‘ಅವನು ಬರ್ತಿದ್ದಾನೆ, ಅದೂ ಒನ್ ವೇನಲ್ಲಿ’; ಟಿವಿಯಲ್ಲಿ ಪ್ರಸಾರ ಕಾಣೋಕೆ ರೆಡಿ ಆಯ್ತು ‘ಕೆಜಿಎಫ್ 2’
ಈ ಸಿನಿಮಾ ಹಿಂದಿ ಒಂದರಲ್ಲೇ 430+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈ ಮೂಲಕ ಚಿತ್ರ ಗೆದ್ದು ಬೀಗಿತು. ಸಿನಿಮಾದ ಒಟ್ಟಾರೆ ಕಲೆಕ್ಷನ್ 1250 ಕೋಟಿ ರೂಪಾಯಿ ಆಗಿದೆ. ಈಗ ಜೀ ಕನ್ನಡ ವಾಹಿನಿ ಈ ಬ್ಲಾಕ್ಬಸ್ಟರ್ ಸಿನಿಮಾ ರಿಲೀಸ್ ಮಾಡಲು ರೆಡಿ ಆಗಿದೆ.
‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಏಪ್ರಿಲ್ 14ರಂದು ತೆರೆಗೆ ಬಂದು ಧೂಳೆಬ್ಬಿಸಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 1,250 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಚಿತ್ರದ ಹೆಗ್ಗಳಿಕೆ. ಈ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಮೈಲೇಜ್ ಸಿಕ್ಕಿದೆ. ಇತ್ತೀಚೆಗೆ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಂಡಿತು. ಈಗ ಟಿವಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಪ್ರಸಾರ ಆಗೋಕೆ ರೆಡಿ ಆಗಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
‘ಕೆಜಿಎಫ್’ ಸಿನಿಮಾ 2018ರಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ಎರಡನೇ ಚಾಪ್ಟರ್ ಯಾವಾಗ ಬರಲಿದೆ ಎಂದು ಫ್ಯಾನ್ಸ್ ಕಾದಿದ್ದರು. ಮೊದಲ ಚಾಪ್ಟರ್ ತೆರೆಕಂಡ ನಾಲ್ಕು ವರ್ಷಗಳ ಬಳಿಕ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಮೊದಲ ದಿನವೇ ಹಲವು ದಾಖಲೆ ಬರೆಯಿತು. ಈ ಸಿನಿಮಾ ಹಿಂದಿ ಒಂದರಲ್ಲೇ 430+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈ ಮೂಲಕ ಚಿತ್ರ ಗೆದ್ದು ಬೀಗಿತು. ಸಿನಿಮಾದ ಒಟ್ಟಾರೆ ಕಲೆಕ್ಷನ್ 1250 ಕೋಟಿ ರೂಪಾಯಿ ಆಗಿದೆ. ಈಗ ಜೀ ಕನ್ನಡ ವಾಹಿನಿ ಈ ಬ್ಲಾಕ್ಬಸ್ಟರ್ ಸಿನಿಮಾ ರಿಲೀಸ್ ಮಾಡಲು ರೆಡಿ ಆಗಿದೆ.
ಜೀ ಕನ್ನಡ ವಾಹಿನಿ ‘ಕೆಜಿಎಫ್ 2’ ಚಿತ್ರದ ಕೆಲ ದೃಶ್ಯಗಳ ವಿಡಿಯೋವನ್ನು ಪೋಸ್ಟ್ ಮಾಡಿದೆ. ‘ಅವನು ಬರ್ತಿದ್ದಾನೆ.. ಅದೂ ಒನ್ ವೇಯಲ್ಲಿ. ರಾಕಿಂಗ್ ಸ್ಟೈಲಲ್ಲಿ’ ಎಂದು ಕ್ಯಾಪ್ಶನ್ ನೀಡಲಾಗಿದೆ. ‘ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಕೆಜಿಎಫ್ 2’ ಎಂದು ಬರೆಯಲಾಗಿದೆ.
View this post on Instagram
ಇದನ್ನೂ ಓದಿ: ‘ಕೆಜಿಎಫ್ ಎರಡು ಪಾರ್ಟ್ನಲ್ಲಿ ತರುವ ಬಗ್ಗೆ ಮೊದಲೇ ನಿರ್ಧಾರ ಆಗಿತ್ತು, ನಮ್ಮ ಬಳಿ ಸದ್ಯಕ್ಕೆ ಆ ಆಲೋಚನೆ ಇಲ್ಲ’: ಸುದೀಪ್
ಈ ತಿಂಗಳಾಂತ್ಯಕ್ಕೆ ಗಣೇಶ ಚತುರ್ಥಿ ಹಬ್ಬ ಇದೆ. ಹಬ್ಬದ ಸಮಯದಲ್ಲಿ ಹೊಸಹೊಸ ಬ್ಲಾಕ್ಬಸ್ಟರ್ ಚಿತ್ರಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಅದೇ ರೀತಿ, ‘ಕೆಜಿಎಫ್ 2’ ಕೂಡ ಗಣೇಶ ಚತುರ್ಥಿ ದಿನದಂದು ಪ್ರಸಾರವಾಗುವ ಸಾಧ್ಯತೆ ಇದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಈ ಸುದ್ದಿ ಕೇಳಿ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಹಬ್ಬದ ದಿನ ಈ ಚಿತ್ರ ಪ್ರಸಾರ ಕಂಡರೆ ಒಳ್ಳೆಯ ಟಿಆರ್ಪಿ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
Published On - 3:32 pm, Fri, 12 August 22