‘ಯಶ್ ನನ್ನಿಷ್ಟದ ಪ್ಯಾನ್ ಇಂಡಿಯಾ ಸ್ಟಾರ್​’ ಎಂದ ಟಾಲಿವುಡ್​ನ ಸ್ಟಾರ್ ನಟ

TV9 Digital Desk

| Edited By: Rajesh Duggumane

Updated on: Aug 10, 2022 | 10:10 PM

‘ಲಾಲ್ ಸಿಂಗ್ ಚಡ್ಡಾ’ ಚಿತ್ರಕ್ಕಾಗಿ ನಾಗ ಚೈತನ್ಯ ಅವರು ನಾನಾ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಪ್ರಶ್ನೆ ಒಂದು ಎದುರಾಗಿದೆ.

‘ಯಶ್ ನನ್ನಿಷ್ಟದ ಪ್ಯಾನ್ ಇಂಡಿಯಾ ಸ್ಟಾರ್​’ ಎಂದ ಟಾಲಿವುಡ್​ನ ಸ್ಟಾರ್ ನಟ
ಯಶ್

‘ಕೆಜಿಎಫ್ 2’ ತೆರೆಕಂಡ ಬಳಿಕ ಯಶ್ (Yash) ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ವಿದೇಶದಲ್ಲೂ ಯಶ್​ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ‘ಕೆಜಿಎಫ್ 2’ (KGF Chapter 2) ತೆರೆಗೆ ಬಂದು ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಅವರ ಮುಂದಿನ ಚಿತ್ರ ಯಾವುದು ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ಯಶ್ ಬಗ್ಗೆ ಪರಭಾಷೆಯ ಸ್ಟಾರ್​ಗಳು ಮೆಚ್ಚುಗೆ ಸೂಚಿಸುವುದನ್ನೂ ಈಗಲೂ ನಿಲ್ಲಿಸಿಲ್ಲ. ನಾಗ ಚೈತನ್ಯ ಅವರು ಯಶ್ ಹಾಗೂ ‘ಕೆಜಿಎಫ್ 2’ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ.

ನಾಗ ಚೈತನ್ಯ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಮುಖ್ಯಭೂಮಿಕೆ  ನಿಭಾಯಿಸಿದ್ದಾರೆ. ಈ ಚಿತ್ರ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ‘ಲಾಲ್ ಸಿಂಗ್ ಚಡ್ಡಾ’ ಬಗ್ಗೆ ಆಮಿರ್ ಖಾನ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾಗ ಚೈತನ್ಯ ಅವರು ನಾನಾ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರಿಗೆ ಪ್ರಶ್ನೆ ಒಂದು ಎದುರಾಗಿದೆ.

ಸದ್ಯ ಪ್ಯಾನ್​ ಇಂಡಿಯಾ ಹವಾ ಜೋರಾಗಿದೆ. ಅನೇಕ ಸಿನಿಮಾಗಳು ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿವೆ. ‘ಪುಷ್ಪ’, ‘ಆರ್​ಆರ್​ಆರ್’, ‘ಕೆಜಿಎಫ್ 2’, ‘777 ಚಾರ್ಲಿ’, ‘ವಿಕ್ರಾಂತ್​ ರೋಣ’ ಮೊದಲಾದ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿವೆ. ಆ ಪೈಕಿ ಹೆಚ್ಚು ಸದ್ದು ಮಾಡಿದ್ದು ‘ಕೆಜಿಎಫ್ 2’. ಇದನ್ನೂ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇದೇ ವಿಚಾರ ಇಟ್ಟುಕೊಂಡು ನಾಗ ಚೈತನ್ಯ ಅವರಿಗೆ ಪ್ರಶ್ನೆ ಮಾಡಲಾಗಿದೆ.

ಇದನ್ನೂ ಓದಿ

ಇದನ್ನೂ ಓದಿ: ‘ಕೆಜಿಎಫ್​ ಎರಡು ಪಾರ್ಟ್​ನಲ್ಲಿ ತರುವ ಬಗ್ಗೆ ಮೊದಲೇ ನಿರ್ಧಾರ ಆಗಿತ್ತು, ನಮ್ಮ ಬಳಿ ಸದ್ಯಕ್ಕೆ ಆ ಆಲೋಚನೆ ಇಲ್ಲ’: ಸುದೀಪ್

‘ನಿಮ್ಮಿಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು?’ ಎಂದು ನಾಗ ಚೈತನ್ಯ ಅವರಿಗೆ ಸಂದರ್ಶನದ ವೇಳೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಒಂದು ಕ್ಷಣವೂ ಯೋಚಿಸದೆ ಯಶ್ ಹೆಸರು ಹೇಳಿದರು ನಾಗ ಚೈತನ್ಯ. ‘ನನಗೆ ಯಶ್ ಇಷ್ಟ. ‘ಕೆಜಿಎಫ್ 2’ ಚಿತ್ರವನ್ನು ನಾನು ತುಂಬಾನೇ ಇಷ್ಟಪಟ್ಟಿದ್ದೇನೆ’ ಎಂದಿದ್ದಾರೆ. ತೆಲುಗು ಸ್ಟಾರ್​​ಗಳ ಹೆಸರನ್ನು ಬಿಟ್ಟು ಅವರು ಕನ್ನಡ ನಟನ ಹೆಸರನ್ನು ಎತ್ತಿಕೊಂಡಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada