‘ನೀಲಿಚಿತ್ರ ಅತಿಯಾಗಿ ನೋಡುವವರಿಗೆ ಕಿಸ್​ ಮಾಡೋಕೆ ಬರಲ್ಲ’; ಬಿಗ್​ ಬಾಸ್​ ಸ್ಪರ್ಧಿಯ ವಿಚಿತ್ರ ಹೇಳಿಕೆ

ಸಲ್ಮಾನ್​ ಖಾನ್​ ಅವರನ್ನು ಕಟುವಾಗಿ ಟೀಕಿಸಿದ್ದರು ಸೋಫಿಯಾ. ಅರ್ಮಾನ್​ ಕೊಹ್ಲಿ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಸೋಫಿಯಾ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.   

‘ನೀಲಿಚಿತ್ರ ಅತಿಯಾಗಿ ನೋಡುವವರಿಗೆ ಕಿಸ್​ ಮಾಡೋಕೆ ಬರಲ್ಲ’; ಬಿಗ್​ ಬಾಸ್​ ಸ್ಪರ್ಧಿಯ ವಿಚಿತ್ರ ಹೇಳಿಕೆ
ಸೋಫಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 12, 2022 | 2:50 PM

ಬಿಗ್​ ಬಾಸ್​ನಲ್ಲಿ (Bigg Boss)ಪಾಲ್ಗೊಂಡ ಅನೇಕರು ದೊಡ್ಮನೆಯಲ್ಲಿ ಸಾಕಷ್ಟು ವಿವಾದ ಮಾಡಿಕೊಂಡಿದ್ದಿದೆ. ಮನೆಯಿಂದ ಹೊರ ಬಂದ ನಂತರದಲ್ಲೂ ಕೆಲವರು ಸುದ್ದಿಯಲ್ಲಿರೋಕೆ ಬಯಸುತ್ತಾರೆ. ಇದಕ್ಕಾಗಿ ಚಿತ್ರ ವಿಚಿತ್ರ ಹೇಳಿಕೆ ನೀಡಿ ಸುದ್ದಿಯಾಗುತ್ತಾರೆ. ನಟಿ ಸೋಫಿಯಾ ಹಯಾತ್ (Sofia Hayat)​ ಕೂಡ ಇದೇ ಸಾಲಿಗೆ ಸೇರುತ್ತಾರೆ. ಅವರು ಸಲ್ಮಾನ್​ ಖಾನ್ (Salman Khan)​ ಸೇರಿ ಅನೇಕರ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಈಗ ಅವರು ನೀಡಿರುವ ವಿಚಿತ್ರ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ. ಅತಿಯಾಗಿ ನೀಲಿಚಿತ್ರ ವೀಕ್ಷಣೆ ಮಾಡುವವರಿಗೆ ಸರಿಯಾಗಿ ಕಿಸ್​ ಮಾಡೋಕೆ ಬರುವುದಿಲ್ಲ ಎಂದು ಸೋಫಿಯಾ ಹೇಳಿಕೆ ನೀಡಿದ್ದಾರೆ.  

ಸೋಫಿಯಾ ಈ ಮೊದಲು ಸಲ್ಮಾನ್​ ಖಾನ್​ ವಿರುದ್ಧ ಟೀಕೆ ಮಾಡಿದ್ದರು. ಸಲ್ಮಾನ್​ ಖಾನ್​ ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯನ್ನೂ ಸಲ್ಮಾನ್​ ಖಾನ್​ ಎದುರಿಸಿದರು. ರಾಜಸ್ಥಾನದ ಸೆಷನ್ಸ್ ನ್ಯಾಯಾಲಯವು ಸಲ್ಲು​ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಅವರನ್ನು ಕಟುವಾಗಿ ಟೀಕಿಸಿದ್ದರು ಸೋಫಿಯಾ. ಅರ್ಮಾನ್​ ಕೊಹ್ಲಿ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಸೋಫಿಯಾ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.

ಫಿಲ್ಮಿಬೀಟ್​ ಇಂಗ್ಲಿಷ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನಗೆ ಆಗಿನ್ನೂ 18 ವರ್ಷ. ನನ್ನ ತರಗತಿಯಲ್ಲಿರುವ ಹುಡುಗ ನನಗೆ ಕಿಸ್ ಮಾಡಿದ್ದ. ಅವನು ನನ್ನ ಹತ್ತಿರ ಬಂದ. ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ನಾವು ಏನು ಮಾಡುತ್ತಿದ್ದೇವೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಆದಾಗ್ಯೂ, ಆತ ಮುತ್ತುಕೊಟ್ಟ. ನನಗೆ ಇದು ಇಷ್ಟವಾಗುವುದಿಲ್ಲ ಎನ್ನುವುದು ಗೊತ್ತಾಗಿತ್ತು. ನಾನು ಗೊಂದಲದಲ್ಲಿದೆ. ಆದರೆ, ಆತ ತುಂಬಾನೆ ಕೆಟ್ಟದಾಗಿ ಕಿಸ್​ ಮಾಡಿದ್ದ. ಅದು ನನಗೆ ಈಗಲೂ ನೆನಪಿದೆ’ ಎಂದಿದ್ದಾರೆ ಸೋಫಿಯಾ.

‘ಈ ಘಟನೆ ನಡೆದ ಬಳಿಕ ಮತ್ತೋರ್ವ ಹುಡುಗ ಸಿಕ್ಕಿದ್ದ. ಆತ ಕಿಸ್​ ಮಾಡುವ ವಿಧಾನ ತುಂಬಾನೇ ಸ್ವೀಟ್​ ಆಗಿತ್ತು. ಮುತ್ತು ಕೊಡುವಾಗ ಪ್ರೀತಿ ಇರಬೇಕು. ಅನೇಕ ಪುರುಷರಿಗೆ ಕಿಸ್​ ಮಾಡೋಕೆ ಬರಲ್ಲ. ಇದಕ್ಕೆ ಅವರು ಹೆಚ್ಚು ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡೋದು ಕಾರಣ ಇರಬಹುದು’ ಎನ್ನುತ್ತಾರೆ ಸೋಫಿಯಾ.

‘ತೃಷೆಯ ಉದ್ದೇಶ ಇಟ್ಟುಕೊಂಡು ಕಿಸ್​ ಮಾಡಿದರೆ ಅದು ಉತ್ತಮ ಕಿಸ್​ ಆಗಿರುವುದಿಲ್ಲ. ಕ್ವೀನ್​ಗೆ ನಾನು ಮುತ್ತು ಕೊಡುತ್ತಿದ್ದೇನೆ ಎಂದು ಭಾವಿಸಿ ಕಿಸ್​ ಮಾಡಿದರೆ ಆಕೆ ನಿಜಕ್ಕೂ ರಾಣಿ ಎನ್ನುವ ಭಾವನೆ’ ಬರುತ್ತದೆ ಎಂದಿದ್ದಾರೆ ಸೋಫಿಯಾ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಅವರ ಹೇಳಿಕೆಯನ್ನು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಅವರ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಸೋಫಿಯಾ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 2017ರಲ್ಲಿ ತೆರೆಗೆ ಬಂದ ‘ಅಕ್ಸರ್​ 2’ ಅವರ ಕೊನೆಯ ಸಿನಿಮಾ.

ಇದನ್ನೂ ಓದಿ: ಹಿಂದೂ ದೇವರಿಗೆ ಅವಹೇಳನ ಮಾಡಿದ ಆರೋಪ; ಬಿಗ್​ ಬಾಸ್​ ಕೊನೆಯ ಸೀಸನ್​ನ ಸ್ಪರ್ಧಿ ಅರೆಸ್ಟ್​

Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್​ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ