ನಯನತಾರಾ-ವಿಘ್ನೇಶ್ ಮದುವೆ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನ

ನಯನತಾರಾ-ವಿಘ್ನೇಶ್ ಮದುವೆ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನ
ನಯನತಾರಾ-ವೀಘ್ನೇಶ್

ನಯನತಾರಾ ಹಾಗೂ ವಿಘ್ನೇಶ್ ಈ ಬಾರಿ ಮದುವೆ ಆಗೋದು ಪಕ್ಕಾ ಆಗಿದೆ. ಇತ್ತೀಚೆಗೆ ತಿರುಪತಿಗೆ ಈ ಜೋಡಿ ಭೇಟಿ ನೀಡಿತ್ತು. ಇಲ್ಲಿಯೇ ಅವರು ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಮದುವೆಯ ಸಿದ್ಧತೆ ಬಗ್ಗೆ ತಿಳಿದುಕೊಳ್ಳಲು ಅವರು ತಿರುಪತಿಗೆ ಭೇಟಿ ನೀಡಿದ್ದರು ಎಂಬುದು ಮೂಲಗಳ ಮಾಹಿತಿ.

TV9kannada Web Team

| Edited By: Rajesh Duggumane

May 10, 2022 | 9:17 AM

ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್  ಶಿವನ್ (Vignesh Shivan) ಇಬ್ಬರ ನಡುವೆ ಪ್ರೀತಿ ಮೊಳೆತು ಹಲವು ವರ್ಷಗಳೇ ಕಳೆದಿವೆ. ಅಷ್ಟೇ ಅಲ್ಲ, ಇವರ ಮದುವೆ ವಿಚಾರ ಕೂಡ ಈ ಮೊದಲಿನಿಂದಲೂ ಚರ್ಚೆಯಲ್ಲಿದೆ. ಆದರೆ, ಕಾರಣಾಂತರಗಳಿಂದ ಇವರ ವಿವಾಹ ದಿನಾಂಕ ಮುಂದೂಡಲ್ಪಡುತ್ತಲೇ ಇದೆ. ಇಷ್ಟು ದಿನ ಈ ಜೋಡಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ವಿಘ್ನೇಶ್ ಹೊತ್ತಿದ್ದರೆ, ನಯನತಾರಾ ಹಾಗೂ ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಸಿನಿಮಾ ತೆರೆಗೆ ಬಂದಿದೆ. ಈ ಬೆನ್ನಲ್ಲೇ ಇವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇವರ ಮದುವೆಗೆ ಸಂಬಂಧಿಕರ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗುತ್ತಿದೆ.

ನಯನತಾರಾ ಹಾಗೂ ವಿಘ್ನೇಶ್ ಈ ಬಾರಿ ಮದುವೆ ಆಗೋದು ಪಕ್ಕಾ ಆಗಿದೆ. ಇತ್ತೀಚೆಗೆ ತಿರುಪತಿಗೆ ಈ ಜೋಡಿ ಭೇಟಿ ನೀಡಿತ್ತು. ಇಲ್ಲಿಯೇ ಅವರು ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಮದುವೆಯ ಸಿದ್ಧತೆ ಬಗ್ಗೆ ತಿಳಿದುಕೊಳ್ಳಲು ಅವರು ತಿರುಪತಿಗೆ ಭೇಟಿ ನೀಡಿದ್ದರು ಎಂಬುದು ಮೂಲಗಳ ಮಾಹಿತಿ. ಆದರೆ, ಈ ಬಗ್ಗೆ ಈ ಜೋಡಿಯಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಜೂನ್​ 9ರಂದು ಇವರು ಹೊಸ ಜೀವನ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ವಿಘ್ನೇಶ್​ ಅವರ ಸಂಬಂಧಿಕರು ಮದುವೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಮಣಿಕ್ಕಮ್ ಎಂಬುವವರು ಸುದ್ದಿವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಇವರು ವಿಘ್ನೇಶ್ ಸಂಬಂಧಿ. ‘ಜೂನ್​ 9ಕ್ಕೆ ವಿಘ್ನೇಶ್​-ನಯನತಾರಾ ಮದುವೆ ನಡೆಯಲಿದೆ. ಆದರೆ, ನಮಗೆ ಈ ಬಗ್ಗೆ ಯಾವುದೇ ಆಮಂತ್ರಣ ಬಂದಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಕಳೆದ ವರ್ಷ ವಿಘ್ನೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್​ ನಡೆಸಿದ್ದರು. ಆಗ ಬಹುತೇಕ ಅಭಿಮಾನಿಗಳು ಅವರ ಮದುವೆ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ‘ನಯನತಾರಾ ಜೊತೆ ನೀವಿನ್ನೂ ಯಾಕೆ ಮದುವೆ ಆಗಿಲ್ಲ’ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿತ್ತು. ಅದಕ್ಕೆ ಅವರು ಫನ್ನಿಯಾಗಿ ಉತ್ತರ ನೀಡಿದ್ದರು. ‘ಮದುವೆಗೆ ತುಂಬ ದುಡ್ಡು ಖರ್ಚಾಗುತ್ತದೆ. ಮದುವೆಗಾಗಿ ಹಣ ಉಳಿತಾಯ ಮಾಡುತ್ತಿದ್ದೇವೆ. ಕೊರೊನಾ ಹೋಗಲಿ ಅಂತ ಕಾಯುತ್ತಿದ್ದೇವೆ’ ಎಂದು ವಿಘ್ನೇಶ್​ ಶಿವನ್​ ಅವರು ಉತ್ತರ ನೀಡಿದ್ದರು. ಶಾರುಖ್​ ಖಾನ್​ ಮತ್ತು ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿದ್ದು, ಆ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada