‘ತಾಪ್ಸಿ ಪನ್ನುಗಿಂತ ನನ್ನ ಸ್ತ* ದೊಡ್ಡದಿದೆ’; ವೈರಲ್ ಆಯ್ತು ಸ್ಟಾರ್ ಡೈರೆಕ್ಟರ್ ಹೇಳಿಕೆ

2018ರಲ್ಲಿ ತೆರೆಗೆ ಬಂದ ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಆದ ‘ಮೈರೇಜ್’ ಚಿತ್ರದ ರಿಮೇಕ್ ‘ದೊಬಾರಾ’. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ಅನುರಾಗ್ ಕಶ್ಯಪ್ ಬಂಡವಾಳ ಹೂಡಿದ್ದಾರೆ.

‘ತಾಪ್ಸಿ ಪನ್ನುಗಿಂತ ನನ್ನ ಸ್ತ* ದೊಡ್ಡದಿದೆ’; ವೈರಲ್ ಆಯ್ತು ಸ್ಟಾರ್ ಡೈರೆಕ್ಟರ್ ಹೇಳಿಕೆ
ಅನುರಾಗ್​-ತಾಪ್ಸಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 16, 2022 | 6:20 PM

ಅನುರಾಗ್ ಕಶ್ಯಪ್ (Anurag Kashyap) ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ಚಿತ್ರಗಳನ್ನು ನಿರ್ದೇಶಿಸಿ ಅವರು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ‘ದೊಬಾರಾ’ ಸಿನಿಮಾ ಆಗಸ್ಟ್​ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ತಾಪ್ಸಿ ಪನ್ನು (Taapsee Pannu) ಅವರು ನಾಯಕಿ . ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅನುರಾಗ್ ಹಾಗೂ ತಾಪ್ಸಿ ಬ್ಯುಸಿ ಆಗಿದ್ದಾರೆ. ಈ ವೇಳೆ ಅನುರಾಗ್ ಹೇಳಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ.

2018ರಲ್ಲಿ ತೆರೆಗೆ ಬಂದ ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಆದ ‘ಮೈರೇಜ್’ ಚಿತ್ರದ ರಿಮೇಕ್ ‘ದೊಬಾರಾ’. ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ಅನುರಾಗ್ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಅವರು ಸಿನಿಮಾ ಪ್ರಚಾರದಲ್ಲಿ ಭಾಗಿ ಆದ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ರಣವೀರ್ ಸಿಂಗ್ ಅವರ ನ್ಯೂಡ್ ಫೋಟೋಶೂಟ್ ಬಗ್ಗೆಯೂ ಅನುರಾಗ್ ಕಶ್ಯಪ್ ಕಮೆಂಟ್ ಮಾಡಿದ್ದಾರೆ.

‘ನಾನು ಕೂಡ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿ ಮಾಡುವ ಫೋಟೋಶೂಟ್ ಮಾಡಬೇಕು ಎಂದುಕೊಂಡಿದ್ದೆ. ಆದರೆ, ನನಗೆ ದೊಡ್ಡ ಹೊಟ್ಟೆ ಇದೆ. ಹೀಗಾಗಿ ಅದು ಸಾಧ್ಯವಿಲ್ಲ’ ಎಂದಿದ್ದಾರೆ ಅನುರಾಗ್ ಕಶ್ಯಪ್. ಈ ವಿಚಾರ ಕೇಳಿ ಪಕ್ಕದಲ್ಲೇ ಕುಳಿತಿದ್ದ ತಾಪ್ಸಿ ಪನ್ನು ಅವರು ‘ಹಾರರ್ ಶೋ’ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅನುರಾಗ್ ಫನ್ನಿ ಆಗಿ ಉತ್ತರಿಸಿದ್ದಾರೆ. ‘ತಾಪ್ಸಿಗೆ ಅಭದ್ರತೆ ಕಾಡುತ್ತಿದೆ. ಅವರಿಗಿಂತ ನನಗೆ ದೊಡ್ಡ ಸ್ತನ ಇದೆ ಎಂಬ ಕಾರಣಕ್ಕೆ ತಾಪ್ಸಿಗೆ ನನ್ನ ಬಗ್ಗೆ ಅಸೂಯೆ ಭಾವನೆ ಇದೆ’ ಎಂದು ನಕ್ಕಿದ್ದಾರೆ ಅನುರಾಗ್​. ಈ ಜೋಕ್​ಗೆ ತಾಪ್ಸಿ ಕೂಡ ನಕ್ಕಿದ್ದಾರೆ.

ಇದನ್ನೂ ಓದಿ
Image
‘ಸಿಂಗಾರ ಸಿರಿಯೆ..’ ಹಾಡಿಗೆ ತಲೆದೂಗಿದ ಪ್ರೇಕ್ಷಕರು; ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರಕ್ಕೆ ಸಿಕ್ತು ಮೈಲೇಜ್
Image
Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ
Image
Taapsee Pannu: ‘ನನ್ನ ಲೈಂಗಿಕ ಜೀವನ ಇಂಟರೆಸ್ಟಿಂಗ್​ ಆಗಿಲ್ಲ, ಹಾಗಾಗಿ ಕರಣ್​ ನನ್ನ ಕರೆದಿಲ್ಲ’: ತಾಪ್ಸಿ ಪನ್ನು ನೇರ ಮಾತು
Image
Shabaash Mithu Trailer: ಶಭಾಷ್ ಮಿಥು ಸಿನಿಮಾದ ಟ್ರೇಲರ್ ಬಿಡುಗಡೆ; ಮಿಥಾಲಿ ರಾಜ್ ಬಯೋಪಿಕ್​ನಲ್ಲಿ ಮಿಂಚಿದ ತಾಪ್ಸಿ

ಇದನ್ನೂ ಓದಿ: Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ

‘ರಣವೀರ್ ಸಿಂಗ್ ಅವರು ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದು ಮಾತ್ರವಲ್ಲ, ನನ್ನ ಆತ್ಮಸ್ಥೈರ್ಯವನ್ನು ಅವರು ಬ್ರೇಕ್ ಮಾಡಿದ್ದಾರೆ. ಅದನ್ನು ಮರಳಿ ಪಡೆಯುವುದು ಹೇಗೆ? ಈ ಫೋಟೋ ನೋಡಿ ದೇಶದ ಪ್ರತಿಯೊಬ್ಬ ಪುರುಷನೂ ಫ್ರಸ್ಟ್ರೇಟ್ ಆಗಿದ್ದಾರೆ. ಈ ಕಾರಣಕ್ಕೆ ರಣವೀರ್ ಸಿಂಗ್ ಮೇಲೆ ದಾಳಿ ಮಾಡುತ್ತಿದ್ದಾರೆ’ ಎಂದಿದ್ದಾರೆ ಅನುರಾಗ್.

Published On - 5:29 pm, Tue, 16 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ