ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ ನಯನತಾರಾ? ಏನು ಇದರ ಅಸಲಿ ಸಮಾಚಾರ?

Nayanthara | Vignesh Shivan: ನಯನತಾರಾ-ವಿಘ್ನೇಶ್​ ಶಿವನ್ ಜೋಡಿಯ ಬಗ್ಗೆ ಮೂರು ತಿಂಗಳಿಗೊಮ್ಮೆ ಈ ರೀತಿ ಗಾಸಿಪ್​ಗಳು ಕೇಳಿಬರುತ್ತಲೇ ಇರುತ್ತವೆ. ಈ ಬಾರಿ ಮಗು ಪಡೆಯುವ ಬಗ್ಗೆ ಗಾಸಿಪ್​ ಹರಡಿದೆ.

ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ ನಯನತಾರಾ? ಏನು ಇದರ ಅಸಲಿ ಸಮಾಚಾರ?
ವಿಘ್ನೇಶ್​ ಶಿವನ್​, ನಯನತಾರಾ
Follow us
TV9 Web
| Updated By: ಮದನ್​ ಕುಮಾರ್​

Updated on: Mar 23, 2022 | 11:48 AM

ನಟಿ ನಯನತಾರಾ (Nayanthara) ಅವರ ಬಗ್ಗೆ ಕೇಳಿಬರುವ ಗಾಸಿಪ್​ಗಳು ಒಂದೆರಡಲ್ಲ. ಈಗಾಗಲೇ ಅವರು ವೈಯಕ್ತಿಕ ಜೀವನದ ಕಾರಣಗಳಿಂದಾಗಿ ಅನೇಕ ಬಾರಿ ಸುದ್ದಿ ಆಗಿದ್ದಾರೆ. ಅದರಲ್ಲೂ ನಿರ್ದೇಶಕ ವಿಘ್ನೇಶ್​ ಶಿವನ್​ (Vignesh Shivan) ಜೊತೆಗಿನ ಪ್ರೀತಿ-ಪ್ರೇಮದ ವಿಷಯ ಪದೇಪದೇ ಚರ್ಚೆ ಆಗುತ್ತಲೇ ಇರುತ್ತದೆ. ವಿಘ್ನೇಶ್​ ಶಿವನ್​ ಮತ್ತು ನಯನತಾರಾ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ವಿಷಯವನ್ನು ಅವರು ಎಂದಿಗೂ ಮುಚ್ಚಿಟ್ಟಿಲ್ಲ. ಅನೇಕ ವೇದಿಕೆಗಳಲ್ಲಿ ನಯನತಾರಾ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಈಗ ಈ ಜೋಡಿಯ ಬಗ್ಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರು ಸೀಕ್ರೇಟ್ ಆಗಿ ಮದುವೆ ಆಗಿದ್ದು, ಶೀಘ್ರದಲ್ಲೇ ಬಾಡಿಗೆ ತಾಯಿ (Surrogacy) ಮೂಲಕ ಮಗು ಪಡೆಯುತ್ತಾರೆ ಎಂಬ ಗಾಸಿಪ್​ ಕೇಳಿಬಂದಿದೆ. ಈ ಕುರಿತಂತೆ ಕೆಲವು ಮಾಧ್ಯಮಗಳು ವರದಿ ಪ್ರಕಟ ಮಾಡಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಯನತಾರಾ ಅವರಾಗಲಿ, ವಿಘ್ನೇಶ್​ ಶಿವನ್​ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಆಪ್ತ ಮೂಲಗಳ ಬಳಿ ವಿಚಾರಿಸಿಕೊಂಡು ಸತ್ಯ ಏನೆಂಬುದರ ಬಗ್ಗೆಯೂ ಕೆಲ ಮಾಧ್ಯಮಗಳು ತನಿಖೆ ಆರಂಭಿಸಿವೆ. ಹಾಗಾದರೆ ಈ ಗಾಸಿಪ್​ನ ಅಸಲಿಯತ್ತೇನು ಎಂಬುದು ತಿಳಿಯಲು ಈ ಸ್ಟೋರಿ ಓದಿ..

ದಕ್ಷಿಣ ಭಾರತದಲ್ಲಿ ನಯನತಾರಾ ಅವರಿಗೆ ಸಖತ್​ ಬೇಡಿಕೆ ಇದೆ. ಸ್ಟಾರ್​ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅತ್ತ ವಿಘ್ನೇಶ್​ ಶಿವನ್​ ಕೂಡ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಇವರಿಬ್ಬರು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನತಾರಾ ಅವರು ಹಣೆಗೆ ದೊಡ್ಡದಾಗಿ ಸಿಂಧೂರ ಹಾಕಿಕೊಂಡಿದ್ದನ್ನು ನೋಡಿ ಕೆಲವರಿಗೆ ಅನುಮಾನ ಬಂದಿದೆ. ವಿಘ್ನೇಶ್​ ಶಿವನ್​ ಜೊತೆ ಅವರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ವದಂತಿ ಹಬ್ಬಿದೆ.

ಕಳೆದ ವರ್ಷ ಒಂದು ಫೋಟೋ ಅಪ್​ಲೋಡ್​ ಮಾಡಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥದ ಬಗ್ಗೆ ಈ ಜೋಡಿ ಹಕ್ಕಿಗಳು ಸಂದೇಶ ನೀಡಿದ್ದವು. ಬಳಿಕ ಸಂದರ್ಶನವೊಂದರಲ್ಲಿ ಆ ವಿಚಾರವನ್ನು ನಯನಾತಾರ ಒಪ್ಪಿಕೊಂಡಿದ್ದರು. ಈಗ ಅವರು ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರೆ ಎಂಬ ಗುಸುಗುಸು ಹರಡಿದೆ. ಆದರೆ ಅವರ ಆಪ್ತಮೂಲಗಳ ಬೇರೆಯದೇ ಮಾತನ್ನು ಹೇಳುತ್ತಿವೆ.

‘ಈ ಜೋಡಿಯ ಬಗ್ಗೆ ಮೂರು ತಿಂಗಳಿಗೊಮ್ಮೆ ಈ ರೀತಿ ಗಾಸಿಪ್​ಗಳು ಕೇಳಿಬರುತ್ತಲೇ ಇರುತ್ತವೆ. ಚಿತ್ರರಂಗದಲ್ಲಿ ನಯನತಾರಾ ಬ್ಯುಸಿ ಆಗಿದ್ದಾರೆ. ಸದ್ಯಕ್ಕಂತೂ ಮದುವೆ ಆಗುವ ಆಲೋಚನೆ ಅವರಿಗೆ ಇಲ್ಲ. ಮದುವೆ, ಮಕ್ಕಳ ಕುರಿತ ಗಾಸಿಪ್​ ಕೇಳಿ ನಾವು ನಗುತ್ತಿದ್ದೇವೆ’ ಎಂದು ನಯನತಾರಾ ಅವರ ಆಪ್ತ ಮೂಲಗಳು ಹೇಳಿವೆ ಎಂದು ‘ಪಿಂಕ್​ವಿಲ್ಲಾ’ ವರದಿ ಮಾಡಿದೆ.

ಕಳೆದ ವರ್ಷ ವಿಘ್ನೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್​ ನಡೆಸಿದ್ದರು. ಆಗ ಬಹುತೇಕ ಅಭಿಮಾನಿಗಳು ಅವರ ಮದುವೆ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ‘ನಯನತಾರಾ ಜೊತೆ ನೀವಿನ್ನೂ ಯಾಕೆ ಮದುವೆ ಆಗಿಲ್ಲ’ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿತ್ತು. ಅದಕ್ಕೆ ಅವರು ಫನ್ನಿಯಾಗಿ ಉತ್ತರ ನೀಡಿದ್ದರು. ‘ಮದುವೆಗೆ ತುಂಬ ದುಡ್ಡು ಖರ್ಚಾಗುತ್ತದೆ. ಮದುವೆಗಾಗಿ ಹಣ ಉಳಿತಾಯ ಮಾಡುತ್ತಿದ್ದೇವೆ. ಕೊರೊನಾ ಹೋಗಲಿ ಅಂತ ಕಾಯುತ್ತಿದ್ದೇವೆ’ ಎಂದು ವಿಘ್ನೇಶ್​ ಶಿವನ್​ ಅವರು ಉತ್ತರ ನೀಡಿದ್ದರು. ಶಾರುಖ್​ ಖಾನ್​ ಮತ್ತು ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿದ್ದು, ಆ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾಗೆ ವಿಘ್ನೇಶ್​ ಶಿವನ್​ ನಿರ್ದೇಶನ ಮಾಡಿದ್ದು, ಅದರಲ್ಲಿ ವಿಜಯ್​ ಸೇತುಪತಿ, ಸಮಂತಾ, ನಯನಾತಾರಾ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ:

ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ