ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?

TV9 Digital Desk

| Edited By: Rajesh Duggumane

Updated on: Jun 01, 2022 | 7:05 AM

‘ಪುಷ್ಪ’ ತೆರೆಗೆ ಬಂದಿದ್ದು 2021ರ ಡಿಸೆಂಬರ್​ನಲ್ಲಿ. ಈ ಕಾರಣಕ್ಕೆ ಎರಡನೇ ಪಾರ್ಟ್​ಅನ್ನು 2022ರಲ್ಲಿ ತೆರೆಗೆ ತರಲು ಆಲೋಚನೆ ಮಾಡಲಾಗಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ, ಚಿತ್ರದ ಕೆಲಸಗಳು ಆರಂಭಗೊಳ್ಳೋದು ವಿಳಂಬವಾಗಿದೆ.

ಪ್ರಶಾಂತ್ ನೀಲ್ ಜತೆ ಸ್ಪರ್ಧೆಗೆ ಇಳಿಯಲಿದ್ದಾರೆ ‘ಪುಷ್ಪ 2’ ನಿರ್ದೇಶಕ ಸುಕುಮಾರ್​; ಗೆಲ್ಲೋದು ಯಾರು?

‘ಕೆಜಿಎಫ್ 2’ ನಿರ್ದೇಶಕ (KGF: Chapter 2) ಪ್ರಶಾಂತ್ ನೀಲ್ ಹಾಗೂ ‘ಪುಷ್ಪ’ ನಿರ್ದೇಶಕ ಸುಕುಮಾರ್ (Sukumar) ಅಭಿಮಾನಿಗಳ ಮಧ್ಯೆ ಒಂದು ಸ್ಪರ್ಧೆ ಇದೆ. ‘ಕೆಜಿಎಫ್​’ಗಿಂತ 10 ಪಟ್ಟು ಹೆಚ್ಚು ‘ಪುಷ್ಪ’ ಉತ್ತಮವಾಗಿದೆ ಎನ್ನುವ ಹೇಳಿಕೆ ಈ ಸ್ಪರ್ಧೆಗೆ ಪ್ರಮುಖ ಕಾರಣ. ಆದರೆ, ‘ಪುಷ್ಪ’ ಸಿನಿಮಾ ಮಾಡಿದ ದಾಖಲೆಗಳನ್ನು ‘ಕೆಜಿಎಫ್ 2’ ಅಳಿಸಿ ಹಾಕಿದೆ. ಬಾಲಿವುಡ್​ನಲ್ಲಿ 100 ಕೋಟಿ ಗಳಿಕೆ ಮಾಡಿತ್ತು ‘ಪುಷ್ಪ’. ಇದರ ನಾಲ್ಕು ಪಟ್ಟು ಕಲೆಕ್ಷನ್ ‘ಕೆಜಿಎಫ್ 2’ನಿಂದ ಆಗಿದೆ. ಈ ಕಾರಣಕ್ಕೆ ‘ಕೆಜಿಎಫ್ 2’ ಕಲೆಕ್ಷನ್ ಹಿಂದಿಕ್ಕುವ ಸವಾಲು ‘ಪುಷ್ಪ 2’ (Puspa 2 Movie) ಗೆ ಇದೆ. ಆದರೆ, ಈ ಚಿತ್ರಕ್ಕೆ ಸ್ಪರ್ಧೆ ಒಡ್ಡೋಕೆ ‘ಸಲಾರ್’ ರೆಡಿ ಆಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

‘ಪುಷ್ಪ’ ತೆರೆಗೆ ಬಂದಿದ್ದು 2021ರ ಡಿಸೆಂಬರ್​ನಲ್ಲಿ. ಈ ಕಾರಣಕ್ಕೆ ಎರಡನೇ ಪಾರ್ಟ್​ಅನ್ನು 2022ರಲ್ಲಿ ತೆರೆಗೆ ತರಲು ಆಲೋಚನೆ ಮಾಡಲಾಗಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ನಿರ್ದೇಶಕ ಸುಕುಮಾರ್ ಅವರು ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ, ಚಿತ್ರದ ಕೆಲಸಗಳು ಆರಂಭಗೊಳ್ಳೋದು ವಿಳಂಬವಾಗಿದೆ. ಈ ಚಿತ್ರದ ಶೂಟಿಂಗ್ ಜುಲೈನಿಂದ ಆರಂಭಗೊಳ್ಳಲಿದೆ. ಈ ಕಾರಣಕ್ಕೆ 2023ರ ಬೇಸಿಗೆಗೆ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜ್ಯೂ.ಎನ್​ಟಿಆರ್ ಫಸ್ಟ್​ ಲುಕ್​ ಬಗ್ಗೆ ಹೊರಬಿತ್ತು ಅಚ್ಚರಿಯ ವಿಚಾರ; ಪ್ರಶಾಂತ್ ನೀಲ್ ಹೀಗೆ ಮಾಡಿದ್ದೇಕೆ?

ಇದನ್ನೂ ಓದಿ

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ 2021ರ ಏಪ್ರಿಲ್​ 14ರಂದು ತೆರೆಗೆ ಬರಬೇಕಿತ್ತು. ಈ ಸಂದರ್ಭದಲ್ಲಿ ‘ಕೆಜಿಎಫ್ 2’ ರಿಲೀಸ್ ಆಯಿತು. ಇನ್ನು ಕೊವಿಡ್ ಕಾರಣದಿಂದ ‘ಸಲಾರ್’ ಕೆಲಸಗಳು ವಿಳಂಬ ಆದವು. ಹೀಗಾಗಿ, 2023ರ ಏಪ್ರಿಲ್​​ಗೆ ಈ ಚಿತ್ರವನ್ನು ಬಿಡುಗಡೆ ಮಾಡಲು ಆಲೋಚನೆ ನಡೆದಿದೆ. ಈ ಎರಡೂ ಚಿತ್ರಗಳ ನಡುವೆ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ಇದೆ.

ಎರಡು ದೊಡ್ಡ ಬಜೆಟ್ ಚಿತ್ರಗಳು ಏಕ ಕಾಲಕ್ಕೆ ರಿಲೀಸ್ ಆಗದಂತೆ ನೋಡಿಕೊಳ್ಳಲು ನಿರ್ಮಾಪಕರು ಪ್ರಯತ್ನಿಸುತ್ತಾರೆ. ಆದರೆ, ಹಬ್ಬದ ಸಮಯವಾದರೆ ಒಟ್ಟೊಟ್ಟಿಗೆ ಸ್ಟಾರ್​ ನಟರ ಸಿನಿಮಾಗಳು ರಿಲೀಸ್ ಆಗುತ್ತವೆ. 2023ರ ಯುಗಾದಿ ಸಂದರ್ಭದಲ್ಲಿ ಈ ಚಿತ್ರಗಳು ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್ 2’ ಎಫೆಕ್ಟ್​; ಹೆಚ್ಚಿತು ‘ಪುಷ್ಪ 2’ ಚಿತ್ರದ ಬೇಡಿಕೆ, ಶೂಟಿಂಗ್​ಗೂ​ ಮೊದಲೇ 700 ಕೋಟಿ ರೂಪಾಯಿ ಡೀಲ್

ಒಂದೊಮ್ಮೆ 15 ದಿನಗಳ ಅಂತರದಲ್ಲಿ ಈ ಎರಡೂ ಚಿತ್ರಗಳು ತೆರೆಕಂಡರೂ ಒಂದು ಚಿತ್ರಕ್ಕೆ ಹೆಚ್ಚು ಲಾಭ ಆಗುತ್ತದೆ. ‘ಆರ್​ಆರ್​ಆರ್’ ತೆರೆಕಂಡು 20 ದಿನಗಳ ಬಳಿಕ ‘ಕೆಜಿಎಫ್ 2’ ರಿಲೀಸ್ ಆಯಿತು. ಯಶ್ ಅಬ್ಬರಕ್ಕೆ ‘ಆರ್​ಆರ್​ಆರ್’ ಕೊಂಚ ಮಂಕಾಯಿತು. ಹೀಗಾಗಿ, ‘ಪುಷ್ಪ 2’ ಮತ್ತು ಸಲಾರ್ ಕ್ಲ್ಯಾಶ್ ಕುತೂಹಲ ಮೂಡಿಸುತ್ತಿದೆ. ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ‘ಸಲಾರ್’ ಚಿತ್ರಕ್ಕೆ ಪ್ರಭಾಸ್ ಹೀರೋ. ‘ಪುಷ್ಪ 2’ಗೆ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada