Bagheera Movie: ನೆರವೇರಿತು ‘ಬಘೀರಾ’ ಮುಹೂರ್ತ; ಪ್ರಶಾಂತ್ ನೀಲ್ ಕತೆಗೆ ಶ್ರೀಮುರುಳಿ ನಾಯಕ

Bagheera Movie: ನೆರವೇರಿತು ‘ಬಘೀರಾ’ ಮುಹೂರ್ತ; ಪ್ರಶಾಂತ್ ನೀಲ್ ಕತೆಗೆ ಶ್ರೀಮುರುಳಿ ನಾಯಕ
‘ಬಘೀರಾ’ ಚಿತ್ರದ ಮುಹೂರ್ತದ ಸಂದರ್ಭ
Image Credit source: Hombale Films/ Twitter

Prashanth Neel | Sriimurali: ಪ್ರಶಾಂತ್ ನೀಲ್ ಕತೆ ಬರೆದಿರುವ ‘ಬಘೀರಾ’ ಚಿತ್ರದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಶ್ರೀಮುರುಳಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

TV9kannada Web Team

| Edited By: shivaprasad.hs

May 20, 2022 | 12:55 PM

ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಯಶಸ್ಸಿನಲ್ಲಿದೆ. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಈ ಚಿತ್ರ ಒಟ್ಟಾರೆ 1200 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆ ಬರೆದಿರುವ ಈ ಚಿತ್ರದ ಗೆಲುವಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್​​ ನಿರ್ಮಾಣದ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶ್ರೀಮುರುಳಿ (Sriimurali) ನಟಿಸುತ್ತಿರುವ ‘ಬಘೀರಾ’ (Bagheera Movie) ಚಿತ್ರ ಇಂದು (ಮೇ.20) ಸೆಟ್ಟೇರಿದ್ದು, ಇದಕ್ಕೆ ಪ್ರಶಾಂತ್ ನೀಲ್ ಚಿತ್ರಕತೆ ಬರೆದಿದ್ದಾರೆ. ‘ಉಗ್ರಂ’ ನಂತರ ಪ್ರಶಾಂತ್ ನೀಲ್ ಹಾಗೂ ಶ್ರೀಮುರುಳಿ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಡಾ.ಸೂರಿ ‘ಬಘೀರಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮುಹೂರ್ತದ ಫೋಟೋಗಳನ್ನು ಹೊಂಬಾಳೆ ಫಿಲ್ಮ್ಸ್​ ಹಂಚಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್​ ಹಂಚಿಕೊಂಡ ಟ್ವೀಟ್:

ಇದನ್ನೂ ಓದಿ: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್

‘ಬಘೀರಾ’ ಚಿತ್ರಕ್ಕೆ ಶುಭಹಾರೈಸಿರುವ ಪ್ರಶಾಂತ್ ನೀಲ್, ಈ ಚಿತ್ರ ತಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚಿತ್ರವನ್ನು ಅನೌನ್ಸ್ ಮಾಡಿದ ಸಂದರ್ಭದಲ್ಲಿ ಶ್ರೀಮುರುಳಿ ಲುಕ್​ ತೆರೆದಿಡುವ ಮೊದಲ ಪೋಸ್ಟರ್​​ ಹಂಚಿಕೊಳ್ಳಲಾಗಿತ್ತು. ‘ಇಡೀ ಸಮಾಜವೇ ಕಾಡಾದಾಗ ಓರ್ವ ನ್ಯಾಯಕ್ಕಾಗಿ ಹೋರಾಡಲಿದ್ದಾನೆ’ ಎಂದು ಅದಕ್ಕೆ ಕ್ಯಾಪ್ಶನ್ ನೀಡಲಾಗಿತ್ತು. ಆ ಪೋಸ್ಟರ್ ಇಲ್ಲಿದೆ.

ಹಲವು ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾದ ‘ಹೊಂಬಾಳೆ ಫಿಲ್ಮ್ಸ್​’

ಪ್ರಸ್ತುತ ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಅನೇಕ ಸಿನಿಮಾಗಳು ತಯಾರಾಗುತ್ತಿವೆ. ಪ್ರಭಾಸ್​ ನಟನೆಯ ‘ಸಲಾರ್​’, ರಿಷಬ್​​ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್​ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಮೊದಲಾದ ಸಿನಿಮಾಗಳು ತಯಾರಾಗುತ್ತಿವೆ. ಇತ್ತೀಚೆಗೆ ಯುವರಾಜ್​ಕುಮಾರ್- ಸಂತೋಷ್ ಆನಂದ್​ರಾಮ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಇವುಗಳಲ್ಲದೇ ‘ಸೂರರೈ ಪೊಟ್ರು’ ನಿರ್ದೇಶಕಿ ಸುಧಾ ಕೊಂಗರಾ ಹಾಗೂ ಹೊಂಬಾಳೆ ಫಿಲ್ಮ್ಸ್​ ಕಾಂಬಿನೇಷನ್​ನಲ್ಲಿ ಚಿತ್ರವೊಂದು ಮೂಡಿಬರಲಿದೆ. ಅದು ನೈಜ ಘಟನೆಗಳನ್ನಾಧರಿಸಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada