ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​

ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಕೆಲವು ಸಮಯ ಕಳೆದಿತ್ತು. ಮಾರ್ಚ್​ 5ರಂದು ಇವರ ವಿಚ್ಛೇದನ ಅಧಿಕೃತವಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್​ ಸಿಕ್ಕಿದೆ.

ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​
ಕುಟುಂಬದ ಜತೆ ಬಾಲ
TV9kannada Web Team

| Edited By: Rajesh Duggumane

Mar 08, 2022 | 9:50 PM

ಚಿತ್ರರಂಗದಲ್ಲಿ ಇತ್ತೀಚೆಗೆ ಸಾಕಷ್ಟು ಮಂದಿ ವಿಚ್ಛೇದನ (Divorce) ಪಡೆಯುತ್ತಿದ್ದಾರೆ. ಹಲವು ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದವರು ಬೇರೆಬೇರೆ ಆಗುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ತಮಿಳಿನ ಖ್ಯಾತ ನಿರ್ದೇಶಕ ಬಾಲ (Director Bala). ಅವರು ಪತ್ನಿ ಮುತ್ತುಮಲಾರ್ (ಮಲಾರ್​)​ ಜತೆ ವಿಚ್ಛೇದನ ಪಡೆದಿದ್ದಾರೆ. ಮೂಲಗಳ ಪ್ರಕಾರ ಇಬ್ಬರ ನಡುವೆ ವೈಮನಸ್ಸು ಬೆಳೆದು ಹಲವು ವರ್ಷಗಳೇ ಕಳೆದಿದ್ದವು. ನಾಲ್ಕು ವರ್ಷಗಳ ಹಿಂದೆ ಇಬ್ಬರೂ ಬೇರೆಬೇರೆ ಉಳಿದುಕೊಂಡಿದ್ದರು. ಇವರು ಬೇರೆ ಆಗಿರುವ ವಿಚಾರ ಚಿತ್ರರಂಗದ ಅನೇಕರಿಗೆ ಶಾಕ್​ ನೀಡಿದೆ.

ನಾಲ್ಕು ವರ್ಷಗಳ ಹಿಂದೆ ಇಬ್ಬರೂ ಪ್ರತ್ಯೇಕವಾಗಿ ಇರುವ ನಿರ್ಧಾರಕ್ಕೆ ಬಂದರು. ಆ ಬಳಿಕ ಬಾಲ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಮಲಾರ್​ ಅವರು ಚಿತ್ರರಂಗದ ಗಾಯಕಿಯರ ಜತೆ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ಅಧಿಕೃತವಾಗಿ ಬೇರೆ ಆಗಿದ್ದಾರೆ.

ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಕೆಲವು ಸಮಯ ಕಳೆದಿತ್ತು. ಮಾರ್ಚ್​ 5ರಂದು ಇವರ ವಿಚ್ಛೇದನ ಅಧಿಕೃತವಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್​ ಸಿಕ್ಕಿದೆ. ಬಾಲ ಹಾಗೂ ಮಲಾರ್​ ಅವರು 2004ರ ಜುಲೈ 7ರಂದು ಮಧುರೈನಲ್ಲಿ ಮದುವೆ ಆಗಿದ್ದರು. 18 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ ಇಬ್ಬರೂ ಈಗ ಬೇರೆ ಆಗಿದ್ದಾರೆ. ಇವರಿಗೆ ಪ್ರಾರ್ಥನಾ ಹೆಸರಿನ ಹೆಣ್ಣು ಮಗಳು ಇದ್ದಾಳೆ.

ಬಾಲ ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದು ಧ್ರುವ ವಿಕ್ರಮ್​ ಅವರ ‘ವರ್ಮ’ ಸಿನಿಮಾವನ್ನು. ತೆಲುಗಿನಲ್ಲಿ ತೆರೆಗೆ ಬಂದ ‘ಅರ್ಜುನ್​ ರೆಡ್ಡಿ’ ಚಿತ್ರದ ತಮಿಳು ರಿಮೇಕ್​ ಇದಾಗಿದೆ. ಸೂರ್ಯ ನಟನೆಯ ಮುಂದಿನ ಚಿತ್ರಕ್ಕೆ ಬಾಲ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್​ ಕೆಲಸಗಳು ಪ್ರಗತಿಯಲ್ಲಿವೆ.

ಹಲವು ಸ್ಟಾರ್​ಗಳ ವಿಚ್ಛೇದನ

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ 4 ವರ್ಷಗಳ ಕಾಲ ಸುಖಸಂಸಾರ ನಡೆಸಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ದಂಪತಿ ವಿಚ್ಛೇದನ ಪಡೆದಿರುವ ಬಗ್ಗೆ ಘೋಷಣೆ ಮಾಡಿದರು. ಇದು ಶಾಕಿಂಗ್ ಆಗಿತ್ತು. ಇದಲ್ಲದೆ, ಖ್ಯಾತ ನಟ ಧನುಷ್ ಹಾಗೂ ಅವರ ಪತ್ನಿ, ರಜನಿಕಾಂತ್​ ಮಗಳು ಐಶ್ವರ್ಯಾ ಕೂಡ ವಿಚ್ಛೇದನ ಪಡೆದು ಬೇರೆ ಆದರು. ಈಗ ಬಾಲ ಕೂಡ ವಿಚ್ಛೇದನ ಪಡೆದು ಪತ್ನಿಯಿಂದ ದೂರವಾಗಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ? 

ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada