‘ಬಿಗ್​ ಬಾಸ್ ಒಟಿಟಿ’ಯಲ್ಲಿ ಸುದೀಪ್ ಎಷ್ಟು ದಿನ ಇರುತ್ತಾರೆ, ಸಂಭಾವನೆ ಎಷ್ಟು? ಸುದ್ದಿಗೋಷ್ಠಿಯಲ್ಲಿ ಸಿಕ್ತು ಉತ್ತರ

Bigg Boss OTT: ಸುದೀಪ್ ಅವರು ಯಾವಾಗ ಬರುತ್ತಾರೆ? ಅವರ ನಿರೂಪಣೆ ಯಾವ ರೀತಿಯಲ್ಲಿ ಇರಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ.

‘ಬಿಗ್​ ಬಾಸ್ ಒಟಿಟಿ’ಯಲ್ಲಿ ಸುದೀಪ್ ಎಷ್ಟು ದಿನ ಇರುತ್ತಾರೆ, ಸಂಭಾವನೆ ಎಷ್ಟು? ಸುದ್ದಿಗೋಷ್ಠಿಯಲ್ಲಿ ಸಿಕ್ತು ಉತ್ತರ
ಸುದೀಪ್
TV9kannada Web Team

| Edited By: Rajesh Duggumane

Aug 01, 2022 | 6:09 PM

‘ಬಿಗ್​ ಬಾಸ್ ಒಟಿಟಿ’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಆಗಸ್ಟ್ 6 ಹಾಗೂ 7ರಂದು ಗ್ರ್ಯಾಂಡ್ ಓಪನಿಂಗ್ ಇದೆ. ಈ ಮಧ್ಯೆ ಬಿಗ್ ಬಾಸ್​ಗೆ ಯಾರೆಲ್ಲಾ ತೆರಳುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದಕ್ಕೂ ಮೊದಲು ‘ಬಿಗ್ ಬಾಸ್ ಒಟಿಟಿ’ಯ ರೂಪುರೇಷೆ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಕಲರ್ಸ್​ ಕನ್ನಡ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದು ‘ಬಿಗ್ ಬಾಸ್​ ಒಟಿಟಿ’ ಮೊದಲ ಸೀಸನ್. ಈಗಾಗಲೇ ಹಿಂದಿ ಹಾಗೂ ತೆಲುಗಿನಲ್ಲಿ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಕಂಡಿದೆ. ಕನ್ನಡ ವೀಕ್ಷಕರ ಪಾಲಿಗೆ ಇದು ಹೊಸತು. ಈ ಕಾರಣಕ್ಕೆ ಹಲವು ಕುತೂಹಲಗಳು ಇದ್ದವು. ಸುದೀಪ್ ಅವರು ಯಾವಾಗ ಬರುತ್ತಾರೆ? ಅವರ ನಿರೂಪಣೆ ಯಾವ ರೀತಿಯಲ್ಲಿ ಇರಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ವೀಕೆಂಡ್​ನಲ್ಲಿ ಸುದೀಪ್

ಕಿಚ್ಚ ಸುದೀಪ್ ಅವರು ಪ್ರತಿ ವೀಕೆಂಡ್​ ‘ಬಿಗ್ ಬಾಸ್​’ ನಿರೂಪಣೆ ಮಾಡುತ್ತಿದ್ದರು. ‘ಬಿಗ್ ಬಾಸ್ ಒಟಿಟಿ’ಯಲ್ಲೂ ಇದೇ ಮುಂದುವರಿಯಲಿದೆ. 42 ದಿನಗಳ ಕಾಲ ನಡೆಯುವ ಈ ಶೋನಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ನಿರೂಪಣೆ ಮಾಡಲಿದ್ದಾರೆ. ಒಂದು ವಾರದಲ್ಲಿ ನಡೆದ ವಿಚಾರ ಇಟ್ಟುಕೊಂಡು ಕಟ್ಟೆ ಪಂಚಾಯ್ತಿ ಮಾಡಲಿದ್ದಾರೆ.

ಒಟಿಟಿಯಲ್ಲಿ ಮಾತ್ರ

ಈ ಬಾರಿ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಾಣಲಿದೆ. ದಿನದ 24 ಗಂಟೆ ಶೋ ಪ್ರಸಾರ ಆಗುತ್ತಿರುತ್ತದೆ. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಘಟನಾವಳಿಗೂ, ಒಟಿಟಿ ಪ್ರಸಾರಕ್ಕೂ ಎರಡು ನಿಮಿಷಗಳ ಅಂತರ ಮಾತ್ರ ಇರಲಿದೆ. ತಾಂತ್ರಿಕವಾಗಿ ಇದೊಂದು ಚಾಲೆಂಜ್ ಎಂಬುದು ಪರಮೇಶ್ವರ್ ಗುಂಡ್ಕಲ್ ಅಭಿಪ್ರಾಯ.

ದೊಡ್ಡ ಬಿಗ್ ಬಾಸ್​ ಇದೆ

‘ಬಿಗ್ ಬಾಸ್ ಒಟಿಟಿಯಲ್ಲಿ ವಿನ್ನರ್ ಇರಲ್ಲ. ವಿನ್ನರ್ಸ್​ ಇರುತ್ತಾರೆ.  ಒಟಿಟಿ ಆದ ಬಳಿಕ ದೊಡ್ಡ ಬಿಗ್ ಬಾಸ್ ಆರಂಭ ಆಗಲಿದೆ. ಇದು ಆಡಿಷನ್ ಸ್ಟೇಜ್ ಎಂದು ನಾನು ಹೇಳಲ್ಲ. 42ನೇ ದಿನಕ್ಕೆ ಈ ಎಲ್ಲಾ ವಿಚಾರಕ್ಕೆ ಉತ್ತರ ಸಿಗಲಿದೆ ಎಂದಿದ್ದಾರೆ’ ಪರಮೇಶ್ವರ್ ಗುಂಡ್ಕಲ್.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ’ ಕುರಿತು ಸುದ್ದಿಗೋಷ್ಠಿ; ಸುದೀಪ್​ ಏನಂದ್ರು? ಇಲ್ಲಿದೆ ವಿಡಿಯೋ

ಸಂಭಾವನೆ ಎಷ್ಟು?

ಇದನ್ನೂ ಓದಿ

‘ಬಿಗ್ ಬಾಸ್’ಗಾಗಿ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ಅನೇಕ ವರ್ಷಗಳಿಂದ ಚರ್ಚೆಯಲ್ಲಿದೆ. ಇದಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ‘ಬಿಗ್ ಬಾಸ್​ ನಿರೂಪಣೆಗಾಗಿ ಉಳಿದ ಭಾಷೆಗಳಲ್ಲಿ ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋದು ಗೊತ್ತಿಲ್ಲ. ಆದರೆ, ಸುದೀಪ್ ಅವರಿಗೆ ಒಳ್ಳೆಯ ರೀತಿಯ ಗೌರವ ಧನ ನೀಡುತ್ತಿದ್ದೇವೆ’ ಎಂದಿದ್ದಾರೆ ಅವರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada