AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ

Nananthara Vignesh Shivan Photos: ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರದ್ದು ಹಲವು ವರ್ಷಗಳ ಪ್ರೇಮ. ಈ ಜೋಡಿಹಕ್ಕಿಗಳು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.

TV9 Web
| Edited By: |

Updated on:Jun 09, 2022 | 12:02 PM

Share
ಖ್ಯಾತ ನಟಿ ನಯನತಾರಾ ಅವರು ಇಂದು (ಜೂನ್​ 9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಅವರು ಹಸೆಮಣೆ ಏರಿದ್ದಾರೆ. ಮಹಾಬಲಿಪುರಂನಲ್ಲಿ ಇವರ ಮದುವೆ ನೆರವೇರಿದೆ.

Nayanthara Wedding: Love Story and photos of Nayanthara and Vignesh Shivan

1 / 5
ಅನೇಕ ಗಣ್ಯರು ಮತ್ತು ಆಪ್ತರನ್ನು ಮದುವೆಗೆ ಆಹ್ವಾನಿಸಲಾಗಿದೆ. ಸಮಂತಾ, ರಜನಿಕಾಂತ್​, ಎಂ.ಕೆ. ಸ್ಟಾಲಿನ್​ ಸೇರಿದಂತೆ ಅನೇಕರು ಬಂದು ನವ ಜೋಡಿಗೆ ಶುಭ ಹಾರೈಸಲಿದ್ದಾರೆ ಎಂದು ವರದಿ ಆಗಿದೆ. ಶೀಘ್ರದಲ್ಲೇ ಮದುವೆಯ ಫೋಟೋಗಳು ಹೊರಬರಲಿವೆ.

Nayanthara Wedding: Love Story and photos of Nayanthara and Vignesh Shivan

2 / 5
ಹಲವು ವರ್ಷಗಳಿಂದ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಅನೇಕ ಫೋಟೋಗಳೇ ಸಾಕ್ಷಿ. ಇಂದು ಅವರ ಪ್ರೇಮಕ್ಕೆ ಮದುವೆಯ ಮುದ್ರೆ ಬಿದ್ದಿದೆ. ಈ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ.

3 / 5
ಬಹುಭಾಷೆಯಲ್ಲಿ ನಟಿ ನಯನತಾರಾ ಅವರು ಫೇಮಸ್​. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ಸೂಪರ್’. ಉಪೇಂದ್ರ ನಿರ್ದೇಶಿಸಿದ ಆ ಸಿನಿಮಾ 2010ರಲ್ಲಿ ತೆರೆಕಂಡಿತು. ಆ ಬಳಿಕ ಕನ್ನಡದ ಬೇರೆ ಯಾವುದೇ ಚಿತ್ರದಲ್ಲೂ ನಯನತಾರಾ ನಟಿಸಿಲ್ಲ.

4 / 5
ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ವಿಘ್ನೇಶ್​ ಶಿವನ್​ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿ, ಗೀತರಚನಕಾರನಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ‘ನಾನುಂ ರೌಡಿ ಧಾನ್​’, ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಿ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಜತೆಯಾಗಿ ಕೆಲಸ ಮಾಡಿದ್ದಾರೆ.

5 / 5

Published On - 10:15 am, Thu, 9 June 22

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ