ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಒಟ್ಟಾಗಿ ಸಿನಿಮಾದಲ್ಲಿ ನಟಿಸಿದವರು. ಇವರಿಗೆ ಸೆಟ್​ನಲ್ಲೇ ಪ್ರೀತಿ ಹುಟ್ಟಿತ್ತು. 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದರು. 2017ರಲ್ಲಿ ಇಬ್ಬರೂ ಹಸೆಮಣೆ ಏರಿದರು.

ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
ನಾಗ ಚೈತನ್ಯ-ಸಮಂತಾ
TV9kannada Web Team

| Edited By: Rajesh Duggumane

Mar 09, 2022 | 9:39 PM

ಸಮಂತಾ (Samantha) ಅವರು ನಾಗ ಚೈತನ್ಯ ಅವರ ಜತೆ ವಿಚ್ಛೇದನ ಪಡೆದು ಹಲವು ತಿಂಗಳು ಕಳೆದಿದೆ. ಈ ಕಹಿ ಘಟನೆಯನ್ನು ಮರೆಯೋಕೆ ಅವರ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಇಬ್ಬರೂ ಮತ್ತೆ ಒಂದಾಗಲಿ ಎಂದು ಸಾಕಷ್ಟು ಬಾರಿ ಕೋರಿಕೊಂಡಿದ್ದಿದೆ. ಆದರೆ, ಅದು ಸಾಧ್ಯವಾಗುವಂತಹದ್ದಲ್ಲ. ಸಮಂತಾ-ನಾಗ ಚೈತನ್ಯ (Naga Chaitanya) ಇಬ್ಬರೂ ಬೇರೆ ಆಗಿ ಐದು ತಿಂಗಳು ಕಳೆದರೂ ಅವರ ಬಗ್ಗೆ ನಾನಾ ರೀತಿಯ ವಿಚಾರಗಳು ಹರಿದಾಡುತ್ತಲೇ ಇದೆ. ಈಗ ಸಮಂತಾ ಬಗ್ಗೆ ಹೊಸ ಮಾಹಿತಿಯೊಂದು ಹರಿದಾಡಿದೆ. ಅವರು ವಿಚ್ಛೇದನದ ಬಳಿಕ ಪ್ರಮುಖ ವಸ್ತುವನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದರು.

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಒಟ್ಟಾಗಿ ಸಿನಿಮಾದಲ್ಲಿ ನಟಿಸಿದವರು. ಇವರಿಗೆ ಸೆಟ್​ನಲ್ಲೇ ಪ್ರೀತಿ ಹುಟ್ಟಿತ್ತು. 10 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದರು. 2017ರಲ್ಲಿ ಇಬ್ಬರೂ ಹಸೆಮಣೆ ಏರಿದರು. ಆದರೆ, ನಾಲ್ಕು ವರ್ಷ ತುಂಬುವುದರೊಳಗೆ ಇಬ್ಬರೂ ಬೇರೆ ಆದರು. ಅಕ್ಟೋಬರ್ ತಿಂಗಳಲ್ಲಿ ಈ ದಂಪತಿ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಘೋಷಣೆ ಮಾಡಿದರು. ಸಮಂತಾ ಮದುವೆ ಸಮಯದಲ್ಲಿ ಉಟ್ಟಂತಹ ಸೀರೆಯನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

ಮದುವೆಯಲ್ಲಿ ಸಮಂತಾ ಉಟ್ಟಂತಹ ಸೀರೆ ನಾಗ ಚೈತನ್ಯ ಅವರ ಅಜ್ಜಿಯ ಸೀರೆ ಆಗಿತ್ತು. ಮನೆಗೆ ಸೊಸೆಯಾಗಿ ಬರುವ ಹುಡುಗಿಗೆ ಈ ಸೀರೆ ಕೊಡಬೇಕು ಎಂಬುದು ಅಕ್ಕಿನೇನಿ ಕುಟುಂಬದ ಆಸೆ ಆಗಿತ್ತು. ಅಂತೆಯೇ ವಿವಾಹದ ದಿನ ಸಮಂತಾ ಅವರು ಈ ಸೀರೆಯನ್ನು ತೊಟ್ಟಿದ್ದರು. ಆ ಬಳಿಕ ಅದು ಸಮಂತಾ ಬಳಿಯೇ ಇತ್ತು ಎಂದು ಇ-ಟೈಮ್ಸ್​ ವರದಿ ಮಾಡಿದೆ.

ಸಮಂತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸೀರೆ ಉಟ್ಟ ಫೋಟೋ ಹಾಕಿ ಗಮನ ಸೆಳೆದಿದ್ದರು. ಈ ಫೋಟೋದಲ್ಲಿ ಅವರ ಸೀರೆ ಹಾಗೂ ಕಿವಿಯ ಓಲೆ ಎಲ್ಲರ ಗಮನ ಸೆಳೆದಿದ್ದರು. ಇದರ ಬೆಲೆಯನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದರು. ಇದರ ಬೆಲೆ ಕೇಳಿ ನಿಜಕ್ಕೂ ಅಚ್ಚರಿ ಹೊರಹಾಕಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ 1,14,999 ರೂಪಾಯಿ ಆಗಿತ್ತು. ಸಮಂತಾರ ಸೀರೆ ಬೆಲೆ ಕೇಳಿ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದರು. ಕೆಲವರು ಸೀರೆಯನ್ನು ನೋಡಿ ಮೆಚ್ಚುಗೆ ಹೊರಹಾಕಿದ್ದರು.

ಇದನ್ನೂ ಓದಿ: ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?

 Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada