‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಮೇಲೆ ನಡೆಯಿತು ಹಲ್ಲೆ; ಪಾಲಕರ ಎದುರೇ ಥಳಿಸಿದ ಆಗಂತುಕ

ಆಸ್ಪತ್ರೆಯಿಂದ ಹೊರ ಬರುವಾಗ ವ್ಯಕ್ತಿಯೋರ್ವ ಎದುರಾಗಿದ್ದಾನೆ. ಏಕಾಏಕಿ ಪ್ರಿಯಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಪ್ರಿಯಾಂಕ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ.

‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಮೇಲೆ ನಡೆಯಿತು ಹಲ್ಲೆ; ಪಾಲಕರ ಎದುರೇ ಥಳಿಸಿದ ಆಗಂತುಕ
ಪ್ರಿಯಾಂಕ್
TV9kannada Web Team

| Edited By: Rajesh Duggumane

Aug 03, 2022 | 2:37 PM

ನಟ ಹಾಗೂ ಹಿಂದಿ ‘ಬಿಗ್ ಬಾಸ್’ (Bigg Boss) ಮಾಜಿ ಸ್ಪರ್ಧಿ ಪ್ರಿಯಾಂಕ್ ಶರ್ಮಾ (Priyank Sharma) ಅವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ. ತಂದೆ-ತಾಯಿ ಎದುರೇ ಪ್ರಿಯಾಂಕ್ ಅವರನ್ನು ಥಳಿಸಲಾಗಿದೆ. ನಂತರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಅವರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ ಅನ್ನೋದು ಸಮಾಧಾನಕರ ವಿಚಾರ. ಜುಲೈ 30ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಾಂಕ್ ಶರ್ಮಾ ಅವರು ತಾಯಿ ಜತೆ ಘಜಿಯಾಬಾದ್ ಆಸ್ಪತ್ರೆಗೆ ತೆರಳಿದ್ದರು. ಅವರ ತಾಯಿಗೆ ಚೆಕಪ್ ಮಾಡಿಸುವುದಿತ್ತು. ಪ್ರಿಯಾಂಕ್ ಅವರ ತಂದೆ ಕೂಡ ಇವರ ಜತೆ ಆಗಮಿಸಿದ್ದರು. ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಹೊರ ಬರುವಾಗ ವ್ಯಕ್ತಿಯೋರ್ವ ಎದುರಾಗಿದ್ದಾನೆ. ಏಕಾಏಕಿ ಪ್ರಿಯಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಪ್ರಿಯಾಂಕ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಬಗ್ಗೆ ಪ್ರಿಯಾಂಕ್ ಅವರು ಇಟೈಮ್ಸ್ ಜತೆ ಮಾತನಾಡಿದ್ದಾರೆ.

‘ಏಕಾಏಕಿ ವ್ಯಕ್ತಿಯೋರ್ವ ಎಕ್ಸಿಟ್ ಗೇಟ್​ ಬಳಿ ಬಂದ. ನನಗೆ ಹೊಡೆಯೋಕೆ ಆರಂಭಿಸಿದ. ನಾನು ಆತನ ಕೈ ಹಿಡಿದು ತಳ್ಳಿದೆ. ಆಸ್ಪತ್ರೆಯ ಸಿಬ್ಬಂದಿ ಬಂದು ನನ್ನನ್ನು ಕಾಪಾಡಿದರು. ನಾನು ಅವರಿಗೆ ಆಭಾರಿ ಆಗಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಪರಾರಿಯಾಗಿದ್ದಾನೆ. ಆ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿತ್ತು’ ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ  ಪ್ರಿಯಾಂಕ್.

ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಾಂಕ್ ಅವರು ಕೌಶಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ‘ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸುತ್ತಿದ್ದೇವೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಶೀಘ್ರವೇ ಬಂಧಿಸುತ್ತೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗಸ್ಟ್ 2ರಂದು ಪ್ರಿಯಾಂಕ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’ ಕುರಿತು ಸುದ್ದಿಗೋಷ್ಠಿ; ಸುದೀಪ್​ ಏನಂದ್ರು? ಇಲ್ಲಿದೆ ವಿಡಿಯೋ

ಇದನ್ನೂ ಓದಿ

ಎಂಟಿವಿ ‘ಸ್ಪ್ಲಿಟ್ಸ್​​ವಿಲ್ಲಾ’ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಿಯಾಂಕ್ ಖ್ಯಾತಿ ಪಡೆದರು. ನಂತರ ‘ಬಿಗ್ ಬಾಸ್ 11’ಗೂ ಸ್ಪರ್ಧಿ ಆಗಿ ತೆರಳಿದರು. ಕೆಲ ವೆಬ್​ ಸೀರಿಸ್​ಗಳಲ್ಲೂ ಅವರು ನಟಿಸಿದ್ದಾರೆ. ಅವರ ಮೇಲೆ ಹಲ್ಲೆ ಆಗಿದ್ದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada