ಅಬ್ಬಬ್ಬಾ.. ‘ಪುಷ್ಪ 2’ ಸಿನಿಮಾದ ನಿರ್ದೇಶನಕ್ಕೆ ಸುಕುಮಾರ್​ ಪಡೆಯುವ ಸಂಭಾವನೆ ಇಷ್ಟೊಂದಾ?

ಅಬ್ಬಬ್ಬಾ.. ‘ಪುಷ್ಪ 2’ ಸಿನಿಮಾದ ನಿರ್ದೇಶನಕ್ಕೆ ಸುಕುಮಾರ್​ ಪಡೆಯುವ ಸಂಭಾವನೆ ಇಷ್ಟೊಂದಾ?
ಸುಕುಮಾರ್​, ಅಲ್ಲು ಅರ್ಜುನ್​

Director Sukumar Remuneration: ‘ಪುಷ್ಪ 2’ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇದೆ. ಅದನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲೇ ಬೇಕಾದ ಒತ್ತಡ ಸುಕುಮಾರ್​ ಅವರ ಮೇಲಿದೆ.

TV9kannada Web Team

| Edited By: Madan Kumar

May 29, 2022 | 9:47 AM

ಪ್ಯಾನ್​ ಇಂಡಿಯಾ ಸಿನಿಮಾಗಳ ಸೌಂಡು ಜೋರಾಗಿದೆ. ಇಂಥ ಸಿನಿಮಾಗಳಲ್ಲಿ ಹೀರೋಗಳ ರೀತಿ ನಿರ್ದೇಶಕರು ಕೂಡ ಶೈನ್​ ಆಗುತ್ತಾರೆ. ಆ ರೀತಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕೆಲವೇ ನಿರ್ದೇಶಕರ ಪೈಕಿ ಸುಕುಮಾರ್​ ಕೂಡ ಪ್ರಮುಖರು. ತೆಲುಗು ಚಿತ್ರರಂಗದಲ್ಲಿ ಫೇಮಸ್​ ಆಗಿದ್ದ ಸುಕುಮಾರ್​ ಅವರು ‘ಪುಷ್ಪ’ (Pushpa Movie) ಚಿತ್ರದ ಗೆಲುವಿನ ನಂತರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಕೆಲಸದ ಮೇಲೆ ದೇಶವ್ಯಾಪಿ ಇರುವ ಸಿನಿಪ್ರಿಯರಿಗೆ ಭರವಸೆ ಮೂಡಿದೆ. ಸುಕುಮಾರ್​ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ಶೀಘ್ರದಲ್ಲೇ ಅವರು ‘ಪುಷ್ಪ 2’ (Pushap 2) ಸಿನಿಮಾದ ಶೂಟಿಂಗ್​ ಆರಂಭಿಸಲಿದ್ದಾರೆ. ಅಷ್ಟರಲ್ಲಾಗಲೇ ಅವರ ಸಂಭಾವನೆ ಬಗ್ಗೆ ಒಂದಷ್ಟು ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾಗೆ ನಿರ್ದೇಶನ ಮಾಡುವುದಕ್ಕೆ ಸುಕುಮಾರ್​ ( Sukumar) ಅವರು ಬಹುಕೋಟಿ ರೂಪಾಯಿ ಸಂಬಳ ಪಡೆಯಲಿದ್ದಾರೆ ಎಂಬುದು ಖಚಿತ. ಮೂಲಗಳ ಪ್ರಕಾರ ಅವರಿಗೆ ಬರೋಬ್ಬರಿ 40 ಕೋಟಿ ರೂಪಾಯಿ ಸಂಭಾವನೆ ಸಿಗುತ್ತಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

‘ಪುಷ್ಪ’ ಸಿನಿಮಾ ಹಿಂದಿಗೂ ಡಬ್​ ಆಗಿ ತೆರೆಕಂಡಿತ್ತು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಸ್ಟಾರ್​ ಕಲಾವಿದರು ನಟಿಸಿದ್ದರು. ಇಡೀ ಸಿನಿಮಾದ ಗೆಲುವಿನಲ್ಲಿ ನಿರ್ದೇಶಕ ಸುಕುಮಾರ್​ ಅವರ ಕೊಡುಗೆಯೇ ದೊಡ್ಡದು. ಕೇವಲ ಹಿಂದಿ ವರ್ಷನ್​ನಿಂದಲೇ ಈ ಸಿನಿಮಾ ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಗಳಿಸಿತು. ಈಗ ‘ಪುಷ್ಪ’ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಅದನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲೇಬೇಕಾದ ಒತ್ತಡ ಸುಕುಮಾರ್​ ಅವರ ಮೇಲಿದೆ.

ಇದನ್ನೂ ಓದಿ: ‘ಪುಷ್ಪ’ ಚಿತ್ರಕ್ಕಾಗಿ ಶ್ರಮಿಸಿದವರಿಗೆ ನಿರ್ದೇಶಕ ಸುಕುಮಾರ್​ ಕಡೆಯಿಂದ ಬಂಪರ್​ ಗಿಫ್ಟ್​ 

ಮೊದಲ ಪಾರ್ಟ್​ಗಿಂತಲೂ ಎರಡನೇ ಪಾರ್ಟ್​ ಅನ್ನು ಹೆಚ್ಚು ಭರ್ಜರಿಯಾಗಿ ಚಿತ್ರಿಸುವ ಹೊಣೆಯನ್ನು ಸುಕುಮಾರ್​ ಹೊತ್ತುಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ 40 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದಲ್ಲಿ ಧನಂಜಯ ಪಾತ್ರದ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ನಿರ್ದೇಶಕ ಸುಕುಮಾರ್​

‘ಕೆಜಿಎಫ್​’ ಮತ್ತು ‘ಪುಷ್ಪ’ ಸಿನಿಮಾಗಳ ನಡುವೆ ಪರೋಕ್ಷವಾದ ಪೈಪೋಟಿ ಇದೆ. ‘ಕೆಜಿಎಫ್​’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಅನ್ನು ‘ಪುಷ್ಪ’ ಸಿನಿಮಾ ಮಾಡಿತ್ತು. ‘ಪುಷ್ಪ’ ಸಿನಿಮಾದ ಹಲವು ದಾಖಲೆಗಳನ್ನು ‘ಕೆಜಿಎಫ್​ 2’ ಸಿನಿಮಾ ಅಳಿಸಿ ಹಾಕಿತು. ಹಾಗಾಗಿ ಈಗ ‘ಕೆಜಿಎಫ್​ 2’ ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು ಎಂಬ ಒತ್ತಡ ‘ಪುಷ್ಪ 2’ ತಂಡದ ಮೇಲಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada