ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು

Akshay Kumar | Raksha Bandhan: ಅಕ್ಷಯ್​ ಕುಮಾರ್​ ಅವರಿಗೆ ಹ್ಯಾಟ್ರಿಕ್ ಸೋಲು ಉಂಟಾಗಿದೆ. ಇದರಿಂದ ಅವರು ಕೆನಡಾ ಕಡೆಗೆ ಮುಖ ಮಾಡುತ್ತಾರಾ ಎಂದು ಟ್ರೋಲ್​ ಮಂದಿ ಪ್ರಶ್ನೆ ಮಾಡುತ್ತಿದ್ದಾರೆ.

ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 16, 2022 | 9:45 AM

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಮೊದಲಿನಂತೆ ಫಾರ್ಮ್​ನಲ್ಲಿ ಇಲ್ಲ. ಅವರು ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋಲು ಕಾಣುತ್ತಿವೆ. 2022ರ ವರ್ಷ ಅವರ ಪಾಲಿಗೆ ಆಶಾದಾಯಕವಾಗಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾಗಳೆಲ್ಲವೂ ಮಕಾಡೆ ಮಲಗುತ್ತಿವೆ. ‘ಬಚ್ಚನ್​ ಪಾಂಡೆ’, ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾಗಳ ಸೋಲಿನ ಬಳಿಕ ಇತ್ತೀಚಿಗೆ ಬಿಡುಗಡೆ ಆಗಿರುವ ‘ರಕ್ಷಾ ಬಂಧನ್​’ (Raksha Bandhan) ಸಿನಿಮಾ ಕೂಡ ಸೋತಿದೆ. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಅಕ್ಷಯ್​ ಕುಮಾರ್​ ಅವರನ್ನು ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಈ ಹಿಂದೆ ಸಿನಿಮಾಗಳು ಸೋತಾಗ ಭಾರತ ಬಿಟ್ಟು ಕೆನಡಾಗೆ (Canada) ಹೋಗಲು ಅಕ್ಷಯ್​ ಕುಮಾರ್​ ಪ್ಲ್ಯಾನ್​ ಮಾಡಿದ್ದರು. ಈಗ ಅವರಿಗೆ ಮತ್ತೆ ಅದೇ ಪರಿಸ್ಥಿತಿ ಬಂದಿದೆ ಎಂದು ನೆಟ್ಟಿಗರು ಅಣಕಿಸುತ್ತಿದ್ದಾರೆ.

ಅಕ್ಷಯ್​ ಕುಮಾರ್​ ಅವರನ್ನು ಕೆಲವರು ‘ಕೆನಡಾ ಕುಮಾರ್​’ ಎಂದು ಕರೆಯುತ್ತಾರೆ. ಅದರ ಬಗ್ಗೆ ಬಹಳ ಸಾರಿ ಚರ್ಚೆ ಆಗಿದೆ. ವೃತ್ತಿಜೀವನದಲ್ಲಿ ಅಕ್ಷಯ್​ ಕುಮಾರ್​ ಅವರು ಸತತ ಸೋಲು ಕಂಡಿದ್ದರು. 14-15 ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತಾಗ ಅವರು ಭಾರತ ಬಿಟ್ಟು ಕೆನಡಾಗೆ ತೆರಳಲು ನಿರ್ಧರಿಸಿದ್ದರು. ಅಲ್ಲಿನ ಪೌರತ್ವ ಪಡೆಯುಲ್ಲಿಯೂ ಯಶಸ್ವಿ ಆಗಿದ್ದರು. ಕಷ್ಟದ ಸಂದರ್ಭದಲ್ಲಿ ಭಾರತ ತೊರೆಯುವ ನಿರ್ಧಾರ ಮಾಡಿದ್ದಕ್ಕೆ ಅವರನ್ನು ಇಂದಿಗೂ ಜನರು ಟ್ರೋಲ್​ ಮಾಡುತ್ತಲೇ ಇದ್ದಾರೆ.

ಈಗ ಅಕ್ಷಯ್​ ಕುಮಾರ್​ ಅವರಿಗೆ ಹ್ಯಾಟ್ರಿಕ್ ಸೋಲು ಉಂಟಾಗಿದೆ. ಮಾರ್ಚ್​ 18ರಂದು ಬಿಡುಗಡೆಯಾದ ಬಚ್ಚನ್​ ಪಾಂಡೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಈ ಚಿತ್ರದಿಂದ ಅಕ್ಷಯ್​ ಕುಮಾರ್​ಗೆ ಗೆಲುವು ಸಿಗಲಿಲ್ಲ. ಆ ನಂತರ ಅವರ ಅಭಿಮಾನಿಗಳು ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ ಆ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಹಾಗಿದ್ದರೂ ಸಹ ಆ ಸಿನಿಮಾ ಸೋತಿತು.

ಇದನ್ನೂ ಓದಿ
Image
Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
Image
Akshay Kumar: ಅತಿ ಹೆಚ್ಚು ಟ್ಯಾಕ್ಸ್​ ಪಾವತಿಸಿದ ಅಕ್ಷಯ್​ ಕುಮಾರ್​; ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ
Image
Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ
Image
Akshay Kumar: ಅಕ್ಷಯ್​ ಕುಮಾರ್​ ನಕಲಿ ಮೀಸೆಯೇ ‘ಸಾಮ್ರಾಟ್​ ಪೃಥ್ವಿರಾಜ್​’ ಸೋಲಿಗೆ ಕಾರಣ? ಹೊಸ ಆರೋಪ

ಆಗಸ್ಟ್​ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್​’ ಸಿನಿಮಾದಲ್ಲಿ ಫ್ಯಾಮಿಲಿ ಕಥಾಹಂದರ ಇದೆ. ರಕ್ಷಾ ಬಂಧನ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್​ ಆಗಬಹುದು ಎಂದೇ ಎಲ್ಲರೂ ಊಹಿಸಿದ್ದರು. ಆದರೆ ನಾಲ್ಕು ದಿನಕ್ಕೆ ಈ ಚಿತ್ರ ಗಳಿಸಿದ್ದು 28 ಕೋಟಿ ರೂಪಾಯಿ ಮಾತ್ರ. ಸತತ ಸೋಲಿನ ಸುಳಿಗೆ ಸಿಲುಕಿದ ಅಕ್ಷಯ್​ ಕುಮಾರ್​ ಮತ್ತೆ ಕೆನಡಾ ಕಡೆಗೆ ಮುಖ ಮಾಡುತ್ತಾರಾ ಎಂದು ಟ್ರೋಲ್​ ಮಂದಿ ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Tue, 16 August 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ