Bigg Boss OTT Kannada: ಬಿಗ್ ಬಾಸ್ ಓಟಿಟಿ ಶುರುವಾಗುತ್ತಿದ್ದಂತೆ ಬಿಗ್ ಸರ್ಪ್ರೈಸ್ ನೀಡಿದ ಕಿಚ್ಚ ಸುದೀಪ್: ಏನದು?
BBK OTT: ಬಿಗ್ ಬಾಸ್ ಕನ್ನಡ ಟಿವಿಯಲ್ಲಿ ಯಾವಾಗ ಪ್ರಸಾರ?, ಈ ಓಟಿಟಿ ಬಿಗ್ ಬಾಸ್ ಎಷ್ಟು ದಿನಗಳ ಕಾಲ ನಡೆಯುತ್ತಿದೆ?, ಇಲ್ಲಿ ಗೆದ್ದ ಸ್ಪರ್ಧಿಗೆ ಏನು ಬಹುಮಾನ? ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ಗೆ (Bigg Boss Kannada) ಅಧಿಕೃತ ಚಾಲನೆ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಮಾಜಿ ಸ್ಪರ್ಧಿ ವಾಸುಕಿ ವೈಭವ್ ಜೊತೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಬಿಗ್ ಬಾಸ್ ಆರಂಭವಾಗುತ್ತಿದ್ದಂತೆ ಕಿಚ್ಚ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ವೇದಿಕೆ ಮೇಲೆ ಬಂದು ಜನರ ಮನದಲ್ಲಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಯಾಕೆಂದರೆ ಈ ಬಾರಿ ಬಿಗ್ ಬಾಸ್ ಅನ್ನು ಒಟಿಟಿಯಲ್ಲಿ (Bigg Boss OTT Kannada) ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ಬಿಗ್ ಬಾಸ್ ಒಟಿಟಿ ವೀಕ್ಷಣೆ ಸಾಧ್ಯ. ಟಿವಿಯಲ್ಲಿ ಪ್ರಸಾರವಿಲ್ಲ. ಹಾಗಾದರೆ ಟಿವಿಯಲ್ಲಿ ಯಾವಾಗ ಪ್ರಸಾರ?, ಈ ಓಟಿಟಿ ಬಿಗ್ ಬಾಸ್ ಎಷ್ಟು ದಿನಗಳ ಕಾಲ ನಡೆಯುತ್ತಿದೆ?, ಇಲ್ಲಿ ಗೆದ್ದ ಸ್ಪರ್ಧಿಗೆ ಏನು ಬಹುಮಾನ? ಎಂಬ ಪ್ರಶ್ನೆಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಮೊದಲನೆಯದಾಗಿ ಬಿಗ್ ಬಾಸ್ ಓಟಿಟಿ ಒಟ್ಟು ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ಗೊಂದಲಕ್ಕೆ ತೆರೆ ಎಳೆದಿರುವ ಸುದೀಪ್ ಒಟ್ಟು 40 ದಿನಗಳ ವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ. 40 ದಿನಗಳ ಬಳಿಕ ಟಿವಿ ಯಲ್ಲಿ 100 ದಿನಗಳ 9ನೇ ಸೀಸನ್ ಬಿಗ್ ಬಾಸ್ ಕನ್ನಡ ಶುರುವಾಗಲಿದೆ. ಇಲ್ಲಿ ಓಟಿಟಿ ಬಿಗ್ ಬಾಸ್ನಲ್ಲಿ ಕೊನೆಯ ವರೆಗೂ ಇದ್ದ ಟಾಪ್ ಸ್ಪರ್ಧಿಗಳು ನೇರವಾಗಿ 9ನೇ ಸೀಸನ್ ಬಿಗ್ ಬಾಸ್ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಸೀಸನ್ನ ವೇಗವಾಗಿ ಸಾಗಲಿದ್ದು 50 ಓವರ್ಗಳ ಕ್ರಿಕೆಟ್ ಪಂದ್ಯದಂತೆ 20 ಬಾಲ್ ಆಡಿ ಸೆಟಲ್ ಆಗಲು ಸಾಧ್ಯವಿಲ್ಲ, ಟಿ20 ಪಂದ್ಯದಂತೆ ಮೊದಲ ಎಸೆತದಿಂದಲೇ ಆಟ ಶುರು ಮಾಡಬೇಕು ಎಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಈಗಾಗಲೇ ಒಬ್ಬೊಬ್ಬರೆ ಸ್ಪರ್ಧಿಗಳು ದೊಡ್ಮನೆ ಸೇರಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕೆಲ ಸ್ಪರ್ಧಿಗಳು ಹೋದ ವಿಡಿಯೋವನ್ನು ವೂಟ್ ತನ್ನ ಅಧಿಕೃತ ಕಾತೆಯಲ್ಲಿ ಹಂಚುಕೊಂಡಿದೆ. ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ ಕಾಲಿಟ್ಟಾಗಿದೆ. ಇನ್ನು ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಅಯ್ಯರ್ ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದ ಸಾನ್ಯಾ ಇದೀಗ ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ.
ಈ ಬಾರಿ ‘ಬಿಗ್ ಬಾಸ್’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ಇಲ್ಲಿ ಕೂಡ ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ. ಅಲ್ಲದೆ ದಿನದ 24 ಗಂಟೆ ವೂಟ್ ಆ್ಯಪ್ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ.
Published On - 7:34 pm, Sat, 6 August 22