AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನತಾರಾ-ವಿಘ್ನೇಶ್​ ಮದುವೆ ಒಟಿಟಿಯಲ್ಲಿ ಪ್ರಸಾರ? ಇದನ್ನು ಖರೀದಿಸಿದ್ದು ಯಾರು?

ಸ್ಟಾರ್ ನಟರ ಮದುವೆ ಎಂದರೆ ಅದನ್ನು ನೋಡೋಕೆ ಫ್ಯಾನ್ಸ್ ಕಾದು ಕೂತಿರುತ್ತಾರೆ. ನೆಟ್​ಫ್ಲಿಕ್ಸ್ ಇದರ ಲಾಭವನ್ನು ಪಡೆಯಲು ಮುಂದಾಗಿದೆ ಎಂದು ವರದಿ ಆಗಿದೆ.

ನಯನತಾರಾ-ವಿಘ್ನೇಶ್​ ಮದುವೆ ಒಟಿಟಿಯಲ್ಲಿ ಪ್ರಸಾರ? ಇದನ್ನು ಖರೀದಿಸಿದ್ದು ಯಾರು?
ನಯನತಾರಾ, ವಿಘ್ನೇಶ್ ಶಿವನ್
TV9 Web
| Updated By: ಮದನ್​ ಕುಮಾರ್​|

Updated on:Jun 06, 2022 | 7:56 AM

Share

ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್  ಶಿವನ್ (Vignesh Shivan) ಇಬ್ಬರ ನಡುವೆ ಪ್ರೀತಿ ಮೊಳೆತು ಹಲವು ವರ್ಷಗಳೇ ಕಳೆದಿವೆ. ಇವರ ಮದುವೆ ವಿಚಾರ ಕೂಡ ಈ ಮೊದಲಿನಿಂದಲೂ ಚರ್ಚೆಯಲ್ಲಿದೆ. ಆದರೆ, ಕಾರಣಾಂತರಗಳಿಂದ ಇವರ ವಿವಾಹ ದಿನಾಂಕ ಮುಂದೂಡಲ್ಪಡುತ್ತಲೇ ಇದೆ. ಇಷ್ಟು ದಿನ ಈ ಜೋಡಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ಇಬ್ಬರೂ ಬಿಡುವಾಗಿದ್ದಾರೆ. ಜೂನ್ 9ರಂದು ಈ ಜೋಡಿ ವಿವಾಹವಾಗಲಿದೆ. ಸೆಲೆಬ್ರಿಟಿಗಳ ಮದುವೆ ಎಂದರೆ ಒಂದಷ್ಟು ವದಂತಿಗಳು ಹಬ್ಬಲೇಬೇಕು. ಈಗ ಇವರ ಮದುವೆ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಹರಡಿದೆ.

‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವಿಘ್ನೇಶ್ ಹೊತ್ತಿದ್ದರೆ, ನಯನತಾರಾ ಹಾಗೂ ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಸಿನಿಮಾ ತೆರೆಗೆ ಬಂದಿದೆ. ಈ ಕಾರಣಕ್ಕೆ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ಗೆ ಈ ಜೋಡಿ ಆಮಂತ್ರಣ ನೀಡಿ ಬಂದಿದೆ. ಈ ಸುದ್ದಿ  ಹರಡಿದೆ.

ಸ್ಟಾರ್ ನಟರ ಮದುವೆ ಎಂದರೆ ಅದನ್ನು ನೋಡೋಕೆ ಫ್ಯಾನ್ಸ್ ಕಾದು ಕೂತಿರುತ್ತಾರೆ. ನೆಟ್​ಫ್ಲಿಕ್ಸ್ ಇದರ ಲಾಭವನ್ನು ಪಡೆಯಲು ಮುಂದಾಗಿದೆ ಎಂದು ವರದಿ ಆಗಿದೆ. ಮದುವೆಯ ವಿಡಿಯೋವನ್ನು ನೆಟ್​ಫ್ಲಿಕ್ಸ್ ಪ್ರಸಾರ ಮಾಡಲಿದೆ. ಮದುವೆ ಹೇಗೆ ಮೂಡಿಬರಬೇಕು ಎಂಬುದನ್ನು ನಿರ್ದೇಶಕ ಗೌತಮ್​ ಮೆನನ್​ ಹೊತ್ತುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
Image
ನಯನತಾರಾ-ವಿಘ್ನೇಶ್ ಮದುವೆ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನ
Image
ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  
Image
ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?
Image
ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ ನಯನತಾರಾ? ಏನು ಇದರ ಅಸಲಿ ಸಮಾಚಾರ?

ಇದನ್ನೂ ಓದಿ: Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದೆ. ಈ ಮದುವೆಯ ಸಂಭ್ರಮವನ್ನು ಪ್ರಸಾರ ಮಾಡುವ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ ಎನ್ನಲಾಗಿತ್ತು. ದೊಡ್ಡ ಮೊತ್ತಕ್ಕೆ ಈ ಹಕ್ಕು ಮಾರಾಟ ಆಗಿದೆ ಎಂದು ವರದಿ ಆಗಿತ್ತು. ಆದರೆ, 7 ತಿಂಗಳು ಕಳೆದರೂ ಆ ರೀತಿ ಯಾವುದೇ ಅಪ್​ಡೇಟ್​ ಇಲ್ಲ.

ಆಪ್ತರಿಂದ ಮದುವೆ ಬಗ್ಗೆ ಅಸಮಾಧಾನ

ವಿಘ್ನೇಶ್​ ಅವರ ಸಂಬಂಧಿಕರು ಮದುವೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಣಿಕ್ಕಮ್ ಎಂಬುವವರು ಸುದ್ದಿವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಇವರು ವಿಘ್ನೇಶ್ ಸಂಬಂಧಿ. ‘ಜೂನ್​ 9ಕ್ಕೆ ವಿಘ್ನೇಶ್​-ನಯನತಾರಾ ಮದುವೆ ನಡೆಯಲಿದೆ. ಆದರೆ, ನಮಗೆ ಈ ಬಗ್ಗೆ ಯಾವುದೇ ಆಮಂತ್ರಣ ಬಂದಿಲ್ಲ’ ಎಂದು ಅವರು ಆರೋಪಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Mon, 6 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ