿದೆ ಅಂತ ಅವರು ಹೇಳಿದರು. ನನ್ನ ಹೆಂಡತಿ ಏನನ್ನುತ್ತಾರೆ ಎಂದು ರಾಧಿಕಾ ನನಗೆ ಮರುಪ್ರಶ್ನಿಸಿದರು. ನನ್ನ ಹೆಂಡತಿ ವಿಚಾರದಲ್ಲಿ ಏನೂ ತೊಂದರೆ ಇಲ್ಲ ಅಂತ ನಾನು ಉತ್ತರಿಸಿದೆ’ ಎಂದು ಆದಿಲ್​ ಹುಸೇನ್​ ಹೇಳಿದ್ದಾರೆ. ಈ ಮಾತುಕತೆ ನಡೆದ ಬಳಿಕ ರಾಧಿಕಾ ಮತ್ತು ಆದಿಲ್​ ನಗ್ನ ದೃಶ್ಯದಲ್ಲಿ ನಟಿಸಿದ್ದರು.

‘ಆ ದೃಶ್ಯದಲ್ಲಿ ನಟಿಸುವಾಗ ನಾನು ಬಹುತೇಕ ನಗ್ನವಾಗಿದ್ದೆ. ಮಾನವನ ಬದುಕಿನ ಸಂಕೀರ್ಣತೆಯನ್ನು ತೋರಿಸುವುದೇ ನಿಜವಾದ ಉದ್ದೇಶವಾಗಿರುವಾಗ ನನಗೆ ಅಂಥ ದೃಶ್ಯಗಳಲ್ಲಿ ನಟಿಸಲು ಯಾವುದೇ ಅಭ್ಯಂತರ ಇಲ್ಲ. ನನ್ನ ಹೆಂಡತಿ ಕೂಡ ಅದಕ್ಕೆ ಆಕ್ಷೇಪ ಎತ್ತಲಿಲ್ಲ. ನಿರ್ದೇಶಕಿ ಲೀನಾ ಯಾದವ್​ ಅವರು ನನಗೆ ಈ ದೃಶ್ಯದ ಬಗ್ಗೆ ಹೇಳಿದಾಗ ನಾನು ಮೊದಲು ಚರ್ಚೆ ಮಾಡಿದ್ದೇ ನನ್ನ ಹೆಂಡತಿ ಬಳಿ. ನನ್ನ ವೃತ್ತಿಯನ್ನು ಆಕೆ ಗೌರವಿಸುತ್ತಾಳೆ’ ಎಂದು ಆದಿಲ್​ ಹುಸೇನ್​ ಹೇಳಿದ್ದಾರೆ.

ಇದನ್ನೂ ಓದಿ:

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

Radhika Apte: ಕೊವಿಡ್​ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್​ ವರ್ಮಾ

Follow us on

Related Stories

Most Read Stories

Click on your DTH Provider to Add TV9 Kannada