AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೂ.ಎನ್​ಟಿಆರ್ ಫಸ್ಟ್​ ಲುಕ್​ ಬಗ್ಗೆ ಹೊರಬಿತ್ತು ಅಚ್ಚರಿಯ ವಿಚಾರ; ಪ್ರಶಾಂತ್ ನೀಲ್ ಹೀಗೆ ಮಾಡಿದ್ದೇಕೆ?

‘ಉಗ್ರಂ’ ಹಾಗೂ ‘ಕೆಜಿಎಫ್’ ಸರಣಿ ಮೂಲಕ ಗಮನ ಸೆಳೆದವರು ಪ್ರಶಾಂತ್ ನೀಲ್. ‘ಕೆಜಿಎಫ್ 2’ ಸಿನಿಮಾದಿಂದ ಪ್ರಶಾಂತ್ ನೀಲ್ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸ

ಜ್ಯೂ.ಎನ್​ಟಿಆರ್ ಫಸ್ಟ್​ ಲುಕ್​ ಬಗ್ಗೆ ಹೊರಬಿತ್ತು ಅಚ್ಚರಿಯ ವಿಚಾರ; ಪ್ರಶಾಂತ್ ನೀಲ್ ಹೀಗೆ ಮಾಡಿದ್ದೇಕೆ?
ಜ್ಯೂ.ಎನ್​ಟಿಆರ್​-ಪ್ರಶಾಂತ್ ನೀಲ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 20, 2022 | 8:00 PM

Share

ಜ್ಯೂ.ಎನ್​ಟಿಆರ್ (Jr.NTR) ಹಾಗೂ ಪ್ರಶಾಂತ್ ನೀಲ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಸುಳಿವು ಈ ಮೊದಲೇ ಸಿಕ್ಕಿತ್ತು. ಕಳೆದ ವರ್ಷ ಜನ್ಮದಿನದಂದು ಜ್ಯೂ.ಎನ್​ಟಿಆರ್​ಗೆ ವಿಶ್ ಮಾಡುವ ಮೂಲಕ ಪ್ರಶಾಂತ್ ನೀಲ್ (Prashanth Neel) ಈ ವಿಚಾರವನ್ನು ಖಚಿತಪಡಿಸಿದ್ದರು. ಇಂದು (ಮೇ 20) ಜ್ಯೂ.ಎನ್​ಟಿಆರ್ ಜನ್ಮದಿನ. ಈ ವಿಶೇಷ ದಿನದಂದು ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಫಸ್ಟ್​ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಸೃಷ್ಟಿಸಲಾಗಿದೆ.

‘ಉಗ್ರಂ’ ಹಾಗೂ ‘ಕೆಜಿಎಫ್’ ಸರಣಿ ಮೂಲಕ ಗಮನ ಸೆಳೆದವರು ಪ್ರಶಾಂತ್ ನೀಲ್. ‘ಕೆಜಿಎಫ್ 2’ ಸಿನಿಮಾದಿಂದ ಪ್ರಶಾಂತ್ ನೀಲ್ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ, ಅವರು ಸಲಾರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, 2023ರ ಏಪ್ರಿಲ್ ತಿಂಗಳಲ್ಲಿ ಜ್ಯೂ.ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಅಚ್ಚರಿಯ ಮಾಹಿತಿ ಒಂದು ಹೊರ ಬಿದ್ದಿದೆ.

ಇದನ್ನೂ ಓದಿ
Image
NTR31: ಜ್ಯೂ.ಎನ್​ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ; ನೀಲ್-ತಾರಕ್ ಕಾಂಬಿನೇಷನ್​ನ ಹೊಸ ಚಿತ್ರ ಅನೌನ್ಸ್​​​
Image
Bagheera Movie: ನೆರವೇರಿತು ‘ಬಘೀರಾ’ ಮುಹೂರ್ತ; ಪ್ರಶಾಂತ್ ನೀಲ್ ಕತೆಗೆ ಶ್ರೀಮುರುಳಿ ನಾಯಕ
Image
Jr NTR Birthday: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್
Image
ಲೈವ್​ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ

ಇದನ್ನೂ ಓದಿ:  ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್

ಇಂದು ರಿಲೀಸ್ ಆದ ಪೋಸ್ಟರ್​ನಲ್ಲಿ ಜ್ಯೂ.ಎನ್​ಟಿಆರ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಈ ಪೋಸ್ಟರ್ ಫೋಟೋಶೂಟ್​​​ಗೆ ಪ್ರಶಾಂತ್​ ನೀಲ್ ಬರೋಬ್ಬರಿ 31 ಕ್ಯಾಮೆರಾ ಬಳಕೆ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ಪೋಸ್ಟರ್​ ಶೂಟ್​ಗೆ ಅಷ್ಟೊಂದು ಕ್ಯಾಮೆರಾ ಬಳಕೆ ಮಾಡಿದ್ದು ಏಕೆ ಎಂಬುದು ಸದ್ಯ ಫ್ಯಾನ್ಸ್ ಮನದಲ್ಲಿ ಇರುವ ಪ್ರಶ್ನೆ.

ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ‘ಮೈತ್ರಿ ಮೂವೀ  ಮೇಕರ್ಸ್​’ ಹಾಗೂ ‘ಎನ್​ಟಿಆರ್ ಆರ್ಟ್ಸ್​’ ಒಟ್ಟಾಗಿ ಬಂಡವಾಳ ಹೂಡುತ್ತಿವೆ. ಚಿತ್ರದ ಟೈಟಲ್ ಇನ್ನೂ ಘೋಷಣೆ ಆಗಿಲ್ಲ. ತಾತ್ಕಾಲಿಕವಾಗಿ ‘ಎನ್​ಟಿಆರ್​ 31’ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ಜ್ಯೂ.ಎನ್​ಟಿಆರ್​ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು

ಕೊರಟಾಲ ಶಿವ ಹಾಗೂ ಜ್ಯೂ.ಎನ್​ಟಿಆರ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಿದೆ. ‘ಎನ್​ಟಿಆರ್30’ ಎಂದು ಈ ಚಿತ್ರವನ್ನು ಕರೆಯಲಾಗುತ್ತಿದ್ದು, ಶೀಘ್ರವೇ ಶೀರ್ಷಿಕೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಜ್ಯೂ.ಎನ್​ಟಿಆರ್​ ಜನ್ಮದಿನ ಹಿನ್ನೆಲೆಯಲ್ಲಿ ‘ಆರ್​ಆರ್​ಆರ್​’ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!