ನೀವು ಬಿಗ್ ಬಾಸ್ ಆಕಾಂಕ್ಷಿಗಳೇ?; ಹಾಗಿದ್ದರೆ ಕಲರ್ಸ್ ಕನ್ನಡ ನೀಡಿದೆ ವಿಶೇಷ ಸೂಚನೆ
Bigg Boss Kannada OTT: ದೊಡ್ಮನೆಗೆ ಹೋಗಬೇಕು ಎಂದು ಅನೇಕರು ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ಇದರ ಲಾಭ ಪಡೆಯಲು ಅನೇಕ ದುಷ್ಟರು ಹೊಂಚು ಹಾಕುತ್ತಿರುತ್ತಾರೆ. ಈ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಎಚ್ಚರಿಕೆ ನೀಡಿದೆ.
‘ಬಿಗ್ ಬಾಸ್ ಕನ್ನಡ’ (Bigg Boss Kannada) ಈಗಾಗಲೇ 8 ಸೀಸನ್ಗಳನ್ನು ಪೂರ್ಣಗೊಳಿಸಿದೆ. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಪ್ರಸಾರ ಕಾಣುತ್ತಿದೆ. ಈ ಬಗ್ಗೆ ವಾಹಿನಿಯವರು ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಈ ಮಧ್ಯೆ ಕಲರ್ಸ್ ಕನ್ನಡ ವಾಹಿನಿ ವಿಶೇಷ ಸೂಚನೆ ಒಂದನ್ನು ಹೊರಡಿಸಿದೆ. ವಾಹಿನಿಯು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಬಿಗ್ ಬಾಸ್ಗೆ ಹೋಗಬೇಕು ಎಂಬುದು ಅನೇಕರ ಕನಸು. ಈ ವೇದಿಕೆಗೆ ಎಂಟ್ರಿ ಪಡೆದರೆ ಸಾಕಷ್ಟು ಜನಪ್ರಿಯತೆ ಸಿಗುತ್ತದೆ. ಸಿನಿಮಾಗಳಿಂದ ಆಫರ್ ಸಿಗುತ್ತದೆ. ಹೀಗಾಗಿ, ದೊಡ್ಮನೆಗೆ ಹೋಗಬೇಕು ಎಂದು ಅನೇಕರು ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ಇದರ ಲಾಭ ಪಡೆಯಲು ಅನೇಕ ದುಷ್ಟರು ಹೊಂಚು ಹಾಕುತ್ತಿರುತ್ತಾರೆ. ಬಿಗ್ ಬಾಸ್ ಮನೆಗೆ ಕಳುಹಿಸುತ್ತೇನೆ ಎಂದು ನಂಬಿಸಿ ಹಣ ಕಿತ್ತುಕೊಂಡ ಪ್ರಕರಣಗಳೂ ಇವೆ. ಈ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಎಚ್ಚರಿಕೆ ನೀಡಿದೆ.
‘ಬಿಗ್ ಬಾಸ್ ಆಕಾಂಕ್ಷಿಗಳ ಗಮನಕ್ಕೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆಸಲಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ, ಪ್ರವೇಶ ಶುಲ್ಕ, ಠೇವಣಿ, ತರಬೇತಿ -ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ’ ಎಂದು ಕೋರಲಾಗಿದೆ.
View this post on Instagram
ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
ಮೊದಲು ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಕಂಡಿದ್ದು ಹಿಂದಿಯಲ್ಲಿ. ಅಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಕಾರಣಕ್ಕೆ ಈ ಪ್ರಯೋಗವನ್ನು ಈಗ ಕನ್ನಡದಲ್ಲೂ ಮಾಡಲಾಗುತ್ತಿದೆ. ವೂಟ್ ಮೂಲಕ ಈ ಶೋ ಪ್ರಸಾರ ಕಾಣಲಿದೆ ಅನ್ನೋದು ವಿಶೇಷ. ಈಗಾಗಲೇ ಇದರ ಪ್ರೋಮೋ ಶೂಟ್ ಆಗಿದೆ.
Published On - 11:46 am, Thu, 21 July 22