Bigg Boss OTT Kannada: ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ

ಟಿವಿಯಲ್ಲಿ ಪ್ರಸಾರ ಆಗುವಾಗ ‘ಬಿಗ್ ಬಾಸ್’ ಹೇಗಿತ್ತೋ ವೂಟ್​ನಲ್ಲೂ ಬಹುತೇಕ ಅದೇ ರೀತಿ ಇರಲಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ.

Bigg Boss OTT Kannada: ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ
ಬಿಗ್ ಬಾಸ್
Follow us
|

Updated on:Aug 06, 2022 | 2:55 PM

Bigg Boss Kannada OTT Season 1: ಹೊಸ ವಿನ್ಯಾಸದೊಂದಿಗೆ ಈ ಬಾರಿಯ ‘ಬಿಗ್ ಬಾಸ್’ ಒಟಿಟಿಯಲ್ಲಿ (Bigg Boss) ಪ್ರಸಾರ ಕಾಣುತ್ತಿದೆ. ಈ ಕಾರಣಕ್ಕೆ ಶೋಗೆ ‘ಬಿಗ್ ಬಾಸ್ ಒಟಿಟಿ’ ಎಂದೇ ಹೆಸರು ಇಡಲಾಗಿದೆ. ಪ್ರತಿ ವರ್ಷ ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಆದರೆ, ಈ ಬಾರಿ ಆ ಆಯ್ಕೆ ಇಲ್ಲ. ಪ್ರತಿ ವರ್ಷದಂತೆ ಸುದೀಪ್ ಅವರು ‘ಬಿಗ್ ಬಾಸ್’ ನಡೆಸಿಕೊಡಲಿದ್ದಾರೆ. ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವೀಕ್ಷಿಸೋದು ಎಲ್ಲಿ?

ಈ ಬಾರಿ ‘ಬಿಗ್ ಬಾಸ್​’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ. ಶನಿವಾರ (ಆಗಸ್ಟ್ 6) ಮೊದಲ ಸಂಚಿಕೆ 7 ಗಂಟೆಯಿಂದ ಪ್ರಸಾರ ಕಾಣಲಿದೆ.

ಇದನ್ನೂ ಓದಿ
Image
ಈ ಬಾರಿ ಕನ್ನಡ ‘ಬಿಗ್ ಬಾಸ್ ಒಟಿಟಿ’ ಮನೆ ಹೇಗಿರಲಿದೆ? ಇಲ್ಲಿದೆ ಫೋಟೋ
Image
ನೀವು ಬಿಗ್ ಬಾಸ್ ಆಕಾಂಕ್ಷಿಗಳೇ?; ಹಾಗಿದ್ದರೆ ಕಲರ್ಸ್ ಕನ್ನಡ ನೀಡಿದೆ ವಿಶೇಷ ಸೂಚನೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಟಿವಿಯಲ್ಲಿ ಯಾವಾಗ

‘ಬಿಗ್ ಬಾಸ್ ಒಟಿಟಿ’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಆದರೆ, ಈ ಸೀಸನ್ ಮುಗಿದ ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಿದೆ. ‘ಬಿಗ್ ಬಾಸ್’ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂಬ ಬಗ್ಗೆ ಅನೇಕರಿಗೆ ಬೇಸರವಿದೆ. ಅಂಥವರು ಒಂದೂವರೆ ತಿಂಗಳು ಕಾಯಲೇಬೇಕು. ಈ ಸೀಸನ್ ಮುಗಿದ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.

ವಾರಾಂತ್ಯಕ್ಕೆ ಸುದೀಪ್

ಟಿವಿಯಲ್ಲಿ ಪ್ರಸಾರ ಆಗುವಾಗ ‘ಬಿಗ್ ಬಾಸ್’ ಹೇಗಿತ್ತೋ ವೂಟ್​ನಲ್ಲೂ ಬಹುತೇಕ ಅದೇ ರೀತಿ ಇರಲಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಆಗಮಿಸಿ ‘ಬಿಗ್ ಬಾಸ್’ನಲ್ಲಿ ಪಂಚಾಯ್ತಿ ಮಾಡಲಿದ್ದಾರೆ. ಈ ಬಾರಿಯ ಎಪಿಸೋಡ್​ನಲ್ಲೂ ಸುದೀಪ್ ಖಡಕ್ ನಿರೂಪಣೆ ಗಮನ ಸೆಳೆಯಲಿದೆ.

ಬಿಗ್ ಬಾಸ್ ಮನೆಯಲ್ಲಿ ಬದಲಾವಣೆ

‘ಬಿಗ್ ಬಾಸ್’ ಮನೆಯಲ್ಲಿ ಈ ಬಾರಿ ಕೆಲ ಬದಲಾವಣೆ ಮಾಡಿಕೊಳ್ಳಲಾಗಿದೆ. ‘ಬಿಗ್ ಬಾಸ್’ ವಿನ್ಯಾಸವನ್ನು ಬದಲಾಯಿಸಿರುವ ಫೋಟೋವನ್ನು ಕಲರ್ಸ್​ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್​ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

Published On - 5:59 pm, Fri, 5 August 22

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್