‘ಬಿಗ್​ ಬಾಸ್​ ಒಟಿಟಿ ಸೀಸನ್​​ 1’: ದೊಡ್ಮನೆಗೆ ಎಂಟ್ರಿ ನೀಡುವ ಸೆಲೆಬ್ರಿಟಿಗಳು ಇವರೇನಾ?

Bigg Boss Kannada OTT: ಈ ಬಾರಿ ‘ಬಿಗ್​ ಬಾಸ್ ಒಟಿಟಿ’ ಶೋ​ನಲ್ಲಿ ಸಂಪೂರ್ಣ ಸೆಲೆಬ್ರಿಟಿಗಳೇ ಇರಲಿದ್ದಾರೆ. ಪತ್ರಿಕೋದ್ಯಮ, ಸೋಶಿಯಲ್​ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗುತ್ತಿದೆ.

‘ಬಿಗ್​ ಬಾಸ್​ ಒಟಿಟಿ ಸೀಸನ್​​ 1’: ದೊಡ್ಮನೆಗೆ ಎಂಟ್ರಿ ನೀಡುವ ಸೆಲೆಬ್ರಿಟಿಗಳು ಇವರೇನಾ?
ಬಿಗ್ ಬಾಸ್ ಕನ್ನಡ ಒಟಿಟಿ
TV9kannada Web Team

| Edited By: Madan Kumar

Aug 05, 2022 | 1:27 PM

ಕಿರುತೆರೆ ಲೋಕದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ‘ಬಿಗ್​ ಬಾಸ್​’ (Bigg Boss Kannada) ಕಾರ್ಯಕ್ರಮಕ್ಕೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಹೊಸತನವನ್ನು ಮೈಗೂಡಿಸಿಕೊಂಡು ಬರುತ್ತಿರುವ ಈ ಶೋ ಈಗ ಒಟಿಟಿ ಮೂಲಕ ಪ್ರಸಾರಕ್ಕೆ ಅಣಿಯಾಗಿದೆ. ಹಿಂದಿಯಲ್ಲಿ ಕಳೆದ ವರ್ಷ ಈ ಪ್ರಯೋಗ ನಡೆದಿತ್ತು. ಈಗ ಕನ್ನಡದಲ್ಲೂ ಮೊದಲ ಬಾರಿಗೆ ಬಿಗ್​ ಬಾಸ್​ ಒಟಿಟಿ (Bigg Boss Kannada OTT) ಪ್ರಾರಂಭ ಆಗುತ್ತಿದೆ. ಆಗಸ್ಟ್​ 6ರಂದು ಸಂಜೆ ಈ ಶೋಗೆ ಅದ್ದೂರಿ ಚಾಲನೆ ಸಿಗಲಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂಬ ಕೌತುಕ ಮೂಡಿದೆ. ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಊಹಾಪೂಹಗಳು ಹರಿದಾಡುತ್ತಿವೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ‘ಟೈಮ್ಸ್​ ಆಫ್​ ಇಂಡಿಯಾ’ ಪ್ರಕಟ ಮಾಡಿದೆ. ಅದರ ಪ್ರಕಾರ, ರವಿ ಶ್ರೀವತ್ಸ, ಮಿಮಿಕ್ರಿ ಗೋಪಿ, ಗಾಯಕಿ ಆಶಾ ಭಟ್​, ರೇಖಾ ವೇದವ್ಯಾಸ್​ ಮುಂತಾದವರು ಭಾಗವಹಿಸಲಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ನಡೆಸಿಕೊಡಲಿರುವ ಈ ಶೋ ನೋಡಲು ಫ್ಯಾನ್ಸ್​ ಕಾಡಿದ್ದಾರೆ.

ಕಿರುತೆರೆ ನಟಿ ನಮ್ರತಾ ಗೌಡ ಅವರು ಈ ಬಾರಿಯ ಬಿಗ್​ ಬಾಸ್​ ಒಟಿಟಿಗೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ರೀತಿ, ನಟ ತರುಣ್​ ಚಂದ್ರ ಅವರಿಗೂ ಆಫರ್ ಹೋಗಿದೆಯಂತೆ. ಖ್ಯಾತ ನಟಿ ರೇಖಾ ವೇದವ್ಯಾಸ್​ ಅವರು ಕೂಡ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ವಾಹಿನಿ ಕಡೆಯಿಂದಾಗಲೀ, ಸೆಲೆಬ್ರಿಟಿಗಳ ಕಡೆಯಿಂದಾಗಲಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಈ ಬಾರಿ ಬಿಗ್​ ಬಾಸ್​ನಲ್ಲಿ ಸಂಪೂರ್ಣ ಸೆಲೆಬ್ರಿಟಿಗಳೇ ಇರಲಿದ್ದಾರೆ. ಪತ್ರಿಕೋದ್ಯಮ, ಸೋಶಿಯಲ್​ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು. ರೀಲ್ಸ್​ನಲ್ಲಿ ಫೇಮಸ್​ ಆದ ಭೂಮಿಕಾ ಬಸವರಾಜ್​, ನಟ-ನಿರ್ದೇಶಕ ನವೀನ್​ ಕೃಷ್ಣ, ಕಿರುತೆರೆ ನಟಿ ಸಾನ್ಯಾ ಅಯ್ಯರ್​ ಮುಂತಾದವರ ಹೆಸರುಗಳು ಕೂಡ ಕೇಳಿಬರುತ್ತಿದೆ.

ಕನ್ನಡದ ವೀಕ್ಷಕರಿಗೆ ‘ಬಿಗ್​ ಬಾಸ್​ ಒಟಿಟಿ’ ಹೊಸದು. ಇದರ ನಿಯಮಗಳಲ್ಲಿ ಕೂಡ ಒಂದಷ್ಟು ಬದಲಾವಣೆ ಇರಲಿದೆ. ದಿನ 24 ಗಂಟೆಗಳ ಕಾಲವೂ ಸ್ಪರ್ಧಿಗಳ ಚಟುವಟಿಕೆಗಳನ್ನು ವೀಕ್ಷಕರು ನೋಡಬಹುದು. ‘ವೂಟ್​ ಸೆಲೆಕ್ಟ್’ ಮೂಲಕ ಈ ಶೋ ಪ್ರಸಾರ ಆಗಲಿದೆ. ಅಂದಾಜು 16 ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ. ‘ಬಿಗ್​ ಬಾಸ್​ ಒಟಿಟಿ’ ಮುಗಿದ ಬಳಿಕ ‘ಕಲರ್ಸ್​ ಕನ್ನಡ’ದಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ.

ಇದನ್ನೂ ಓದಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada