‘ಬಿಗ್ ಬಾಸ್’ ಮನೆಯಲ್ಲಿ ಅಗ್ನಿ ಅವಘಡ; ಸಾವು-ನೋವಿನ ಬಗ್ಗೆ ಆಗಿಲ್ಲ ವರದಿ
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳೋಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ದೇಶದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಕೂಡ ಒಂದು. ಹಲವು ಭಾಷೆಗಳಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಈ ಶೋ ನಡೆಸಿಕೊಡೋಕೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲಾಗುತ್ತದೆ. ದೇಶದಲ್ಲಿ ಬಿಗ್ ಬಾಸ್ ಆರಂಭವಾಗಿದ್ದು ಹಿಂದಿಯಲ್ಲಿ ಮೊದಲು. ಈಗಾಗಲೇ ಯಶಸ್ವಿಯಾಗಿ 15 ಸೀಸನ್ಅನ್ನು ಈ ರಿಯಾಲಿಟಿ ಪೂರ್ಣಗೊಳಿಸಿದೆ. ಇತ್ತೀಚೆಗಷ್ಟೇ ಹಿಂದಿ ‘ಬಿಗ್ ಬಾಸ್’ 15ನೇ (Hindi Bigg Boss) ಸೀಸನ್ನ ಫಿನಾಲೆ ಪೂರ್ಣಗೊಂಡಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮುಂಬೈನ ಗೋರೆಗಾಂವ್ನಲ್ಲಿ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಮನೆ ಇದೆ. ಭಾನುವಾರ (ಫೆಬ್ರವರಿ 13) ಮಧ್ಯಾಹ್ನ 1 ಗಂಟೆ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ಪ್ರತಿ ಬಾರಿಯೂ ಬಿಗ್ ಬಾಸ್ ಮನೆಯನ್ನು ನಾನಾ ರೀತಿಯಲ್ಲಿ ರೂಪುಗೊಳಿಸಲಾಗುತ್ತದೆ. ಈ ಬಾರಿಯ ಹಿಂದಿ ಬಿಗ್ ಬಾಸ್ ಕಾಡಿನ ಥೀಮ್ನಲ್ಲಿ ಮೂಡಿ ಬಂದಿತ್ತು. ಇಡೀ ಮನೆಯಲ್ಲಿ ಕಾಡಿನ ಮಾದರಿಯಲ್ಲೇ ಗಿಡಗಳನ್ನು ಬೆಳೆಸಲಾಗಿತ್ತು. ಬಿಗ್ ಬಾಸ್ ಪೂರ್ಣಗೊಂಡು 15 ದಿನದ ಒಳಗೆ ಬಿಗ್ ಬಾಸ್ ಮನೆಯಲ್ಲಿ ಅಗ್ನಿ ದುರಂತ ನಡೆದಿದೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳೋಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
View this post on Instagram
ತೇಜಸ್ವಿ ಪ್ರಕಾಶ್ ವಿನ್ನರ್:
ಹಲವು ರೀತಿಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್ ಅವರು ‘ಬಿಗ್ ಬಾಸ್ 15’ರ ವಿನ್ನರ್ ಆಗಿ ಹೊರಹೊಮ್ಮಿದ್ದರು. ಅವರು ವಿನ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯಬಹುದು ಎಂದು ಅನೇಕರು ಅಂದಾಜಿಸಿದ್ದರು. ಆದರೆ ಆ ಲೆಕ್ಕಾಚಾರ ಉಲ್ಟಾ ಆಗಿತ್ತು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಳು. ಪ್ರತೀಕ್ ಸೆಹಜ್ಪಾಲ್ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಸಲ್ಮಾನ್ ಖಾನ್ ಅವರು ತೇಜಸ್ವಿ ಪ್ರಕಾಶ್ ಅವರ ಕೈ ಎತ್ತುವ ಮೂಲಕ ಅವರೇ ವಿನ್ನರ್ ಎಂಬುದನ್ನು ಘೋಷಿಸಿದರು. ಬರೋಬ್ಬರಿ 40 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತೇಜಸ್ವಿ ಪ್ರಕಾಶ್ ಪಡೆದಿದ್ದಾರೆ. ಜ.30ರ ರಾತ್ರಿ ಅದ್ದೂರಿಯಾಗಿ ಬಿಗ್ ಬಾಸ್ 15ನೇ ಸೀಸನ್ ಫಿನಾಲೆ ಕಾರ್ಯಕ್ರಮ ನಡೆದಿತ್ತು.
ಇದನ್ನೂ ಓದಿ: ‘ನೀಲಿಚಿತ್ರ ಅತಿಯಾಗಿ ನೋಡುವವರಿಗೆ ಕಿಸ್ ಮಾಡೋಕೆ ಬರಲ್ಲ’; ಬಿಗ್ ಬಾಸ್ ಸ್ಪರ್ಧಿಯ ವಿಚಿತ್ರ ಹೇಳಿಕೆ
ಮುಂಬೈ: ಟಾರ್ಡಿಯೋದ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ; ಏಳು ಜನರ ದುರ್ಮರಣ
Published On - 8:03 pm, Sun, 13 February 22