Nayanthara Wedding Video: ನಯನತಾರಾ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗೋದು ಖಚಿತ; ಇಲ್ಲಿದೆ ಅಪ್​ಡೇಟ್​

Netflix | Nayanthara Vignesh Shivan Wedding: ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಮದುವೆಯ ದೃಶ್ಯಗಳನ್ನು ಶೀಘ್ರದಲ್ಲೇ ಪ್ರಸಾರ ಮಾಡುವುದಾಗಿ ನೆಟ್​ಫ್ಲಿಕ್ಸ್​ ತಿಳಿಸಿದೆ. ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

Nayanthara Wedding Video: ನಯನತಾರಾ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗೋದು ಖಚಿತ; ಇಲ್ಲಿದೆ ಅಪ್​ಡೇಟ್​
ವಿಘ್ನೇಶ್ ಶಿವನ್, ನಯನತಾರಾ
Follow us
TV9 Web
| Updated By: ಮದನ್​ ಕುಮಾರ್​

Updated on:Jul 21, 2022 | 4:22 PM

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಅವರು ಜೂನ್​ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಖುಷಿ ನೀಡಿತು. ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ (Vignesh Shivan)​ ಜೊತೆ ನಯನತಾರಾ ಮದುವೆ ನೆರವೇರಿತು. ಆದರೆ ಈ ಸೆಲೆಬ್ರಿಟಿ ವಿವಾಹದ ದೃಶ್ಯಗಳನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಮದುವೆಯಲ್ಲಿ ಯಾರೂ ಫೋಟೋ ಮತ್ತು ವಿಡಿಯೋ ಚಿತ್ರಿಸದಂತೆ ಈ ಜೋಡಿ ನಿರ್ಬಂಧ ಹೇರಿತ್ತು. ಅದಕ್ಕೆ ಕಾರಣ ಕೂಡ ಇತ್ತು. ನಯನತಾರಾ-ವಿಘ್ನೇಶ್​ ಶಿವನ್​ ಮದುವೆಯ ಸುಂದರ ಕ್ಷಣಗಳನ್ನು ಪ್ರಸಾರ ಮಾಡುವ ಹಕ್ಕನ್ನು ನೆಟ್​ಫ್ಲಿಕ್ಸ್​ (Netflix) ಸಂಸ್ಥೆ ಪಡೆದುಕೊಂಡಿದೆ. ಇದು ಕೋಟ್ಯಂತರ ರೂಪಾಯಿ ಡೀಲ್​. ಆದರೆ ಈ ಬಗ್ಗೆ ಕೆಲವು ದಿನಗಳಿಂದ ಒಂದಷ್ಟು ಗಾಸಿಪ್​ ಹರಡಿತ್ತು. ಅವುಗಳಿಗೆಲ್ಲ ನೆಟ್​ಫ್ಲಿಕ್ಸ್​ ಕಡೆಯಿಂದಲೇ ಅಧಿಕೃತ ಸ್ಪಷ್ಟನೆ ನಿಡಲಾಗಿದೆ.

ನೆಟ್​ಫ್ಲಿಕ್ಸ್​ ಜೊತೆ ಒಪ್ಪಂದ ಆಗಿದ್ದರೂ ಕೂಡ ನಯನತಾರಾ ಮತ್ತು ವಿಘ್ನೇಶ್ ಶಿವನ್​ ಅವರು ತಮ್ಮ ಮದುವೆಯ ಕೆಲವು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಿಂದ ನೆಟ್​​ಫ್ಲಿಕ್ಸ್​ ಸಂಸ್ಥೆಯವರು ಗರಂ ಆಗಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಅವರು ಡೀಲ್​ ಕ್ಯಾನ್ಸಲ್​ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಸ್ವತಃ ನೆಟ್​ಫ್ಲಿಕ್ಸ್​ ಹೇಳಿದೆ.

ಇದನ್ನೂ ಓದಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು
Image
Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ
Image
Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಮದುವೆಯ ದೃಶ್ಯಗಳನ್ನು ಶೀಘ್ರದಲ್ಲೇ ಪ್ರಸಾರ ಮಾಡುವುದಾಗಿ ನೆಟ್​ಫ್ಲಿಕ್ಸ್​ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಅದನ್ನು ಕಂಡು ಫ್ಯಾನ್ಸ್​ ಖುಷಿ ಆಗಿ​ದಾರೆ. ಈ ಹೈಪ್ರೊಫೈಲ್​ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಶಾರುಖ್​ ಖಾನ್​, ರಜನಿಕಾಂತ್​ ಸೇರಿದಂತೆ ಹಲವು ದಿಗ್ಗಜ ನಟರು ಹಾಜರಿ ಹಾಕಿದ್ದರು.

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ನಡುವಿನ ಲವ್​ ಸ್ಟೋರಿ ಬಗ್ಗೆ ಹೆಚ್ಚಿನ ವಿಷಯ ತಿಳಿಯುವ ಹಂಬಲ ಕೂಡ ಅಭಿಮಾನಿಗಳಿಗೆ ಇದೆ. ಆ ಬಗ್ಗೆಯೂ ನೆಟ್​ಫ್ಲಿಕ್ಸ್​ನಲ್ಲಿ ಮಾಹಿತಿ ಇರಲಿದೆ ಎಂದು ಹೇಳಲಾಗುತ್ತಿದೆ. ತಮ್ಮ ಮದುವೆ ಬಗ್ಗೆ ಸ್ವತಃ ನಯನತಾರಾ, ವಿಘ್ನೇಶ್​ ಶಿವನ್​ ಏನು ಹೇಳಿದ್ದಾರೆ? ಒಟ್ಟಾರೆ ಮದುವೆಯ ವಾತಾವರಣ ಯಾವ ರೀತಿ ಇತ್ತು? ಅತಿಥಿಗಳ ಸಂಗಮ ಹೇಗಿತ್ತು ಎಂಬುದನ್ನೆಲ್ಲ ಅಭಿಮಾನಿಗಳಿಗೆ ತೋರಿಸಲು ನೆಟ್​ಫ್ಲಿಕ್ಸ್​ ಸಕಲ ಸಿದ್ಧತೆ ಮಾಡಿಕೊಂಡಿದೆ.

Published On - 4:22 pm, Thu, 21 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ