‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ

ನಾನು ಹಲವರ ಜತೆ ಫ್ಲರ್ಟ್​ ಮಾಡಿದ್ದೇನೆ ಎಂದರು ಬಿಗ್​ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್. ಈ ಘಟನೆ ಹೇಳಿಕೊಂಡ ಬಳಿಕ ಜಯಶ್ರೀ ಅವರು ತಮ್ಮ ಜೀವನದಲ್ಲಿ ಆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
ಜಯಶ್ರೀ
TV9kannada Web Team

| Edited By: Rajesh Duggumane

Aug 08, 2022 | 10:46 PM

‘ಬಿಗ್​ ಬಾಸ್ ಒಟಿಟಿ’ (Bigg Boss OTT) ಎರಡೇ ದಿನಕ್ಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಬೇರೆಬೇರೆ ರೀತಿಯ ಮನಸ್ಥಿತಿ ಇರುವ 16 ಸ್ಪರ್ಧಿಗಳು ಮನೆಯಲ್ಲಿ ಸೇರಿದ್ದಾರೆ. ಆ ಪೈಕಿ ಜಯಶ್ರೀ ಆರಾಧ್ಯ (Jayashree Aradhya) ಕೂಡ ಒಬ್ಬರು. ಜಯಶ್ರೀ ಅವರು ಮಾರಿಮುತ್ತು ಮೊಮ್ಮಗಳು. ಅವರು ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿಕೊಳ್ಳುವುದರ ಜತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸಿದ್ದಾರೆ. ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಜಯಶ್ರೀ ಮದುವೆಯಾದ ವ್ಯಕ್ತಿಯ ಜತೆ ರಿಲೇಶನ್​​ಶಿಪ್​ನಲ್ಲಿದ್ದರು. ಅವರಿಂದ ಜೂಜು ಕಲಿತರಂತೆ. ಈ ವಿಚಾರದಲ್ಲಿ ಅವರ ಬಗ್ಗೆ ಅವರಿಗೇ ಅಸಹ್ಯ ಹುಟ್ಟಿತ್ತು.

ನಾನು ಹಲವರ ಜತೆ ಫ್ಲರ್ಟ್​ ಮಾಡಿದ್ದೇನೆ ಎಂದರು ಬಿಗ್​ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್. ಈ ಘಟನೆ ಹೇಳಿಕೊಂಡ ಬಳಿಕ ಜಯಶ್ರೀ ಅವರು ತಮ್ಮ ಜೀವನದಲ್ಲಿ ಆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ‘ವಿವಾಹಿತ ವ್ಯಕ್ತಿಯ ಜತೆ ನಾನು ಎರಡು ವರ್ಷ ರಿಲೇಶನ್​ಶಿಪ್​ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್​ಶಿಪ್​ನಲ್ಲಿದ್ದೆ’ ಎಂದಿದ್ದಾರೆ ಜಯಶ್ರೀ.

‘ನಾನು ಅವರಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದೆ. ಆಮೇಲೆ ಜೂಜು ಬಿಟ್ಟೆ. ಅವರಿಗೂ ಜೂಜು ಬಿಟ್ಟುಬಿಡಿ ಎಂದೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ನಾನು ಅವರನ್ನು ಏಕೆ ಬಿಡಲಿಲ್ಲ ಎಂದರೆ ಅವರು ತುಂಬಾನೇ ಕಷ್ಟದಲ್ಲಿದ್ದರು’ ಎಂದಿದ್ದಾರೆ ಜಯಶ್ರೀ.

ಇದನ್ನೂ ಓದಿ: Jayashree Aradhya: ಬಿಗ್ ಬಾಸ್ ಮನೆಯಲ್ಲಿ ಮಾರಿ ಮುತ್ತು ಮೊಮ್ಮಗಳು: ವೇದಿಕೆ ಮೇಲೆ ಕಣ್ಣೀರಿಟ್ಟ ಜಯಶ್ರೀ

ಇದನ್ನೂ ಓದಿ

ಜಯಶ್ರೀ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗಲ್ಲ. ಮಾರಿಮುತ್ತು ಮೊಮ್ಮಗಳು ಎಂದರೆ ತಕ್ಷಣ ಗೊತ್ತಾಗುತ್ತದೆ. ಉಪೇಂದ್ರ ಸಿನಿಮಾದಲ್ಲಿ ಮಾರಿಮುತ್ತು ಪಾತ್ರ ಮಾಡಿದ್ದ ಪೋಷಕ ನಟಿ ಸರೋಜಾ ಅವರ ಮೊಮ್ಮಗಳು ಈ ನಟಿ ಜಯಶ್ರೀ ಆರಾಧ್ಯ. ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಮಾಡಿದ್ದ ಈ ಚೆಲುವೆಗೆ ಯಶಸ್ಸು ಸಿಕ್ಕಿದ್ದು ಮಾತ್ರ ಬಿಸ್ನೆಸ್​ನಲ್ಲಿ. ಈಗ ಅವರು ಬಿಗ್​ ಬಾಸ್​ನಲ್ಲಿ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada