Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ

Laal Singh Chaddha Twitter review: ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ನಾಗ ಚೈತನ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Laal Singh Chaddha
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 11, 2022 | 10:38 AM

Laal Singh Chaddha Twitter review: ಬರೋಬ್ಬರಿ 4 ವರ್ಷಗಳ ಬಳಿಕ ಲಾಲ್ ಸಿಂಗ್ ಚಡ್ಡಾ (Laal Singh Chaddha) ಚಿತ್ರದ ಮೂಲಕ ಬಾಲಿವುಡ್ ನಟ ಅಮೀರ್ ಖಾನ್ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಈ ಬಹು ನಿರೀಕ್ಷಿತ ಚಿತ್ರ ಇಂದು (ಆಗಸ್ಟ್ 11) ಬಿಡುಗಡೆಯಾಗಿದ್ದು, ಮೊದಲ ದಿನವೇ ಚಿತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ. ಬಾಯ್ಕಾಟ್ ವಿವಾದಗಳ ನಡುವೆ ಅಮೀರ್ ಖಾನ್ ಫ್ಯಾನ್ಸ್​ ಚಿತ್ರವನ್ನು ಮೆಚ್ಚಿಕೊಂಡಿದ್ದು, ವಿಮರ್ಶಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಈ ಸಿನಿಮಾದಲ್ಲಿ ಮೂರು ವಿಭಿನ್ನ ಶೇಡ್​ಗಳಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಜರ್ನಿ ಜಾನರ್​ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಿಸ್ಟರ್ ಪರ್ಫೆಕ್ಸೆನಿಸ್ಟ್​ ಸಾಧಾರಣ ವ್ಯಕ್ತಿ, ಸೈನಿಕ, ಸಾಧಕ…ಹೀಗೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಅತ್ತ ನಾಲ್ಕು ವರ್ಷಗಳಿಂದ ಅಮೀರ್ ಖಾನ್ ಅಭಿನಯವನ್ನು ಎದುರು ನೋಡ್ತಿದ್ದ ಬಾಲಿವುಡ್ ಸಿನಿಪ್ರಿಯರಿಂದ ಲಾಲ್ ಸಿಂಗ್ ಚಡ್ಡಾ ಪೈಸಾ ವಸೂಲ್ ಸಿನಿಮಾ ಎಂಬ ಅಭಿಪ್ರಾಯ ಮೊದಲ ದಿನವೇ ಕೇಳಿಬಂದಿದೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಚಿತ್ರದ ಪ್ರೀಮಿಯರ್ ಶೋ ಮತ್ತು ಮುಂಜಾನೆ ಶೋಗಳನ್ನು ವೀಕ್ಷಿಸಿದ ಪ್ರೇಕ್ಷಕರು ಚಿತ್ರದ ಬಗ್ಗೆ ಟ್ವಿಟ್ಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇದರೊಂದಿಗೆ #BoycottLaalSinghChaddha ಹ್ಯಾಶ್​ಟ್ಯಾಗ್ ಕೂಡ ವೈರಲ್ ಆಗಿದೆ. ಹಾಗಿದ್ರೆ ಲಾಲ್ ಸಿಂಗ್ ಚಡ್ಡಾ ಬಗ್ಗೆ ಸಿನಿಪ್ರಿಯರ ಟ್ವಿಟರ್ ವಿಮರ್ಶೆ ಹೇಗಿದೆ ನೋಡೋಣ…

“#LaalSinghChaddha ಬ್ಲಾಕ್‌ಬಸ್ಟರ್ ಓಸಮ್… ಸಿನಿಮಾವನ್ನು ನೋಡುತ್ತಿದ್ದೇನೆ… ನನ್ನ ವಿಮರ್ಶೆ 4/5 !!! ಓ ದೇವರೇ. #AamirKhan ಲವ್ ಯು.” ಎಂದು ಚಿತ್ರದ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.

“#LaalSinghChaddha ಎಂತಹ ಭಾವನೆಗಳಿಂದ ತುಂಬಿರುವ ಚಿತ್ರ. ಅಲ್ಲದೆ ಅಮೀರ್ ಖಾನ್ ಅಭಿನಯವು ಉತ್ತುಂಗದಲ್ಲಿದೆ” ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.

“#ಲಾಲ್‌ಸಿಂಗ್ ಚಡ್ಡಾ ಚಿತ್ರವು ಗಮನಾರ್ಹ ಮತ್ತು ಬ್ಲಾಕ್‌ಬಸ್ಟರ್. ಅದ್ಭುತ ನಟನೆ, ಸ್ಮರಣೀಯ ಪಾತ್ರಗಳು…ತುಸು ಗೊಂದಲದ ಕಥಾಹಂದರ ಹೊಂದಿದ್ದರೂ ಸಿನಿಮಾ ಚೆನ್ನಾಗಿದೆ ಎಂದು ಮತ್ತೊಮ್ಮಬ್ಬರು ಅಭಿಪ್ರಾಯಪಟ್ಟಿದ್ದಾರೆ.

“#LaalSinghChaddha ನಾನು ಬಹಳ ಸಮಯ ನಂತರ ನೋಡಿದ ಅತ್ಯುತ್ತಮ ಚಲನಚಿತ್ರ. ಈ ಚಿತ್ರ ನೋಡಿ ನಾನು ನಕ್ಕಿದ್ದೇನೆ, ಅತ್ತಿದ್ದೇನೆ…ವಿಸ್ಮಯಗೊಂಡಿದ್ದೇನೆ. ಇದು ಈ ವಾರದ ಚಲನಚಿತ್ರ, ಈ ತಿಂಗಳ ಚಲನಚಿತ್ರ, ಈ ವರ್ಷದ ಚಲನಚಿತ್ರವಾಗಲಿದೆ ಎಂದು ನಟ ಅಂಶುಮಾನ್ ಜಾ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಪ್ರೀಮಿಯರ್ ಶೋ, ಹಾಗೂ ಮುಂಜಾನೆಯ ಮೊದಲ ಶೋ ಬೆನ್ನಲ್ಲೇ ಚಿತ್ರಕ್ಕೆ ಭರಪೂರ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಸಿನಿಪ್ರಿಯರು ಮತ್ತೊಮ್ಮೆ ಅಮೀರ್ ಖಾನ್ ಅಭಿನಯಕ್ಕೆ ತಲೆದೂಗಿದ್ದಾರೆ. ಇನ್ನು ಬಹುತೇಕ ಸಿನಿಪ್ರೇಮಿಗಳು  5 ಕ್ಕೆ 4 ಸ್ಟಾರ್  ನೀಡಿರುವುದರಿಂದ ಚಿತ್ರತಂಡ ಕೂಡ ಫುಲ್​ ಖುಷಿಯಾಗಿದ್ದಾರೆ.

ಏತನ್ಮಧ್ಯೆ, ಲಾಲ್ ಸಿಂಗ್ ಚಡ್ಡಾ ನಿರ್ಮಾಪಕರು ಬುಧವಾರ ಮುಂಬೈನಲ್ಲಿ ತಮ್ಮ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಅನ್ನು ಆಯೋಜಿಸಿದ್ದರು. ಆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಾಲಿವುಡ್ ನಟ ಅಮೀರ್ ಖಾನ್, “ನಮಗೆ ನಿಮ್ಮ ಆಶೀರ್ವಾದ ಬೇಕು. ನಾನು ಸಾಮಾನ್ಯವಾಗಿ ನನ್ನ ಚಿತ್ರ ಬಿಡುಗಡೆಯ ಮೊದಲು ಒತ್ತಡಕ್ಕೆ ಒಳಗಾಗುತ್ತೇನೆ. ಈ ಬಾರಿಯೂ ಕಳೆದ ಒಂದು ತಿಂಗಳಿನಿಂದ ನನಗೆ ನಿದ್ರೆ ಬಂದಿಲ್ಲ. ಆದರೆ ಈಗ ನಿರಾಳವಾಗಿದ್ದೇನೆ. ಎಲ್ಲರಿಂದಲೂ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಮೀರ್ ಜೊತೆಗೆ, ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ನಾಗ ಚೈತನ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಅದ್ವೈತ್ ಚಂದನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು 1994 ರಲ್ಲಿ ತೆರೆಕಂಡ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್‌ ರಿಮೇಕ್ ಆಗಿದೆ. ಇಂಗ್ಲಿಷ್​​ನಲ್ಲಿ ಟಾಮ್ ಹಾಂಕ್ಸ್ ನಟಿಸಿದ್ದ ಪಾತ್ರದಲ್ಲಿ ಇಲ್ಲಿ ಅಮೀರ್ ಖಾನ್ ಅಭಿನಯಿಸಿದ್ದಾರೆ.

Published On - 10:36 am, Thu, 11 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್