‘ಉಗ್ರಂ’ ನಂತರ ಮತ್ತೆ ಒಂದಾದ್ರು ಶ್ರೀಮುರುಳಿ-ಪ್ರಶಾಂತ್​ ನೀಲ್​!

ಈ ಸಿನಿಮಾಗೆ ಬಘೀರ ಎಂದು ನಾಮಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶ್ರೀಮುರುಳಿ ಬಘೀರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್​ ಬರೆದುಕೊಂಡಿದೆ.

'ಉಗ್ರಂ' ನಂತರ ಮತ್ತೆ ಒಂದಾದ್ರು ಶ್ರೀಮುರುಳಿ-ಪ್ರಶಾಂತ್​ ನೀಲ್​!
ಬಘೀರ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 17, 2020 | 7:14 PM

ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ ಉಗ್ರಂ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಶ್ರೀಮುರುಳಿಗೆ ಈ ಚಿತ್ರ ಹೊಸ ಹುಟ್ಟು ನೀಡಿತ್ತು.  ಈಗ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕಾಗಿ ಶ್ರೀಮುರುಳಿ ಹಾಗೂ ಪ್ರಶಾಂತ್​ ನೀಲ್​ ಮತ್ತೆ ಒಂದಾಗುತ್ತಿದ್ದಾರೆ!

ಹಾಗಾದರೆ, ಶ್ರೀಮುರುಳಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರಾ? ಇಲ್ಲ, ಪ್ರಶಾಂತ್​ ನೀಲ್ ಈ ಚಿತ್ರಕ್ಕಾಗಿ​ ಕತೆ ಬರೆದಿದ್ದಾರೆ. ಇಂದು ಶ್ರೀಮುರುಳಿ ಜನ್ಮದಿನ. ಈ ವಿಶೇಷ ದಿನದಂದು ಹೊಂಬಾಳೆ ಫಿಲ್ಮ್ಸ್​ ಹೊಸ ಸಿನಿಮಾ ನಿರ್ಮಾಣದ ಘೋಷಣೆ ಮಾಡಿದೆ.

ಅಂದಹಾಗೆ, ಈ ಸಿನಿಮಾಗೆ ಬಘೀರ ಎಂದು ನಾಮಕರಣ ಮಾಡಲಾಗಿದೆ. ಇಡೀ ಸಮಾಜವೇ ಕಾಡಾದಾಗ ಓರ್ವ ನ್ಯಾಯಕ್ಕಾಗಿ ಹೋರಾಡಲಿದ್ದಾನೆ. ಈ ಸಿನಿಮಾದಲ್ಲಿ ಶ್ರೀಮುರುಳಿ ಬಘೀರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್​ ಬರೆದುಕೊಂಡಿದೆ. ವಿಜಯ್​ ಕಿರಗುಂದೂರ್​ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಡಿಆರ್​ ಸೂರಿ ಬಘೀರನಿಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಪ್ರಶಾಂತ್​ ನೀಲ್​ ಕತೆ ಬರೆದಿದ್ದಾರೆ.


ಬಘೀರ ಹೆಸರಿನ ಪಾತ್ರ ಜಂಗಲ್​ಬುಕ್​ನಲ್ಲಿ ಬರುತ್ತದೆ. ಕಪ್ಪು ಚಿರತೆಯ ಪಾತ್ರದ ಹೆಸರು ಬಘೀರ. ಇದು ಮೊಗ್ಲಿಯ ಗೆಳೆಯ. ಮೊಗ್ಲಿಗೆ ರಕ್ಷಕನಾಗಿ, ಮಾರ್ಗದರ್ಶಕನಾಗಿ ನಡೆದುಕೊಳ್ಳುತ್ತದೆ. ಈ ಪಾತ್ರಕ್ಕೂ ಸಿನಿಮಾಗೂ ಏನಾದರೂ ಸಂಬಂಧ ಇದೆಯೇ ಎನ್ನುವುದನ್ನು ತಿಳಿಯಲು ನಾವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಮದಗಜ ಟೀಸರ್ ರಿಲೀಸ್​
ಶ್ರೀಮುರುಳಿ ನಟಿಸುತ್ತಿರುವ ಮದಗಜ ಟೀಸರ್​ ಕೂಡ ಇಂದು ರಿಲೀಸ್​ ಆಗಿದೆ. ಎಸ್​​. ಮಹೇಶ್​ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಟೀಸರ್ ತುಂಬಾನೇ ಮಾಸ್​ ಆಗಿ ಮೂಡಿ ಬಂದಿದೆ.


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada