ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ ಎಂದ ನಟ ಸಾಯಿ ಕುಮಾರ್
ಕರ್ನಾಟಕದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈಗ ಸಾಯಿಕುಮಾರ್ ಅವರು ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ.
ಚಿತ್ರರಂಗಕ್ಕೂ (Cinema Industry) ರಾಜಕೀಯಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. ಅನೇಕ ಸೆಲೆಬ್ರಿಟಿಗಳು ರಾಜಕೀಯದಲ್ಲಿ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಈಗ ಬಹುಭಾಷಾ ನಟ ಸಾಯಿಕುಮಾರ್ (Sai Kumar) ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ. ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ ಸ್ಪರ್ಧೆ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈಗ ಸಾಯಿಕುಮಾರ್ ಅವರು ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ. ‘ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ ಸ್ಪರ್ಧೆ ಮಾಡುತ್ತೇನೆ. ಎಲೆಕ್ಷನ್ನಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಕೆಲಸ ಮಾಡಿಕೊಂಡು ಕ್ಯಾಂಪೇನ್ ಮಾಡುತ್ತೇನೆ. ಕಳೆದ ಬಾರಿ ಎಲೆಕ್ಷನ್ನಲ್ಲಿ ಸೋತೆ, ಏನೂ ಮಾಡಲು ಆಗುವುದಿಲ್ಲ’ ಎಂದಿದ್ದಾರೆ ನಟ ಸಾಯಿಕುಮಾರ್.
ಇದನ್ನೂ ಓದಿ: ‘ಬಾಹುಬಲಿಗೆ ಕಟ್ಟಪ್ಪ, ಕೆಜಿಎಫ್ಗೆ ಅಯ್ಯಪ್ಪ’ ಎಂದ ಸಾಯಿಕುಮಾರ್
ಸಾಯಿಕುಮಾರ್ ಅವರು ಕನ್ನಡ ಮಾತ್ರವಲ್ಲದೆ, ತೆಲುಗು ಮೊದಲಾದ ಚಿತ್ರರಂಗದಲ್ಲೂ ಫೇಮಸ್ ಆಗಿದ್ದಾರೆ. ಅವರು ಮಾಡುವ ಪೊಲೀಸ್ ಪಾತ್ರ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗುತ್ತದೆ. ಇತ್ತೀಚೆಗೆ ತೆರೆಗೆ ಬಂದ ‘ಅವತಾರ ಪುರುಷ’ ಸಿನಿಮಾದಲ್ಲಿ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ.
ಚಿತ್ರರಂಗದಲ್ಲಿ ಸಾಯಿಕುಮಾರ್ 50 ವರ್ಷ ಪೂರೈಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಕಮಲ್ ಹಾಸನ್ ಅವರಿಗೆ ಡಬ್ಬಿಂಗ್ ಮಾಡಬೇಕು ಅನ್ನೋದಷ್ಟೇ ನನ್ನ ಆಸೆ ಆಗಿತ್ತು. ‘ಪ್ರೇಮಲೋಕ’ ಸಿನಿಮಾಗೆ ತೆಲುಗಿನಲ್ಲಿ ನಾನೇ ಡಬ್ ಮಾಡಿದ್ದು. ಸದ್ಯದಲ್ಲೇ ನನ್ನ ಮಗನನ್ನು ಕನ್ನಡಕ್ಕೆ ಪರಿಚಯ ಮಾಡಿಸುತ್ತೇನೆ’ ಎಂದಿದ್ದಾರೆ ಸಾಯಿಕುಮಾರ್.
‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಬಗ್ಗೆ ಸಾಯಿಕುಮಾರ್ ಸಂತಸ ಹಂಚಿಕೊಂಡಿದ್ದಾರ. ಈ ಚಿತ್ರದ ಯಶಸ್ಸನ್ನು ಅವರು ಕೊಂಡಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Fri, 20 May 22