Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

Raksha Bandhan | Akshay Kumar: ‘ರಕ್ಷಾ ಬಂಧನ್’ ಸಿನಿಮಾ ​ಆಗಸ್ಟ್​ 11ರಂದು ರಿಲೀಸ್​ ಆಗಲಿದೆ. ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಅಣ್ಣ-ತಂಗಿಯರ ಕಥೆ ಇದೆ.

Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 05, 2022 | 11:31 AM

ನಟ ಅಕ್ಷಯ್​ ಕುಮಾರ್ (Akshay Kumar)​ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಸಾಧ್ಯವಾದಷ್ಟು ಸಮಯವನ್ನು ಅವರು ಕುಟುಂಬದವರ ಜೊತೆ ಕಳೆಯಲು ಇಷ್ಟಪಡುತ್ತಾರೆ. ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡೇ ಅವರು ಸಿನಿಮಾ ಮಾಡುತ್ತಾರೆ. ಈಗ ಅವರ ಹೊಸ ಸಿನಿಮಾ ‘ರಕ್ಷಾ ಬಂಧನ್​’ (Raksha Bandhan) ಬಿಡುಗಡೆಗೆ ಸಜ್ಜಾಗಿದೆ. ಅದರ ಸಲುವಾಗಿ ಅವರು ಅನೇಕ ಕಡೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈಗ ಅವರು ‘ಸೂಪರ್​ಸ್ಟಾರ್​ ಸಿಂಗರ್​ 2(Superstar Singer 2) ರಿಯಾಲಿಟಿ ಶೋ ವೇದಿಕೆಗೆ ಅತಿಥಿಯಾಗಿ ಹೋಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಸಖತ್​ ಎಮೋಷನಲ್​ ಆಗಿ ಕಣ್ಣೀರು ಹಾಕಿದ್ದಾರೆ. ಸಹೋದರಿಯನ್ನು ನೆನಪು ಮಾಡಿಕೊಂಡು ಗಳಗಳನೆ ಅತ್ತಿದ್ದಾರೆ. ಇದರ ಪ್ರೋಮೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಾರಾಂತ್ಯದಲ್ಲಿ ಪೂರ್ತಿ ಎಪಿಸೋಡ್​ ನೋಡಲು ಅಕ್ಷಯ್​ ಕುಮಾರ್ ಅಭಿಮಾನಿಗಳು ಕಾದಿ​ದ್ದಾರೆ.

‘ರಕ್ಷಾ ಬಂಧನ್’ ಸಿನಿಮಾ ​ಆಗಸ್ಟ್​ 11ರಂದು ರಿಲೀಸ್​ ಆಗಲಿದೆ. ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಅಣ್ಣ-ತಂಗಿಯರ ಕಥೆ ಇದೆ. ನಾಲ್ವರು ತಂಗಿಯರನ್ನು ಮದುವೆ ಮಾಡಲು ಕಷ್ಟಪಡುವ ಅಣ್ಣನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಸೂಪರ್​ ಹಿಟ್​ ಆಗಿದೆ. ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ
Image
Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ
Image
Akshay Kumar: ‘ಗುಟ್ಕಾ ತಿಂದರೂ ಅಕ್ಷಯ್​ ಕುಮಾರ್​ ಇಷ್ಟೊಂದು ಫಿಟ್​’: ಲೇವಡಿ ಮಾಡಿದ ನೆಟ್ಟಿಗರು
Image
Akshay Kumar: ‘ರಾಮ್​ ಸೇತು’ ಬಗ್ಗೆ ಹಬ್ಬಿದ್ದ ಗಾಸಿಪ್​ಗೆ ಕಡೆಗೂ ಸಿಕ್ಕಿತು ಸ್ಪಷ್ಟನೆ; ಅಕ್ಷಯ್​ ಕುಮಾರ್​ ಫ್ಯಾನ್ಸ್​ಗೆ ಸಂತಸ
Image
ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’

ಸೋನಿ ಟಿವಿಯಲ್ಲಿ ‘ಸೂಪರ್​ಸ್ಟಾರ್​ ಸಿಂಗರ್​ 2’ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಅಲ್ಕಾ ಯಾಗ್ನಿಕ್​, ಹಿಮೇಶ್​ ರೇಶಮಿಯಾ, ಜಾವೇದ್​ ಅಲಿ ಅವರು ನಿರ್ಣಾಯಕರಾಗಿದ್ದಾರೆ. ‘ಇಂಡಿಯನ್​ ಐಡಲ್​ 12’ ಖ್ಯಾತಿಯ ಪವನ್​ದೀಪ್​ ರಾಜನ್​, ಅರುಣಿತಾ ಕಂಜಿಲಾಲ್​ ಮುಂತಾದವರು ಮೆಂಟರ್​ಗಳಾಗಿದ್ದಾರೆ. ಈ ವೇದಿಕೆಯಲ್ಲಿ ಅಕ್ಷಯ್​ ಕುಮಾರ್​ ಎದುರು ಸ್ಪರ್ಥಿಯೊಬ್ಬರು ಸಹೋದರಿಯ ಕುರಿತ ಗೀತೆಯೊಂದನ್ನು ಹೇಳಿದರು. ಹಿನ್ನೆಲೆಯ ಎಲ್​ಇಡಿ ಪರದೆಯಲ್ಲಿ ಅಕ್ಷಯ್​ ಕುಮಾರ್​ ಮತ್ತು ಅವರ ತಂಗಿ ಅಲ್ಕಾ ಭಾಟಿಯಾ ಫೋಟೋ, ವಿಡಿಯೋಗಳನ್ನು ಬಿತ್ತರ ಮಾಡಲಾಯಿತು. ಅದನ್ನು ನೋಡಿ ಅಕ್ಷಯ್​ ಕುಮಾರ್ ತುಂಬ ಎಮೋಷನಲ್​ ಆದರು. ಅಳು ತಡೆಯಲಾಗದೇ ಎಲ್ಲರ ಎದುರು ಕಣ್ಣೀರು ಹಾಕಿದರು.

ಈ ಎಪಿಸೋಡ್​ ಶನಿವಾರ (ಆಗಸ್ಟ್​ 6) ಮತ್ತು ಭಾನುವಾರ (ಆಗಸ್ಟ್​ 7) ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಸೋದರಿ ಬಗ್ಗೆ ಅಕ್ಷಯ್​ ಕುಮಾ​ರ್​ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ‘ರಕ್ಷಾ ಬಂಧನ್​’ ಚಿತ್ರಕ್ಕೆ ಆನಂದ್​ ಎಲ್​. ರಾಯ್​ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಭೂಮಿ ಪೆಡ್ನೇಕರ್​ ನಟಿಸಿದ್ದಾರೆ.

Published On - 11:15 am, Fri, 5 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ