Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?

Prabhu Deva | Nayanthara: 2009ರ ಸಮಯದಲ್ಲಿ ನಯನತಾರಾ ಮತ್ತು ಪ್ರಭುದೇವ ಡೇಟಿಂಗ್​ ಮಾಡುತ್ತಿದ್ದರು. ಪ್ರಭುದೇವ ಜತೆಗಿನ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾದ ಬಳಿಕ ನಯನತಾರಾ ಬದುಕಿನಲ್ಲಿ ವಿಘ್ನೇಶ್​ ಶಿವನ್​ ಎಂಟ್ರಿ ಆಯಿತು.

Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
ಪ್ರಭುದೇವ, ವಿಘ್ನೇಶ್ ಶಿವನ್, ನಯನತಾರಾ
TV9kannada Web Team

| Edited By: Madan Kumar

Jun 09, 2022 | 1:14 PM

ಜನಪ್ರಿಯ ನಟಿ ನಯನತಾರಾ ಅವರು ನಿರ್ದೇಶಕ ವಿಘ್ನೇಶ್​ ಶಿವನ್​ (Vignesh Shivan) ಜೊತೆ ಹಸೆಮಣೆ ಏರುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಇಂದು (ಜೂನ್​ 9) ವಿವಾಹ ಸಂಭ್ರಮ. ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ. ಶಾರುಖ್​ ಖಾನ್​, ರಜನಿಕಾಂತ್​, ಬೋನಿ ಕಪೂರ್​, ಅಟ್ಲಿ ಕುಮಾರ್​, ಕಾರ್ತಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಹಾರೈಸುತ್ತಿದ್ದಾರೆ. ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ನಯನತಾರಾ (Nayanthara) ಹಾಗೂ ವಿಘ್ನೇಶ್​ ಶಿವನ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರ ಲವ್​ ಸ್ಟೋರಿ ಕುರಿತು ಫ್ಯಾನ್ಸ್​ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲ, ನಯನತಾರಾ ಅವರು ಈ ಹಿಂದೆ ಪ್ರಭುದೇವ (Prabhu Deva) ಜೊತೆ ಡೇಟಿಂಗ್​ ಮಾಡುತ್ತಿದ್ದರು ಎಂಬುದನ್ನು ಕೂಡ ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಪ್ರಭುದೇವ ಜತೆ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ? ಇಲ್ಲಿದೆ ವಿವರ..

ಬಹುಭಾಷೆಯಲ್ಲಿ ಪ್ರಭುದೇವ ಅವರು ಫೇಮಸ್​ ಆಗಿದ್ದಾರೆ. ಅದ್ಭುತವಾದ ಡ್ಯಾನ್ಸ್​ ಮೂಲಕ ಅವರು ಎಲ್ಲರನ್ನೂ ಮೋಡಿ ಮಾಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ಕೊರಿಯೋಗ್ರಾಫರ್​ ಆಗಿಯೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ಜತೆ ನಯನತಾರಾಗೆ ಪ್ರೀತಿ ಚಿಗುರಿತ್ತು. ಅನೇಕ ಸಂದರ್ಭದಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನೇನು ಈ ಪ್ರೇಮಿಗಳು ಮದುವೆ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅವರ ಬದುಕಿನಲ್ಲಿ ಟ್ವಿಸ್ಟ್​ ಎದುರಾಯಿತು.

ಇದನ್ನೂ ಓದಿ: Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ

ಅದು 2009ರ ಸಮಯ. ನಯನತಾರಾ ಮತ್ತು ಪ್ರಭುದೇವ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಜೋರಾಗಿ ಹಬ್ಬಿತ್ತು. ಆದರೆ ಅನೇಕ ವೈಯಕ್ತಿಕ ಕಾರಣಗಳಿಂದ ತಮ್ಮಿಬ್ಬರ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಈ ಜೋಡಿಗೆ ಸಾಧ್ಯವಾಗಲೇ ಇಲ್ಲ. ಪ್ರಭುದೇವ ಅವರಿಗೆ ಅದಾಗಲೇ ಲತಾ ಜೊತೆ ಮದುವೆ ಆಗಿತ್ತು. ನಯನತಾರಾ ಜೊತೆ ಡೇಟಿಂಗ್ ನಡೆಸುತ್ತಿರುವಾಗ ಪತ್ನಿಗೆ ಇನ್ನೂ ವಿಚ್ಛೇದನ ನೀಡಿಲ್ಲದ ಕಾರಣ ಪ್ರಭುದೇವ ಅವರ ಈ ಪ್ರೇಮ ಪ್ರಸಂಗ ಕಗ್ಗಂಟಾಗಿತ್ತು.

ಇದನ್ನೂ ಓದಿ: Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು

ಕಡೆಗೂ ನಯನತಾರಾ ಮತ್ತು ಪ್ರಭುದೇವ ನಡುವಿನ ಲವ್​ಸ್ಟೋರಿ ಮುಂದುವರಿಯಲಿಲ್ಲ. ದಿನದಿಂದ ದಿನಕ್ಕೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಲು ಆರಂಭ ಆಯಿತು. ಅಂತಿಮವಾಗಿ ಬ್ರೇಕಪ್​ನಲ್ಲಿ ಆ ಸಂಬಂಧ ಅಂತ್ಯವಾಯ್ತು. ಆ ಬಳಿಕ ನಯನತಾರ ಬದುಕಿನಲ್ಲಿ ವಿಘ್ನೇಶ್​ ಶಿವನ್​ ಪ್ರವೇಶ ಆಯಿತು. ಇಬ್ಬರ ನಡುವೆ ಪ್ರೀತಿ ಚಿಗುರಿ, ಅದಕ್ಕೀಗ ಮದುವೆಯ ಮುದ್ರೆ ಬೀಳುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada