ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?

ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?
ಸಮಂತಾ

ಅಂಗಡಿ ಉದ್ಘಾಟನೆಗೆ ಅತಿಥಿಯಾಗಿ ಬಂದು ಹಣ ಗಳಿಸಬೇಕು ಎಂಬ ಅನಿವಾರ್ಯತೆ ಸಮಂತಾಗೆ ಇಲ್ಲ. ಹಾಗಿದ್ದರೂ ಅವರು ಇಂಥ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಅದಕ್ಕೆ ವಿಶೇಷ ಕಾರಣ ಇದೆ.

TV9kannada Web Team

| Edited By: Madan Kumar

Feb 24, 2022 | 4:00 PM

ನಟಿ ಸಮಂತಾ (Samantha) ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಹಿಂದಿ ಭಾಷಿಕ ರಾಜ್ಯಗಳಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ರಾಜಿ ಎಂಬ ಪಾತ್ರ ಮಾಡಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ‘ಪುಷ್ಪ’ ಸಿನಿಮಾದ ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ’ ಹಾಡು ಸೂಪರ್​ ಹಿಟ್​ ಆದ ನಂತರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಮಂತಾ ಫೇಮಸ್​ ಆಗಿಬಿಟ್ಟರು. ಈಗ ಅವರಿಗೆ ಹಲವಾರು ಅವಕಾಶಗಳು ಹರಿದುಬರುತ್ತಿವೆ. ಅದಕ್ಕೆ ತಕ್ಕಂತೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ (Samantha Remuneration) ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಹಲವು ದಾರಿಗಳಲ್ಲಿ ಸಮಂತಾ ಹಣ ಗಳಿಸುತ್ತಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕಮರ್ಷಿಯಲ್​ ಬ್ರ್ಯಾಂಡ್​ಗಳನ್ನು ಪ್ರಮೋಟ್​ ಮಾಡಿದರೆ ಅವರಿಗೆ ಹಣ ಸಿಗುತ್ತದೆ. ಜಾಹೀರಾತುಗಳಲ್ಲಿ ನಟಿಸಿದರೆ ಸಮಂತಾಗೆ ಕೈ ತುಂಬ ಸಂಬಳ (Samantha Salary) ನೀಡುತ್ತಾರೆ. ಅದರ ಜೊತೆಗೆ ಕೆಲವು ಅಂಗಡಿಗಳ ಉದ್ಘಾಟನೆಗೆ ಅತಿಥಿಯಾಗಿ ಹೋಗುವ ಮೂಲಕವೂ ಸಮಂತಾ ಸಂಪಾದನೆ ಮಾಡುತ್ತಾರೆ. ಮೂಲಗಳ ಪ್ರಕಾರ ಒಂದು ಅಂಗಡಿಯ ಉದ್ಘಾಟನೆಗೆ ಬಂದರೆ ಅವರು 15 ಲಕ್ಷ ರೂಪಾಯಿ ಪಡೆಯುತ್ತಾರೆ. ಅದಕ್ಕಿಂತಲೂ ಹೆಚ್ಚು ಅವರು ಚಾರ್ಚ್​ ಮಾಡುವುದಿಲ್ಲ.

ಸಮಂತಾ ಅವರು ಈಗ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅಂಗಡಿಗಳ ಉದ್ಘಾಟನೆಗೆ ಹೋಗಿ ಹಣ ಗಳಿಸಬೇಕು ಎಂಬ ಅನಿವಾರ್ಯತೆ ಅವರಿಗೆ ಇಲ್ಲ. ಹಾಗಿದ್ದರೂ ಕೂಡ ಅವರು ಇಂಥ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಅದಕ್ಕೆ ವಿಶೇಷ ಕಾರಣ ಕೂಡ ಇದೆ. ಹಾಗಾಗಿ ಅವರು ಅದಕ್ಕಾಗಿ 15 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಪಡೆಯುವುದಿಲ್ಲ ಎಂಬ ಮಾತು ಕೇಳಿಬಂದಿದೆ.

ಎಷ್ಟೇ ದೊಡ್ಡ ನಟಿಯಾಗಿದ್ದರೂ ಕೂಡ ಜನಸಾಮಾನ್ಯರ ಜೊತೆ, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದರೆ ಜನರು ಹೆಚ್ಚು ಪ್ರೀತಿ ತೋರಿಸುತ್ತಾರೆ. ಆ ಕಾರಣದಿಂದ ಅಂಗಡಿ ಉದ್ಘಾಟನೆಯಂತಹ ಕಾರ್ಯಕ್ರಮಗಳಲ್ಲಿ ಸಮಂತಾ ಭಾಗವಹಿಸುತ್ತಾರಂತೆ. ಇತ್ತೀಚೆಗೆ ಅವರು ಇಂಥ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದರು. ಅಲ್ಲಿ ಸಮಂತಾ ಅವರನ್ನು ನೋಡಲು ಜನಸಾಗರವೇ ಸೇರಿತ್ತು. ಅಭಿಮಾನಿಗಳ ಪ್ರೀತಿಯನ್ನು ಕಂಡು ಸಮಂತಾ ಖುಷಿ ಆಗಿದ್ದಾರೆ.

‘ಶಾಕುಂತಲಂ’ ಚಿತ್ರದ ಫಸ್ಟ್​ಲುಕ್​ ವೈರಲ್​:

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ಈ ಸಿನಿಮಾದಿಂದ ಫಸ್ಟ್​ಲುಕ್​ ಪೋಸ್ಟ್​ ಬಿಡುಗಡೆ ಮಾಡಲಾಗಿದೆ. ಶಕುಂತಲೆಯಾಗಿ ಸಮಂತಾ ಅವರು ಪೋಸ್​ ನೀಡಿದ್ದಾರೆ. ಶ್ವೇತವರ್ಣದ ಸೀರೆಯಲ್ಲಿ, ಪರಿಸರದ ಮಧ್ಯೆ ಕುಳಿತು ಅವರು ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಮೇನಕೆ ಮತ್ತು ವಿಶ್ವಾಮಿತ್ರರ ಮಗಳು ಶಕುಂತಲೆ. ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಬೆಳದ ಆಕೆಗೆ ಪ್ರಕೃತಿ ಮತ್ತು ಪ್ರಾಣಿಗಳೆಂದರೆ ತುಂಬ ಪ್ರೀತಿ. ಅದನ್ನು ಬಿಂಬಿಸುವ ರೀತಿಯಲ್ಲೇ ‘ಶಾಕುಂತಲಂ’ ಚಿತ್ರದ ಫಸ್ಟ್​ಲುಕ್​ ಮೂಡಿಬಂದಿದೆ.

‘ನಾನು ಯಾವಾಗಲೂ ಡಿಫರೆಂಟ್​​ ಪಾತ್ರ ಮಾಡಲು ಇಷ್ಟಪಡುತ್ತೇನೆ. ‘ಶಾಕುಂತಲಂ’ ಸಿನಿಮಾದ ಪ್ರತಿ ಫ್ರೇಮ್​ ಕೂಡ ಪೇಂಟಿಂಗ್ ರೀತಿ ಇದೆ. ಶಕುಂತಲೆಯ ಪಾತ್ರದಲ್ಲಿ ಹಿಂದೆಂದಿಗಿಂತಲೂ ನಾನು ​ಸುಂದರವಾಗಿ ಕಾಣಿಸಿಕೊಳ್ಳಬೇಕು. ಆ ಒತ್ತಡ ನನ್ನ ಮೇಲೆ ಇತ್ತು. ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳೆಂದರೆ ನನಗೆ ಯಾವಾಗಲೂ ಇಷ್ಟ. ಇದು ನನ್ನ ಕನಸಿನ ಪಾತ್ರ. ಕೆಲವು ದೃಶ್ಯಗಳನ್ನು ನೋಡಿದರೆ ಅದು ನಾನೇ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಷ್ಟು ಚೆನ್ನಾಗಿ ಇಡೀ ತಂಡ ಕೆಲಸ ಮಾಡಿದೆ. ಮೇಕಪ್​, ಕಾಸ್ಟ್ಯೂಮ್​, ಪ್ರೊಡಕ್ಷನ್​ ಡಿಸೈನ್​, ಲೈಟಿಂಗ್​ ಹೀಗೆ ಎಲ್ಲವೂ ಚೆನ್ನಾಗಿದೆ’ ಎಂದು ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು.

ಇದನ್ನೂ ಓದಿ:

‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?

Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?

Follow us on

Related Stories

Most Read Stories

Click on your DTH Provider to Add TV9 Kannada