‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್

‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್
ಅಲ್ಲು ಅರ್ಜುನ್-ಯಶ್

ಕೆಜಿಎಫ್ ಎರಡನೇ ಚಾಪ್ಟರ್ ಬಾಲಿವುಡ್​ನಿಂದ 420 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಂದರೆ ಮೊದಲ ಚಾಪ್ಟರ್​ಗಿಂತ ಎರಡನೇ ಚಾಪ್ಟರ್ 10 ಪಟ್ಟು ಅಧಿಕ ಕಲೆಕ್ಷನ್ ಮಾಡಿದೆ. ಹೀಗಾಗಿ, ದಕ್ಷಿಣದ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

TV9kannada Web Team

| Edited By: Rajesh Duggumane

May 14, 2022 | 6:55 PM

‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ (KGF: Chapter 2) ಬಾಕ್ಸ್ ಆಫೀಸ್​ನಲ್ಲಿ ಸುಮಾರು 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ಸಿನಿಮಾ ಒಂದು ಈ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು. ಈ ಸಿನಿಮಾದಿಂದ ಪ್ಯಾನ್​​ ಇಂಡಿಯಾ ಸಿನಿಮಾಗಳ ಕ್ರೇಜ್ ಹೆಚ್ಚಿದೆ. ನಿರ್ಮಾಪಕರು ಪ್ಯಾನ್ ಇಂಡಿಯಾ ಸಿನಿಮಾ ತಯಾರಿಕೆಗೆ ಆದ್ಯತೆ ನೀಡೋಕೆ ಶುರು ಮಾಡಿದ್ದಾರೆ. ಈಗ ‘ಕೆಜಿಎಫ್ 2’ ಗೆಲುವಿನಿಂದ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ ಚಿತ್ರಕ್ಕೆ (Pushpa 2 Movie) ಬೂಸ್ಟ್ ಸಿಕ್ಕಿದೆ. ಈ ಸಿನಿಮಾ ಶೂಟಿಂಗ್​ ಆರಂಭಕ್ಕೂ ಮೊದಲೇ 700 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಬಗ್ಗೆ ವರದಿ ಆಗಿದೆ.

‘ಕೆಜಿಎಫ್’ ಸಿನಿಮಾದ ಬಾಲಿವುಡ್ ಬಾಕ್ಸ್ ಆಫೀಸ್​ ಕಲೆಕ್ಷನ್ ಕೇವಲ 44 ಕೋಟಿ ರೂಪಾಯಿ. ಆದರೆ, ಎರಡನೇ ಚಾಪ್ಟರ್ ಬಾಲಿವುಡ್​ನಿಂದ 420 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಂದರೆ ಮೊದಲ ಚಾಪ್ಟರ್​ಗಿಂತ ಎರಡನೇ ಚಾಪ್ಟರ್ 10 ಪಟ್ಟು ಅಧಿಕ ಕಲೆಕ್ಷನ್ ಮಾಡಿದೆ. ಹೀಗಾಗಿ, ದಕ್ಷಿಣದ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ‘ಕೆಜಿಎಫ್ 2’ ಯಶಸ್ಸು ‘ಪುಷ್ಪ’ ಸೀಕ್ವೆಲ್​ಗೆ ಸಹಕಾರಿ ಆಗುತ್ತಿದೆ.

‘ಪುಷ್ಪ’ ಸಿನಿಮಾ ಬಾಲಿವುಡ್​ನಲ್ಲಿ 100 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಟನೆ ನೋಡಿ ಬಾಲಿವುಡ್ ಮಂದಿ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಇದೆ. ಹೀಗಾಗಿ, ಚಿತ್ರದ ಬೇಡಿಕೆ ಹೆಚ್ಚುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾ ಒಟಿಟಿ ಹಕ್ಕು 300 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಹಾಗಂತ ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿಲ್ಲ. ಚಿತ್ರಮಂದಿರದಲ್ಲಿ ತೆರೆಕಂಡ ಬಳಿಕವೇ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದೆ.

ಇನ್ನು, ದಕ್ಷಿಣ ಭಾರತದ ಭಾಷೆಗಳ ಸಿನಿಮಾ ಹಕ್ಕು 200 ಕೋಟಿ ರೂಪಾಯಿಗೆ ಹಾಗೂ ಹಿಂದಿ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಇವೆಲ್ಲವೂ ಸೇರಿದರೆ ಸಿನಿಮಾದ ಬಿಸ್ನೆಸ್ 700 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ಚಿತ್ರತಂಡ ಘೋಷಿಸಿಲ್ಲ. ಸದ್ಯ, ಸಿನಿಮಾದ ಶೂಟಿಂಗ್ ಆರಂಭವಾಗಿಲ್ಲ. ಕೆಲವೇ ತಿಂಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. 2023 ಬೇಸಿಗೆಗೆ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada