‘ಯಶ್ ಸಿನಿಮಾ ಜತೆ ರಿಲೀಸ್ ಆಗಿದ್ರೆ ಕಷ್ಟ ಇತ್ತು’; ಆಮಿರ್ಗೆ ಹಳೆ ಘಟನೆ ನೆನಪಿಸಿದ ಫ್ಯಾನ್ಸ್
‘ಕೆಜಿಎಫ್ 2’ ಹಾಗೂ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ಒಟ್ಟಿಗೆ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳು ವಿಳಂಬ ಆದ್ದರಿಂದ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ದಿನಾಂಕ ಆಗಸ್ಟ್ 11ಕ್ಕೆ ಮುಂದೂಡಲ್ಪಟ್ಟಿತ್ತು.
ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬಂತು. ಮೊದಲ ಏಳು ದಿನಗಳಲ್ಲಿ ಈ ಚಿತ್ರ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ವಿಫಲವಾಗಿದೆ. ಈ ಮೂಲಕ ಆಮಿರ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಸೋಲು ಕಂಡಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಚಿತ್ರದ ಒಟ್ಟಾರೆ ಕಲೆಕ್ಷನ್ 100 ಕೋಟಿ ರೂಪಾಯಿ ದಾಟುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈಗ ಆಮಿರ್ ಖಾನ್ಗೆ ಫ್ಯಾನ್ಸ್ ಹಳೆಯ ಘಟನೆಯನ್ನು ನೆನಪಿಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೆಜಿಎಫ್ 2’ ಹಾಗೂ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ಒಟ್ಟಿಗೆ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳು ವಿಳಂಬ ಆದ್ದರಿಂದ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ದಿನಾಂಕ ಆಗಸ್ಟ್ 11ಕ್ಕೆ ಮುಂದೂಡಲ್ಪಟ್ಟಿತ್ತು. ಆಮಿರ್ ಖಾನ್ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೊಂಡಿದ್ದರಿಂದಲೇ ಬವಾವ್ ಆದರು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಹಿಂದಿಯಲ್ಲಿ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್ 53 ಕೋಟಿ ರೂಪಾಯಿಗೂ ಅಧಿಕವಾಗಿದೆ. ವಿಚಿತ್ರ ಎಂದರೆ ಒಂದು ವಾರ ಕಳೆದರೂ ‘ಲಾಲ್ ಸಿಂಗ್ ಚಡ್ಡಾ’ ಬಳಿ ಈ ನಂಬರ್ ಕ್ರಾಸ್ ಮಾಡೋಕೆ ಆಗುತ್ತಿಲ್ಲ. ಎರಡೂ ಚಿತ್ರಗಳು ಒಟ್ಟಾಗಿ ತೆರೆಗೆ ಬಂದಿದ್ದರೆ ಆಮಿರ್ ಖಾನ್ ಸಿನಿಮಾ ಮತ್ತಷ್ಟು ಹೀನಾಯವಾಗಿ ಸೋಲುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದ ಒಂದು ವಾರದ ಬಳಿಕ ಹಿಂದಿಯಲ್ಲಿ ‘ಜರ್ಸಿ’ ಸಿನಿಮಾ ತೆರೆಗೆ ಬಂತು. ಆದರೆ, ಈ ಚಿತ್ರದ ಸೋತಿತು. ಈ ಸೋಲಿಗೆ ‘ಕೆಜಿಎಫ್ 2’ ಚಿತ್ರದ ಅಬ್ಬರ ಕೂಡ ಇದಕ್ಕೆ ಕಾರಣ ಎಂದರೆ ತಪ್ಪಾಗದು. ಆಮಿರ್ ಸಿನಿಮಾ ‘ಕೆಜಿಎಫ್ 2’ ಅಲೆಗೆ ಸಿಕ್ಕಲಿಲ್ಲ ಎಂದು ಆಮಿರ್ ಫ್ಯಾನ್ಸ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ‘ಅವನು ಬರ್ತಿದ್ದಾನೆ, ಅದೂ ಒನ್ ವೇನಲ್ಲಿ’; ಟಿವಿಯಲ್ಲಿ ಪ್ರಸಾರ ಕಾಣೋಕೆ ರೆಡಿ ಆಯ್ತು ‘ಕೆಜಿಎಫ್ 2’
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇವಲ 11.70 ಕೋಟಿ ರೂಪಾಯಿ. ಭಾನುವಾರವೂ ಈ ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಲಿಲ್ಲ. ಅನೇಕ ಕಡೆಗಳಲ್ಲಿ ಸಿನಿಮಾ ವೀಕ್ಷಣೆಗೆ ಜನ ಇಲ್ಲದೆ, ಥಿಯೇಟರ್ನಿಂದ ಸಿನಿಮಾವನ್ನು ಕಿತ್ತೆಸೆಯಲಾಗಿದೆ.