- Kannada News Photo gallery Nayanthara Wedding: Love Story and photos of Nayanthara and Vignesh Shivan
Nayanthara Vignesh Wedding: ‘ಸೂಪರ್’ ಚಿತ್ರದ ನಟಿ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್ ಶಿವನ್ ಕೈ ಹಿಡಿದ ಸುಂದರಿ
Nananthara Vignesh Shivan Photos: ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರದ್ದು ಹಲವು ವರ್ಷಗಳ ಪ್ರೇಮ. ಈ ಜೋಡಿಹಕ್ಕಿಗಳು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.
Updated on:Jun 09, 2022 | 12:02 PM

Nayanthara Wedding: Love Story and photos of Nayanthara and Vignesh Shivan

Nayanthara Wedding: Love Story and photos of Nayanthara and Vignesh Shivan

ಹಲವು ವರ್ಷಗಳಿಂದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಅನೇಕ ಫೋಟೋಗಳೇ ಸಾಕ್ಷಿ. ಇಂದು ಅವರ ಪ್ರೇಮಕ್ಕೆ ಮದುವೆಯ ಮುದ್ರೆ ಬಿದ್ದಿದೆ. ಈ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ.

ಬಹುಭಾಷೆಯಲ್ಲಿ ನಟಿ ನಯನತಾರಾ ಅವರು ಫೇಮಸ್. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ಸೂಪರ್’. ಉಪೇಂದ್ರ ನಿರ್ದೇಶಿಸಿದ ಆ ಸಿನಿಮಾ 2010ರಲ್ಲಿ ತೆರೆಕಂಡಿತು. ಆ ಬಳಿಕ ಕನ್ನಡದ ಬೇರೆ ಯಾವುದೇ ಚಿತ್ರದಲ್ಲೂ ನಯನತಾರಾ ನಟಿಸಿಲ್ಲ.

ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ವಿಘ್ನೇಶ್ ಶಿವನ್ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿ, ಗೀತರಚನಕಾರನಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ‘ನಾನುಂ ರೌಡಿ ಧಾನ್’, ‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜತೆಯಾಗಿ ಕೆಲಸ ಮಾಡಿದ್ದಾರೆ.
Published On - 10:15 am, Thu, 9 June 22



















