AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​ ಒಟಿಟಿ’ಗೆ ಕಾಲಿಟ್ಟ ರಾಜಸ್ಥಾನಿ ಬೆಡಗಿ; ಕನ್ನಡ ಮಾತನಾಡುವುದನ್ನು ಕೇಳಿ ಮೆಚ್ಚಿಕೊಂಡ ಸುದೀಪ್​

Bigg Boss OTT kannada: ಕಿರಣ್ ಅವರು ಡ್ಯಾನ್ಸ್ ಜತೆಗೆ ಯೋಗ ಮಾಡುತ್ತಾರೆ. ಅನೇಕರಿಗೆ ಯೋಗ ಹೇಳಿಕೊಡುತ್ತಾರೆ. ಈ ಕಾರಣದಿಂದಲೂ ಅವರು ಅನೇಕರಿಗೆ ಪರಿಚಯ ಇದ್ದಾರೆ. ಅವರು ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ.

‘ಬಿಗ್​ ಬಾಸ್​ ಒಟಿಟಿ’ಗೆ ಕಾಲಿಟ್ಟ ರಾಜಸ್ಥಾನಿ ಬೆಡಗಿ; ಕನ್ನಡ ಮಾತನಾಡುವುದನ್ನು ಕೇಳಿ ಮೆಚ್ಚಿಕೊಂಡ ಸುದೀಪ್​
ಕಿರಣ್​-ಸುದೀಪ್
TV9 Web
| Edited By: |

Updated on:Aug 06, 2022 | 10:03 PM

Share

Bigg Boss OTT Kannada Season 1: ಈ ಬಾರಿ ‘ಬಿಗ್ ಬಾಸ್ ಒಟಿಟಿ’ ಹಲವು ವಿಶೇಷತೆಗಳಿಗೆ ಸಾಕ್ಷಿ ಆಗುತ್ತಿದೆ. ಸಿನಿಮಾ, ಕಿರುತೆರೆ ಜತೆಗೆ ಸೋಶಿಯಲ್ ಮೀಡಿಯಾ ಸ್ಟಾರ್​ಗಳನ್ನು ಇಲ್ಲಿಗೆ ಆಹ್ವಾನ ನೀಡಲಾಗಿದೆ. ಆ ಪೈಕಿ ಕಿರಣ್ ಯೋಗೇಶ್ವರ್​ ಕೂಡ ಒಬ್ಬರು. ಇವರು ರಾಜಸ್ಥಾನ ಮೂಲದವರು. ಅವರು ‘ಬಿಗ್ ಬಾಸ್ ಒಟಿಟಿ’ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಕನ್ನಡ ಕೇಳಿ ಸುದೀಪ್ ಮೆಚ್ಚಿಕೊಂಡಿದ್ದಾರೆ.

‘ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕೆ ನಾನು ಈಗ ಇಲ್ಲಿಗೆ ಬಂದಿದ್ದೇನೆ. ನನಗೆ ನಂಬಲು ಆಗುತ್ತಿಲ್ಲ. ನನ್ನ ಫ್ಯಾಮಿಲಿ ಇರೋದು ಹಳ್ಳಿಯಲ್ಲಿ. ಸಿಟಿ ಲೈಫ್ ಗೊತ್ತಿರಲಿಲ್ಲ. ನನ್ನ ಫ್ಯಾಮಿಲಿ ಟಿಪಿಕಲ್ ರಾಜಸ್ಥಾನಿ. ಚಿಕ್ಕ ವಯಸ್ಸಲ್ಲೇ ಮದುವೆ ಮಾಡ್ತೀನಿ ಎಂದರು. ಅದಕ್ಕೆ 17ನೇ ವಯಸ್ಸಿಗೆ ಮನೆ ಬಿಟ್ಟು ಬಂದೆ. ಹೋಟೆಲ್ ಕೆಲಸ ಮಾಡಿದೆ’ ಎಂದು ಹೇಳಿದರು ಕಿರಣ್.

‘ನಾನು ಸೋಲೋ ಟ್ರಾವೆಲ್ ಶುರು ಮಾಡಿದೆ. ನಾನು ಡ್ಯಾನ್ಸಿಂಗ್ ಮೂಲಕ ಫೇಮಸ್ ಆಗಿದ್ದೀನಿ. ಸದ್ಯ ಬೆಂಗಳೂರಿನಲ್ಲಿ ಇದ್ದೇನೆ. ಭಾರತವನ್ನು ಸುತ್ತಾಡಿದ್ದೇನೆ. ಆರಂಭದಲ್ಲಿ ನನಗೆ ಕಾನ್ಫಿಡೆನ್ಸ್ ಇರಲಿಲ್ಲ.  ಸಕ್ಸಸ್ ಬೆಸ್ಟ್ ರಿವೇಂಜ್ ಅನ್ನೋದು ನನ್ನ ನಂಬಿಕೆ. ತುಂಬಾ ಜನ ನನ್ನನ್ನು ಪಾರ್ಟಿಯಲ್ಲಿ ನೋಡಿದಾರೆ’ ಎಂದರು ಕಿರಣ್.

ಇದನ್ನೂ ಓದಿ
Image
Bigg Boss OTT Kannada: ಬಿಗ್ ಬಾಸ್ ಓಟಿಟಿ ಶುರುವಾಗುತ್ತಿದ್ದಂತೆ ಬಿಗ್ ಸರ್​ಪ್ರೈಸ್ ನೀಡಿದ ಕಿಚ್ಚ ಸುದೀಪ್: ಏನದು?
Image
Roopesh Shetty: ಬಿಗ್ ​ಬಾಸ್ ಮನೆಗೆ ಎಂಟ್ರಿಕೊಟ್ಟ ಕರಾವಳಿಯ ಸೂಪರ್ ಸ್ಟಾರ್: ಯಾರು ಗೊತ್ತಾ ಈ ರೂಪೇಶ್ ಶೆಟ್ಟಿ?
Image
Aryavardhan Guruji: ಜಿಂಗಲಕಾ ಲಕಾ ಲಕಾ: ‘ಬಿಗ್ ಬಾಸ್’ ಮನೆ ಸೇರಿದ ಈ ಆರ್ಯವರ್ಧನ್​ ಗುರೂಜಿ ಯಾರು?
Image
Sonu Srinivas Gowda: ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ

ಇದನ್ನೂ ಓದಿ: ಬೋಲ್ಡ್​ ಫೋಟೋ ಮೂಲಕ ಗಮನ ಸೆಳೆದ ಸೋನು ಈಗ ಬಿಗ್​ ಬಾಸ್​ಗೆ ಎಂಟ್ರಿ; ಇಲ್ಲಿದೆ ಗ್ಯಾಲರಿ

ಕಿರಣ್ ಅವರು ಡ್ಯಾನ್ಸ್ ಜತೆಗೆ ಯೋಗ ಮಾಡುತ್ತಾರೆ. ಅನೇಕರಿಗೆ ಯೋಗ ಹೇಳಿಕೊಡುತ್ತಾರೆ. ಈ ಕಾರಣದಿಂದಲೂ ಅವರು ಅನೇಕರಿಗೆ ಪರಿಚಯ ಇದ್ದಾರೆ. ಅವರು ರಾಜಸ್ಥಾನದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಅವರ ಕನ್ನಡ ಕೇಳಿ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಮನೆಗೆ ಹೋಗಿ ಇನ್ನಷ್ಟು ಚೆನ್ನಾಗಿ ಕನ್ನಡ ಮಾತನಾಡಿ ಎಂದರು. ಅವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಪರ್ಫಾರ್ಮೆನ್ಸ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Published On - 10:03 pm, Sat, 6 August 22

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ