‘ಬಿಗ್​ ಬಾಸ್​’ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳಲು ಹೊಸ ತಂತ್ರ; ಇನ್ಮುಂದೆ ಆಗಲ್ಲ ಸೋರಿಕೆ?

‘ಬಿಗ್​ ಬಾಸ್​’ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ 100 ದಿನ ಮನೆಗೆ ತೆರಳುವಂತಿಲ್ಲ! ಬಿಗ್ ಬಾಸ್ ಸ್ಪರ್ಧಿಗಳ ರೀತಿಯಲ್ಲೇ ಅವರು ಮನೆಯಲ್ಲಿ ಲಾಕ್ ಆಗಲಿದ್ದಾರೆ ಎನ್ನಲಾಗುತ್ತಿದೆ.

‘ಬಿಗ್​ ಬಾಸ್​’ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳಲು ಹೊಸ ತಂತ್ರ; ಇನ್ಮುಂದೆ ಆಗಲ್ಲ ಸೋರಿಕೆ?
ಬಿಗ್ ಬಾಸ್
TV9kannada Web Team

| Edited By: Rajesh Duggumane

Aug 04, 2022 | 2:39 PM

ಕಿರುತೆರೆಯಲ್ಲಿ ‘ಬಿಗ್​ ಬಾಸ್’ (Bigg Boss) ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇತರೆ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್​ಗೆ ಹೆಚ್ಚಿನ ಬೇಡಿಕೆ ಇದೆ. ಹಿಂದಿ, ಕನ್ನಡ, ತೆಲುಗಿನಲ್ಲಿ ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್​ 7’ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋನಿಂದ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳಲು ‘ಸ್ಟಾರ್​ ಮಾ’ (Star Maa) ವಾಹಿನಿ ಹೊಸ ತಂತ್ರದ ಮೊರೆ ಹೋಗಿದೆ. ಈ ಬಾರಿ ವಾಹಿನಿಯವರು ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಮಾಹಿತಿ ಮೊದಲೇ ಲೀಕ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

‘ಬಿಗ್ ಬಾಸ್​​’ನಲ್ಲಿ ಪ್ರತಿ ಭಾನುವಾರ ಒಂದು ಎಲಿಮಿನೇಷನ್ ಇರುತ್ತದೆ. ಯಾರು ಮನೆಯಿಂದ ಹೊರ ಹೋಗುತ್ತಾರೆ ಅನ್ನೋ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮೊದಲೇ ಮಾಹಿತಿ ಲೀಕ್ ಆಗುತ್ತಿದೆ. ಎಲಿಮಿನೇಷನ್ ಎಪಿಸೋಡ್ ಮೊದಲೇ ಶೂಟ್ ಆಗುವುದರಿಂದ ಯಾರು ಮನೆಯಿಂದ ಹೊರ ಹೋಗುತ್ತಾರೆ ಅನ್ನೋದು ಒಳಗಿರುವ ಸಿಬ್ಬಂದಿಗಳಿಂದಲೇ ತಿಳಿಯುತ್ತಿದೆ ಎನ್ನಲಾಗಿದೆ. ಎಲಿಮಿನೇಷನ್​ ಗುಟ್ಟು ಮೊದಲೇ ರಟ್ಟಾಗುವುದರಿಂದ ವೀಕ್ಷಕರಲ್ಲಿ ಇದ್ದ ಕುತೂಹಲ ತಣಿದು ಹೋಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಲು ‘ಸ್ಟಾರ್ ಮಾ’ ವಾಹಿನಿ ಮುಂದಾಗಿದೆ.

‘ಬಿಗ್​ ಬಾಸ್​’ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ 100 ದಿನ ಮನೆಗೆ ತೆರಳುವಂತಿಲ್ಲ! ಬಿಗ್ ಬಾಸ್ ಸ್ಪರ್ಧಿಗಳ ರೀತಿಯಲ್ಲೇ ಅವರು ಮನೆಯಲ್ಲಿ ಲಾಕ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಒಂದಷ್ಟು ಪ್ರಮಾಣದ ಲೀಕ್ ತಪ್ಪಿಸಬಹುದು ಎಂಬುದು ವಾಹಿನಿಯ ಆಲೋಚನೆ. ಇದರ ಜತೆಗೆ ಕೊವಿಡ್ ಭಯವೂ ಇದೆ. ಈಗ ತೆಗೆದುಕೊಳ್ಳುತ್ತಿರುವ ಕ್ರಮದಿಂದ ಕೊವಿಡ್ ಅಂಟದಂತೆ ನೋಡಿಕೊಳ್ಳಬಹುದು.

ಅನುಪಮಾ ಸ್ಟುಡಿಯೋಸ್​ನಲ್ಲಿ ತೆಲುಗು ಬಿಗ್ ಬಾಸ್ ನಡೆಯಲಿದೆ. ಹೊರ ಭಾಗದಿಂದ ಮನೆ ಕಾಣದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ಈ ಬಾರಿಯ ಬಿಗ್ ಬಾಸ್ ತೆಲುಗು ಮಂದಿಗೆ ಹೊಸ ರೀತಿಯಲ್ಲಿ ಇರಲಿದೆ. ಅಕ್ಕಿನೇನಿ ನಾಗಾರ್ಜುನ ಅವರು ತೆಲುಗು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ ಅವರು ಈ ಶೋ ಪ್ರೋಮೋ ಶೂಟ್ ಮಾಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಮೇಲೆ ನಡೆಯಿತು ಹಲ್ಲೆ; ಪಾಲಕರ ಎದುರೇ ಥಳಿಸಿದ ಆಗಂತುಕ

ಇದನ್ನೂ ಓದಿ

‘ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ 1’ ಆರಂಭ ಆಗುತ್ತಿದೆ. ಆಗಸ್ಟ್ 6ರಿಂದ ಪ್ರಸಾರ ಕಾಣುತ್ತಿರುವ ಈ ಶೋಗೆ ಸುದೀಪ್ ಅವರು ಸಾರಥ್ಯ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada