ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗಲೇ ಕರಣ್​ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್​ ನಡುವೆ ಪ್ರೀತಿ ಚಿಗುರಿತ್ತು. ಈಗ ತಮ್ಮ ಪ್ರೇಯಸಿಯ ಪರವಾಗಿ ಕರಣ್​ ಬ್ಯಾಟ್​ ಬೀಸಿದ್ದಾರೆ.

ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ
ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on:Feb 04, 2022 | 9:58 AM

ಹಿಂದಿ ಕಿರುತೆರೆಯ ಖ್ಯಾತ ನಟಿ ತೇಜಸ್ವಿ ಪ್ರಕಾಶ್​ (Tejasswi Prakash) ಅವರು ‘ಹಿಂದಿ ಬಿಗ್​ ಬಾಸ್​ 15’ರ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಜ.30ರ ರಾತ್ರಿ ನಡೆದ ಅದ್ದೂರಿ​ ಫಿನಾಲೆಯಲ್ಲಿ ಅವರು ವಿನ್ನರ್​ ಪಟ್ಟ ಪಡೆದುಕೊಂಡರು. ಅವರು ಬಿಗ್​ ಬಾಸ್​ ವಿನ್ನರ್​ (Bigg Boss 15 winner) ಆಗುವುದಕ್ಕೂ ಮುನ್ನವೇ ಅವರ ಜೊತೆ ಒಂದು ಒಪ್ಪಂದ ನಡೆದಿತ್ತು. ಏನದು? ಬಹುನಿರೀಕ್ಷಿತ ‘ನಾಗಿನ್​ 6’ (Naagin 6) ಧಾರಾವಾಹಿಗೆ ತೇಜಸ್ವಿ ಪ್ರಕಾಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ತೇಜಸ್ವಿ ಪ್ರಕಾಶ್ ಅವರು ಬಿಗ್​ ಬಾಸ್​ ಮನೆಯೊಳಗೆ ಇದ್ದಾಗಲೇ ಈ ಆಯ್ಕೆ ಪ್ರಕ್ರಿಯೆ ನಡೆದಿತ್ತು! ಹಾಗಾಗಿ ಅವರು ಬಿಗ್​ ಬಾಸ್​ ಗೆಲ್ಲುವುದಕ್ಕೂ, ‘ನಾಗಿನ್​ 6’ ಧಾರಾವಾಹಿಗೆ ಆಯ್ಕೆ ಆಗುವುದಕ್ಕೂ ಏನೋ ಲಿಂಕ್​ ಇದೆ ಎಂಬುದು ಕೆಲವರ ಅನುಮಾನ. ಆ ಕುರಿತು ಬಿಗ್​ ಬಾಸ್​ ಸ್ಪರ್ಧಿ ಕರಣ್​ ಕುಂದ್ರಾ ಮಾತನಾಡಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮದ ಪಾರದರ್ಶಕತೆ ಬಗ್ಗೆ ಕೆಲವರಿಗೆ ಮೊದಲಿನಿಂದಲೂ ಅನುಮಾನ ಇದೆ.

ಪ್ರತಿ ಬಾರಿ ಬಿಗ್​ ಬಾಸ್​ ವಿನ್ನರ್​ ಹೆಸರು ಘೋಷಣೆ ಆದಾಗ ಜನರಿಗೆ ಒಂದಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಪ್ರೇಕ್ಷಕರ ವೋಟ್​ ಮಾತ್ರವಲ್ಲದೇ ಇನ್ನೂ ಅನೇಕ ಕಾರಣಗಳಿಂದಾಗಿ ವಿನ್ನರ್​ ಯಾರು ಎಂಬುದು ನಿರ್ಧಾರ ಆಗುತ್ತದೆ ಎಂಬ ಅನುಮಾನ ಪ್ರತಿ ಸೀಸನ್​ನಲ್ಲೂ ವ್ಯಕ್ತವಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆದರೆ ಆ ಅನುಮಾನವನ್ನು ಕರಣ್​ ಕುಂದ್ರಾ ತಳ್ಳಿ ಹಾಕಿದ್ದಾರೆ. ಆ ರೀತಿ ಶಂಕೆ ವ್ಯಕ್ತಪಡಿಸುವುದು ನಾನ್​-ಸೆನ್ಸ್​ ಎಂದು ಅವರು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗಲೇ ಕರಣ್​ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್​ ನಡುವೆ ಪ್ರೀತಿ ಚಿಗುರಿತ್ತು. ತೇಜಸ್ವಿ ಪ್ರಕಾಶ್​ ವಿನ್ನರ್​ ಆಗಿ ಹೊರಹೊಮ್ಮಿದರೆ, ಮೂರನೇ ಸ್ಥಾನಕ್ಕೆ ಕರಣ್​ ತೃಪ್ತಿಪಟ್ಟುಕೊಂಡರು. ತಮ್ಮ ಪ್ರೇಯಸಿಯ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಕರಣ್​ ತಿರುಗೇಟು ನೀಡಿದ್ದಾರೆ. ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

‘ಲಾಬಿ ನಡೆದಿದೆ ಎಂಬುದೆಲ್ಲ ಬರೀ ನಾನ್​ ಸೆನ್ಸ್​ ಅಂತ ನನಗೆ ಅನಿಸುತ್ತದೆ. ನನ್ನನ್ನು ಮತ್ತು ಪ್ರತೀಕ್​ ಸೆಹಜ್ಪಾಲ್​ ಅವರನ್ನು ಅನೇಕ ಜನರು ಇಷ್ಟಪಟ್ಟರು ಮತ್ತು ಬೆಂಬಲ ನೀಡಿದರು. ತೇಜಸ್ವಿ ಗೆಲ್ಲಲಿ ಎಂದು ಬಿಗ್​ ಬಾಸ್​ ಮನೆಯಲ್ಲಿ ಇರುವ ಯಾರೂ ಬಯಸಿರಲಿಲ್ಲ. ಆದರೆ ಆಕೆ ಗೆಲ್ಲಲಿ ಎಂದು ಜನರು ಬಯಸಿದರು. ಅದಕ್ಕಾಗಿಯೇ ವೋಟ್​ ಮಾಡಿದರು. ವೋಟ್​ಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಫಲಿತಾಂಶವನ್ನು ಬದಲಿಸಲು ಸಾಧ್ಯವಿಲ್ಲ. ಅಂಥದ್ದೆಲ್ಲ ನಡೆಯುವುದಿಲ್ಲ’ ಎಂದು ಕರಣ್​ ಕುಂದ್ರಾ ಹೇಳಿದ್ದಾರೆ.

ಇದನ್ನೂ ಓದಿ:

Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?

‘ಬಿಗ್​ ಬಾಸ್​ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು

Published On - 9:58 am, Fri, 4 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ