‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ

‘ಬಿಗ್ ಬಾಸ್​’ ಮನೆಗೆ ಸುದೀಪ್ ಹಾಗೂ ವಾಸುಕಿ ಆಗಮಿಸಿದ್ದಾರೆ. ಮನೆಯ ಗಾರ್ಡನ್​ ಏರಿಯಾ ಬಗ್ಗೆ ವಾಸುಕಿ ತಮ್ಮದೇ ವಿವರಣೆ ನೀಡಿದ್ದಾರೆ. ‘ಜಗತ್ತಿನಲ್ಲಿ ಅತಿ ಹೆಚ್ಚು ಯುದ್ಧಗಳು ಬಹುಶಃ ಇಲ್ಲಿಯೇ ನಡೆದಿರಬೇಕು’ ಎಂದು ಹೇಳಿ ನಕ್ಕಿದ್ದಾರೆ ವಾಸುಕಿ.

‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ
ಸುದೀಪ್​-ವಾಸುಕಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 05, 2022 | 10:20 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಆಗಸ್ಟ್ 6ರಿಂದ ಹೊಸ ಸೀಸನ್ ಆರಂಭ ಆಗಲಿದೆ. ಈ ಬಾರಿ ಸ್ಪರ್ಧಿಗಳಾಗಿ ಯಾರೆಲ್ಲ ಬರಲಿದ್ದಾರೆ ಎಂಬ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇದೆ. ಇದಕ್ಕೆ ಆಗಸ್ಟ್ 6ರ ಸಂಜೆ 7 ಗಂಟೆಗೆ ಉತ್ತರ ಸಿಗಲಿದೆ. ‘ಬಿಗ್ ಬಾಸ್​ ಒಟಿಟಿ’ ಆರಂಭಕ್ಕೂ ಮೊದಲು ದೊಡ್ಮನೆ ಹೇಗಿದೆ ಎಂಬುದನ್ನು ತೋರಿಸಲಾಗಿದೆ. ಸುದೀಪ್ (Sudeep) ಹಾಗೂ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಮನೆ ಹೇಗಿದೆ ಎಂಬ ಝಲಕ್ ತೋರಿಸಲಾಗಿದೆ.

‘ಬಿಗ್ ಬಾಸ್​’ ಮನೆಗೆ ಸುದೀಪ್ ಹಾಗೂ ವಾಸುಕಿ ಆಗಮಿಸಿದ್ದಾರೆ. ಮನೆಯ ಗಾರ್ಡನ್​ ಏರಿಯಾ ಬಗ್ಗೆ ವಾಸುಕಿ ತಮ್ಮದೇ ವಿವರಣೆ ನೀಡಿದ್ದಾರೆ. ‘ಜಗತ್ತಿನಲ್ಲಿ ಅತಿ ಹೆಚ್ಚು ಯುದ್ಧಗಳು ಬಹುಶಃ ಇಲ್ಲಿಯೇ ನಡೆದಿರಬೇಕು’ ಎಂದು ಹೇಳಿ ನಕ್ಕಿದ್ದಾರೆ ವಾಸುಕಿ. ನಂತರ ‘ಬಿಗ್ ಬಾಸ್​​’ ಮನೆಯ ಒಳಗೆ ಇಬ್ಬರೂ ತೆರಳಿದ್ದಾರೆ. ಮೊದಲು ದೇವರ ಮನೆಗೆ ತೆರಳಿ ನಮಿಸಿದ್ದಾರೆ ಸುದೀಪ್ ಹಾಗೂ ವಾಸುಕಿ.

ಈ ಬಾರಿ ದೊಡ್ಮನೆಯಲ್ಲಿ ಒಂದು ಮೂರ್ತಿಯನ್ನು ಇರಿಸಲಾಗಿದೆ. ಆ ಮೂರ್ತಿ ಒಂದು ಕೈಯಲ್ಲಿ ಕಣ್ಣನ್ನು ಮುಚ್ಚಿಕೊಂಡಿದೆ, ಮತ್ತೊಂದು ಕೈ ಕತ್ತಿನ ಮೇಲಿದೆ. ಇದನ್ನು ನೋಡಿದರೆ ಸುದೀಪ್​​ಗೆ ತಮ್ಮನ್ನೇ ನೋಡಿದಂತೆ ಭಾಸವಾಗುತ್ತಿದೆಯಂತೆ. ಅದಕ್ಕೆ ಅವರು ವಿವರಣೆ ನೀಡಿದ್ದಾರೆ. ‘ಇಲ್ಲಿ ನಡೆಯೋದು ನನ್ನ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ, ಏನು ಗೊತ್ತಿಲ್ಲದ ರೀತಿಯಲ್ಲಿ ನಾನು ಇರಬೇಕು. ಇನ್ನು, ಕುತ್ತಿಗೆಯ ಭಾಗದಲ್ಲಿ ಇರುವ ಕೈ ಆನ್​​ಲೈನ್​ಲ್ಲಿ ವೀಕ್ಷಿಸುತ್ತಿರುವ ಜನರು ಹಾಗೂ ಒಳಗಿರುವ ಸ್ಪರ್ಧಿಗಳದ್ದು. ಅವರು ನನ್ನ ಕುತ್ತಿಗೆಗೆ ಕೈ  ಹಾಕಿಕೊಂಡಿರುತ್ತಾರೆ. ಈ ಮೂರ್ತಿಗೆ ಕೂದಲು ಮೀಸೆ ಇದ್ದಿದ್ದರೆ ನನ್ನ ರೀತಿಯೇ ಕಾಣುತ್ತಿತ್ತು. ತುಂಬಾ ಸಿಂಬಾಲಿಕ್ ಆಗಿದೆ’ ಎಂದರು ಸುದೀಪ್.

ಇದನ್ನೂ ಓದಿ
Image
Bigg Boss OTT: ‘ಬಿಗ್ ಬಾಸ್​ ಒಟಿಟಿ’ಗೆ ವಾಸುಕಿ ವೈಭವ್ ಎಂಟ್ರಿ; ಮಾಜಿ ಸ್ಪರ್ಧಿ ಕಂಡು ಫ್ಯಾನ್ಸ್ ಖುಷ್
Image
Bigg Boss OTT Kannada: ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ
Image
ಈ ಬಾರಿ ಕನ್ನಡ ‘ಬಿಗ್ ಬಾಸ್ ಒಟಿಟಿ’ ಮನೆ ಹೇಗಿರಲಿದೆ? ಇಲ್ಲಿದೆ ಫೋಟೋ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ಇದನ್ನೂ ಓದಿ: ‘ಬಿಗ್ ಬಾಸ್​ ಒಟಿಟಿ’ಗೆ ವಾಸುಕಿ ವೈಭವ್ ಎಂಟ್ರಿ; ಮಾಜಿ ಸ್ಪರ್ಧಿ ಕಂಡು ಫ್ಯಾನ್ಸ್ ಖುಷ್

‘ಬಿಗ್ ಬಾಸ್ ಒಟಿಟಿ’ಗೆ ಈ ಬಾರಿ 16 ಸ್ಪರ್ಧಿಗಳು ಇರುತ್ತಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭ ಆಗಿದೆ. ಕೆಲ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂಬ ಪ್ರಶ್ನೆಗೆ ಆಗಸ್ಟ್​ 6ರಂದೇ ಉತ್ತರ ಸಿಗಬೇಕಿದೆ.

Published On - 8:29 pm, Fri, 5 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ