ಸಂಕಷ್ಟದಲ್ಲಿರುವ ಆಮಿರ್​ ಖಾನ್​ರನ್ನು ಮತ್ತಷ್ಟು ತಿವಿದ ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

‘ಲಾಲ್ ಸಿಂಗ್ ಚಡ್ಡಾ’ ಬೈಕಾಟ್ ಮಾಡುವ ವಿಚಾರದಲ್ಲಿ ಚಿತ್ರದ ನಾಯಕ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಅಸಮಾಧಾನ ಹೊರಹಾಕಿದ್ದರು. ಈಗ ಆಮಿರ್ ಹಾಗೂ ಕರೀನಾ ಹೇಳಿಕೆಗೆ ವಿವೇಕ್ ತಿರುಗೇಟು ನೀಡಿದ್ದಾರೆ.

ಸಂಕಷ್ಟದಲ್ಲಿರುವ ಆಮಿರ್​ ಖಾನ್​ರನ್ನು ಮತ್ತಷ್ಟು ತಿವಿದ ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ವಿವೇಕ್​-ಆಮಿರ್
TV9kannada Web Team

| Edited By: Rajesh Duggumane

Aug 17, 2022 | 5:22 PM

ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ (Laal Singh Chaddha) ಮೇಲೆ ನಿಷೇಧ ಹೇರಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅವರು ನೀಡಿದ್ದ ಅಸಹಿಷ್ಣುತೆ ಹೇಳಿಕೆಯಿಂದ ಸಿನಿಮಾಗೆ ಹೊಡೆತ ಉಂಟಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದು ಒಂದು ಕಡೆಯಾದರೆ, ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿಲ್ಲ ಎಂಬುದು ಮತ್ತೊಂದು ಕಡೆ. ಎಲ್ಲ ವಿಚಾರಗಳು ಆಮಿರ್ ಖಾನ್ ಅವರನ್ನು ಅಪ್ಸೆಟ್ ಮಾಡಿದೆ. ಈ ಸಂದರ್ಭದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಆಮಿರ್ ಖಾನ್ ಅವರನ್ನು ಮತ್ತಷ್ಟು ತಿವಿದಿದ್ದಾರೆ. ಆಮಿರ್ ವಿರುದ್ಧ ಸದಾ ಧ್ವನಿ ಎತ್ತುತ್ತಾ ಬರುತ್ತಿರುವ ವಿವೇಕ್ ಅವರು ಈಗ ಮತ್ತೊಮ್ಮೆ ಟೀಕೆ ಮಾಡಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಬೈಕಾಟ್ ಮಾಡುವ ವಿಚಾರದಲ್ಲಿ ಚಿತ್ರದ ನಾಯಕ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಅಸಮಾಧಾನ ಹೊರಹಾಕಿದ್ದರು. ಸಿನಿಮಾ ಬೈಕಾಟ್ ಮಾಡಿದರೆ ಈ ಚಿತ್ರಕ್ಕಾಗಿ ಕೆಲಸ ಮಾಡಿದ 250 ಮಂದಿಯ ಹಲವು ವರ್ಷಗಳ ಶ್ರಮ ವ್ಯರ್ಥ ಆಗಲಿದೆ ಎಂಬ ಬಗ್ಗೆ ಆತಂಕ ಹೊರಹಾಕಿದ್ದರು. ಕೆಲವರು ಬೈಕಾಟ್ ಟ್ರೆಂಡ್ ವಿರುದ್ಧ ಧ್ವನಿ ಎತ್ತಿದ್ದಾರೆ. ಇನ್ನೂ ಕೆಲವರು ಬೈಕಾಟ್ ಟ್ರೆಂಡ್​ಅನ್ನು ಬೆಂಬಲಿಸಿದ್ದಾರೆ. ಈಗ ಆಮಿರ್ ಹಾಗೂ ಕರೀನಾ ಹೇಳಿಕೆಗೆ ವಿವೇಕ್ ತಿರುಗೇಟು ನೀಡಿದ್ದಾರೆ.

‘ಒಳ್ಳೆಯ ವಿಷಯ ಹೊಂದಿರುವ ಸಣ್ಣ ಸಿನಿಮಾಗಳು ಬಾಲಿವುಡ್​ನ ಡಾನ್​ಗಳಿಂದ ಬೈಕಾಟ್​ಗೆ ಒಳಪಟ್ಟಾಗ, ಮಲ್ಟಿಪ್ಲೆಕ್ಸ್​ಗಳಿಂದ ಸಣ್ಣ ಸಿನಿಮಾಗಳನ್ನು ಕಾಲ್ಕೀಳುವಂತೆ ಮಾಡಿದಾಗ, ವಿಮರ್ಶಕರು ಸಣ್ಣ ಸಿನಿಮಾಗಳ ವಿರುದ್ಧ ಅಪಸ್ವರ ತೆಗೆದಾಗ ಯಾರಿಗೂ ಆ ಸಿನಿಮಾಗಾಗಿ ಕೆಲಸ ಮಾಡಿದ 250 ಮಂದಿ ತಂತ್ರಜ್ಞರ ನೆನಪು ಆಗಲೇ ಇಲ್ಲ’ ಎಂದು ವಿವೇಕ್​ ಟೀಕಿಸಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಜತೆ ತೆರೆ ಹಂಚಿಕೊಂಡ ಈ ನಟಿ ಈಗ ಹೇಗಾಗಿದ್ದಾರೆ ನೋಡಿ

ಇದನ್ನೂ ಓದಿ

‘ಹೊರಗಿನಿಂದ ಬಂದ ನಿರ್ದೇಶಕರು, ನಟರ ವೃತ್ತಿ ಜೀವನನವನ್ನು ಬಾಲಿವುಡ್​ನ ಕಿಂಗ್​ಗಳು ಹಾಳು ಮಾಡಿದಾಗ ಬಾಲಿವುಡ್​ನ ಯಾರೊಬ್ಬರೂ ಏಕೆ ಧ್ವನಿ ಎತ್ತಿಲ್ಲ?’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಆಮಿರ್ ಹಾಗೂ ಕರೀನಾ ಅವರನ್ನು ತಿವಿದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada