Jayashree Aradhya: ಬಿಗ್ ಬಾಸ್ ಮನೆಯಲ್ಲಿ ಮಾರಿ ಮುತ್ತು ಮೊಮ್ಮಗಳು: ವೇದಿಕೆ ಮೇಲೆ ಕಣ್ಣೀರಿಟ್ಟ ಜಯಶ್ರೀ

Bigg Boss OTT kannada: ಜಯಶ್ರೀ ಎಂದರೆ ಹೆಚ್ಚಿನ ಜನರಿಗೆ ಇದು ಯಾರೆಂದು ತಿಳಿದಿರಲು ಸಾಧ್ಯವಿಲ್ಲ. ಮಾರಿ ಮುತ್ತು ಮೊಮ್ಮಗಳು ಎಂದರೆ ತಕ್ಷಣ ಗೊತ್ತಾಗುತ್ತೆ. ಉಪೇಂದ್ರ ಸಿನಿಮಾದಲ್ಲಿ ಮಾರಿ ಮುತ್ತು ಪಾತ್ರ ಮಾಡಿದ್ದ ಪೋಷಕ ನಟಿ ಸರೋಜಾ ಅವರ ಮೊಮ್ಮಗಳು ಈ ನಟಿ ಜಯಶ್ರೀ ಆರಾಧ್ಯ.

Jayashree Aradhya: ಬಿಗ್ ಬಾಸ್ ಮನೆಯಲ್ಲಿ ಮಾರಿ ಮುತ್ತು ಮೊಮ್ಮಗಳು: ವೇದಿಕೆ ಮೇಲೆ ಕಣ್ಣೀರಿಟ್ಟ ಜಯಶ್ರೀ
Jayashree aradhya
Follow us
TV9 Web
| Updated By: Vinay Bhat

Updated on:Aug 06, 2022 | 10:52 PM

ಬಿಗ್ ಬಾಸ್ (Bigg Boss) ವೇದಿಕೆ ಅನೇಕರಿಗೆ ಬದುಕು ಕಲ್ಪಿಸಿದೆ, ಬದಕಲು ಕಲ್ಪಿಸಿದೆ. ಮನೆಯೊಳಗೆ ಪ್ರವೇಶ ಪಡೆದ ಪ್ರತಿಯೊಬ್ಬ ಸ್ಪರ್ಧಿ ಕೂಡ ಒಂದಲ್ಲ ಒಂದು ವಿಚಾರವನ್ನು ಇಲ್ಲಿಂದ ಕಲಿತುಕೊಂಡೇ ಹೊರ ನಡೆಯುತ್ತಾರೆ. ಅರ್ಹ ವ್ಯಕ್ತಿಗೆ ಬಿಗ್ ಬಾಸ್ ಮನೆಯಲ್ಲಿ ಜಾಗ ಇರುವುದಂತು ನಿಜ. ಅದರಂತೆ ಇದೀಗ ಜೀವನದಲ್ಲಿ ಏನಾದರೂ ಹೊಸತನವನ್ನು ಮಾಡಲು ವೇದಿಕೆ ಹುಡುಕುತ್ತಿರುವ ನಟಿ ಜಯಶ್ರೀ ಅವರಿಗೆ ಬಿಗ್ ಬಾಸ್ ಕನ್ನಡ ಅವಕಾಶವೊಂದನ್ನು ಕಲ್ಪಿಸಿದೆ. ಕನ್ನಡ ಬಿಗ್ ಬಾಸ್ ಚೊಚ್ಚಲ ಓಟಿಟಿ (OTT) ಸೀಸನ್​ನಲ್ಲಿ 12ನೇ ಸ್ಪರ್ಧಿಯಾಗಿ ಜಯಶ್ರೀ ಆರಾಧ್ಯ (Jayashree Aradhya) ಮನೆಯೊಳಗೆ ಕಾಲಿಟ್ಟಿದ್ದಾರೆ.

ಜಯಶ್ರೀ ಎಂದರೆ ಹೆಚ್ಚಿನ ಜನರಿಗೆ ಇದು ಯಾರೆಂದು ತಿಳಿದಿರಲು ಸಾಧ್ಯವಿಲ್ಲ. ಮಾರಿ ಮುತ್ತು ಮೊಮ್ಮಗಳು ಎಂದರೆ ತಕ್ಷಣ ಗೊತ್ತಾಗುತ್ತೆ. ಉಪೇಂದ್ರ ಸಿನಿಮಾದಲ್ಲಿ ಮಾರಿ ಮುತ್ತು ಪಾತ್ರ ಮಾಡಿದ್ದ ಪೋಷಕ ನಟಿ ಸರೋಜಾ ಅವರ ಮೊಮ್ಮಗಳು ಈ ನಟಿ ಜಯಶ್ರೀ ಆರಾಧ್ಯ. ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಈ ಚೆಲುವೆಗೆ ಯಶಸ್ಸು ಸಿಕ್ಕಿದ್ದು ಮಾತ್ರ ಬ್ಯುಸಿನೆಸ್‌ನಲ್ಲಿ. ಬ್ಯುಸಿನೆಸ್‌ ಶುರು ಮಾಡಲು 50 ಲಕ್ಷ ಸಾಲ ಮಾಡಿದ್ದ ಜಯಶ್ರೀ ಆರಾಧ್ಯ, ನಂತರ ಯಶಸ್ಸು ಕಂಡವರು. ಇವರ ಬದುಕು ಕೂಡ ಹಲವರಿಗೆ ಸ್ಫೂರ್ತಿಯಾಗುವುದು ಕಂಡಿತ.

ಮನೆ ಬಿಟ್ಟು ಬಂದವರಿಗೆ ಏನಾದರೂ ಮಾಡಬೇಕು ಎಂಬುದು ನನ್ನ ಆಸೆ. ಏರೋನಾಟಿಕ್ ಇಂಜಿನಿಯರ್ ಆಗಬೇಕು ಅಂದುಕೊಂಡಿದ್ದೆ. ಆವಾಗ ನಟನೆ ಮಾಡಬೇಕು ಎಂಬ ಆಸೆ ಮೂಡಿತು. ಆದರೆ, ನಾನು ಏನೇ ಮಾಡಿದ್ರು ಅಪ್ಪ ಅಮ್ಮ ಒಪ್ಪುತ್ತಿರಲಿಲ್ಲ. ಅಣ್ಣ ಹೇಳಿದ ಹಾಗೆ ಕೇಳಬೇಕಿತ್ತು. ಅದಕ್ಕಾಗಿ ಮನ ಬಿಟ್ಟೆ. ಕಾಸ್ಮೆಟಿಕ್ ರೀಟೆಲ್ ಮಾಡ್ತಾ ಇದೀನಿ. ಯೂತ್​ಗೆ ಏನಾದರು ಇನ್​ಸ್ಪೈರ್ ಮಾಡಬೇಕು ಎಂಬ ಆಸೆ ಇದೆ ಎಂದು ತನ್ನ ಬಗ್ಗೆ ಜಯಶ್ರೀ ಹೇಳಿ ಕೊಂಡಿದ್ದಾರೆ. ವೇದಿಕೆ ಮೇಳೆ ಇವರು ಭಾವುಕರಾದ ಘಟನೆ ಕೂಡ ನಡೆಯಿತು.

ಇದನ್ನೂ ಓದಿ
Image
ವಿಚ್ಛೇದನದ ಮೂಲಕ ಸುದ್ದಿ ಆಗಿದ್ದ ನಟಿ ಚೈತ್ರಾ ಹಳ್ಳಿಕೇರಿ ಬಿಗ್​ ಬಾಸ್ ಒಟಿಟಿ​ಗೆ ಎಂಟ್ರಿ
Image
Uday Surya: ಬಿಗ್ ಬಾಸ್ ಮನೆಗೆ ಕಾಲಿಟ್ಟ ರಾಮಾಚಾರಿ ಧಾರಾವಾಹಿ ಖ್ಯಾತಿಯ ಉದಯ್ ಸೂರ್ಯ
Image
‘ಬಿಗ್​ ಬಾಸ್​ ಒಟಿಟಿ’ಗೆ ಕಾಲಿಟ್ಟ ರಾಜಸ್ಥಾನಿ ಬೆಡಗಿ; ಕನ್ನಡ ಮಾತನಾಡುವುದನ್ನು ಕೇಳಿ ಮೆಚ್ಚಿಕೊಂಡ ಸುದೀಪ್​
Image
Akshata kuki: ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಕಾಲಿಟ್ಟ ಅಕ್ಷತಾ ಕುಕ್ಕಿ

ಬಿಗ್ ಬಾಸ್ ಮನೆಗೆ ಈಗಾಗಲೇ ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ ಅವರು ಎಂಟ್ರಿ ಕೊಟ್ಟಿದ್ದಾರೆ.

Published On - 10:50 pm, Sat, 6 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ