AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ

Pushpa 2 | Allu Arjun: ಮೊದಲು ನರಾಚಿಗೆ ಮಾತ್ರ ಸೀಮಿತವಾಗಿದ್ದ ರಾಕಿ ಭಾಯ್​ ಹವಾ ‘ಕೆಜಿಎಫ್​ 2’ನಲ್ಲಿ ವಿದೇಶಕ್ಕೂ ವಿಸ್ತರಿಸುತ್ತದೆ. ಅದೇ ರೀತಿಯ ಕಥೆಯ ಫಾರ್ಮ್ಯಾಟ್​ ಅನ್ನು ‘ಪುಷ್ಪ 2’ ಚಿತ್ರದಲ್ಲೂ ಪ್ರಯತ್ನಿಸಲಾಗುತ್ತಿದೆ ಎಂಬ ಗುಸುಗುಸು ಕೇಳಿಬಂದಿದೆ.

Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ
ಯಶ್​, ಅಲ್ಲು ಅರ್ಜುನ್​
TV9 Web
| Updated By: ಮದನ್​ ಕುಮಾರ್​|

Updated on: Jun 20, 2022 | 9:41 AM

Share

ಅದೇಕೋ ಗೊತ್ತಿಲ್ಲ.. ‘ಕೆಜಿಎಫ್​’ ಮತ್ತು ‘ಪುಷ್ಪ’ ಸಿನಿಮಾಗಳ ನಡುವೆ ಮೊದಲಿನಿಂದಲೂ ಹೋಲಿಕೆ ನಡೆಯುತ್ತಲೇ ಇದೆ. ಕಥೆಯ ಫಾರ್ಮ್ಯಾಟ್​ ಆಗಿರಬಹುದು ಅಥವಾ ಬಾಕ್ಸ್​ ಆಫೀಸ್​ ಗಳಿಕೆಯ ಲೆಕ್ಕಾಚಾರ ಆಗಿರಬಹುದು.. ಈ ಎರಡೂ ಸಿನಿಮಾಗಳನ್ನು ಅಕ್ಕ-ಪಕ್ಕ ಇಟ್ಟುಕೊಂಡು ಜನರು ಚರ್ಚೆ ಮಾಡುತ್ತಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸೂಪರ್​ ಹಿಟ್​ ಆದ ಬಳಿಕ ‘ಪುಷ್ಪ 2’ ಸಿನಿಮಾ ಸಹ ಅದೇ ಮಟ್ಟಕ್ಕೆ ಗೆಲ್ಲಬೇಕು ಎಂದು ತೆಲುಗು ಪ್ರೇಕ್ಷಕರು ಮತ್ತು ಅಲ್ಲು ಅರ್ಜುನ್​ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಅದಕ್ಕಾಗಿ ನಿರ್ದೇಶಕ ಸುಕುಮಾರ್​ (Sukumar) ಅವರು ಹಲವು ಬಗೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾವನ್ನು ತುಂಬ ದೊಡ್ಡದಾಗಿ ಕಟ್ಟಿಕೊಡಬೇಕು ಎಂಬ ಕಾರಣಕ್ಕೆ ಅವರು ತುಂಬ ಹೋಮ್​ ವರ್ಕ್​ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಅದರ ಜೊತೆಗೆ ಶೂಟಿಂಗ್​ ಪ್ಲ್ಯಾನ್ ಬಗ್ಗೆಯೂ ಕೆಲವು ಗುಸುಗುಸು ಕೇಳಿಬಂದಿದೆ.

ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾದ ಕೆಲವು ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಿದ್ದಾರೆ. ಅದಕ್ಕೆ ಕಾರಣ ಇಷ್ಟೇ.. ರಕ್ತಚಂದನದ ಕಳ್ಳ ಸಾಗಾಣಿಕೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಥಾನಾಯಕ ಪುಷ್ಪರಾಜ್​ ಮುಂದಿನ ದಿನಗಳಲ್ಲಿ ತಮ್ಮ ವ್ಯಾಪ್ತಿಯನ್ನು ವಿದೇಶಕ್ಕೂ ವಿಸ್ತರಿಸಿಕೊಳ್ಳುತ್ತಾನೆ. ವಿದೇಶದಲ್ಲೂ ಬೆಲೆ ಬಾಳುವ ಮರಗಳ ಸ್ಮಗ್ಲಿಂಗ್​ ಮಾಡುತ್ತಾನೆ. ಹಾಗಾಗಿ ‘ಪುಷ್ಪ 2’ ಸಿನಿಮಾದ ದೃಶ್ಯಗಳು ವಿದೇಶದಲ್ಲಿ ಚಿತ್ರೀಕರಿಸಲ್ಪಡುತ್ತವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಇಲ್ಲಿ ನೋಡಿ ಇಂಗ್ಲಿಷ್​ ಶ್ರೀವಲ್ಲಿ; ವಿದೇಶಿಗರಲ್ಲೂ ಕ್ರೇಜ್​ ಹುಟ್ಟಿಸಿದ ರಶ್ಮಿಕಾ-ಅಲ್ಲು ಅರ್ಜುನ್​ ಹಾಡು

ಇದನ್ನೂ ಓದಿ
Image
ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?
Image
ಅಬ್ಬಬ್ಬಾ.. ‘ಪುಷ್ಪ 2’ ಸಿನಿಮಾದ ನಿರ್ದೇಶನಕ್ಕೆ ಸುಕುಮಾರ್​ ಪಡೆಯುವ ಸಂಭಾವನೆ ಇಷ್ಟೊಂದಾ?
Image
‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್
Image
‘ಪುಷ್ಪ 2’ ಚಿತ್ರದ ಬಗ್ಗೆ ಮೂಡಿದೆ ಎರಡು ಅನುಮಾನ; ಇದಕ್ಕೆಲ್ಲ ಕಾರಣ ಅಲ್ಲು ಅರ್ಜುನ್​ ಹೊಸ ಲುಕ್​

‘ಕೆಜಿಎಫ್​ 2’ ಸಿನಿಮಾದ ಕಥೆಯ ಫಾರ್ಮ್ಯಾಟ್​ ಕೂಡ ಇದಕ್ಕೆ ಹೋಲಿಕೆ ಆಗುತ್ತಿದೆ ಎಂಬದು ಕೆಲವರ ಅಭಿಪ್ರಾಯ. ಮೊದಲು ನರಾಚಿಗೆ ಮಾತ್ರ ಸೀಮಿತವಾಗಿದ್ದ ರಾಕಿ ಭಾಯ್​ ಹವಾ ‘ಕೆಜಿಎಫ್​ 2’ನಲ್ಲಿ ವಿದೇಶಕ್ಕೂ ವಿಸ್ತರಿಸುತ್ತದೆ. ಅದೇ ರೀತಿಯ ಕಥೆಯ ಎಳೆಯನ್ನು ‘ಪುಷ್ಪ 2’ ಚಿತ್ರದಲ್ಲೂ ಪ್ರಯತ್ನಿಸಲಾಗುತ್ತಿದೆ ಎಂಬುದು ಕೇಳಿಬರುತ್ತಿರುವ ಗಾಸಿಪ್​. ಈ ವಿಚಾರದ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ಬಹುದೊಡ್ಡ ಗೆಲುವು ಸಿಕ್ಕಿತು. ಡಾಲಿ ಧನಂಜಯ, ಫಹಾದ್​ ಫಾಸಿಲ್​ ಅವರು ಮಾಡಿರುವ ಪಾತ್ರಗಳು ಕೂಡ ಮಿಂಚಿದವು. ಎರಡನೇ ಪಾರ್ಟ್​ನಲ್ಲಿ ಕಥೆ ಯಾವ ರೀತಿ ಮುಂದುವರಿಯುತ್ತದೆ ಎಂದು ತಿಳಿಯಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ