Avatar 2 Trailer: ‘ಅವತಾರ್​’ ಸೀಕ್ವೆಲ್​ನ ಟ್ರೇಲರ್ ರಿಲೀಸ್​; ಹೇಗಿದೆ ನೋಡಿ ಹೊಸ ಲೋಕ

Avatar The Way of Water Trailer: ‘ಅವತಾರ್​’ ಸಿನಿಮಾ ಸಂಪೂರ್ಣ ಕಾಡಿನ ಹಿನ್ನೆಲೆಯಲ್ಲಿ ಸಾಗಿತ್ತು. ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಹೆಸರೇ ಹೇಳುವಂತೆ ನೀರಿನ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಟ್ರೇಲರ್​ನಲ್ಲಿ ಬರುವ ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Avatar 2 Trailer: ‘ಅವತಾರ್​’ ಸೀಕ್ವೆಲ್​ನ ಟ್ರೇಲರ್ ರಿಲೀಸ್​; ಹೇಗಿದೆ ನೋಡಿ ಹೊಸ ಲೋಕ
ಅವತಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 10, 2022 | 10:18 AM

2009ರಲ್ಲಿ ತೆರೆಗೆ ಬಂದ ‘ಅವತಾರ್​’ ಸಿನಿಮಾ (Avatar Movie) ಸಾಕಷ್ಟು ದಾಖಲೆಗಳನ್ನು ಸೃಷ್ಟಿ ಮಾಡಿತ್ತು. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಇದೆ. ಈಗ, ಈ ಸಿನಿಮಾದ ಸೀಕ್ವೆಲ್ ಬರುತ್ತಿದೆ. ‘ಅವತಾರ್​: ದಿ ವೇ ಆಫ್​ ವಾಟರ್’ ಹೆಸರಿನಲ್ಲಿ (Avatar: The Way Of Water) ಮೂಡಿ ಬರುತ್ತಿರುವ ಈ ಸೀಕ್ವೆಲ್​ನ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಹೇಗಿರಲಿದೆ, ಚಿತ್ರದ ಗ್ರಾಫಿಕ್ಸ್​ ಎಷ್ಟು ಉತ್ಕೃಷ್ಟಮಟ್ಟದಲ್ಲಿ ಇರಲಿದೆ ಎಂಬುದನ್ನು ಈ ಟ್ರೇಲರ್ ತೋರಿಸುತ್ತದೆ. ರಿಲೀಸ್ ಆದ ಕೇವಲ 12 ಗಂಟೆಗಳಲ್ಲಿ ಈ ಟ್ರೇಲರ್ 20 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಸಿನಿಮಾ ವಿಶ್ಯುವಲ್ಸ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

‘ಅವತಾರ್​’ ಸಿನಿಮಾ ಸಂಪೂರ್ಣ ಕಾಡಿನ ಹಿನ್ನೆಲೆಯಲ್ಲಿ ಸಾಗಿತ್ತು. ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಹೆಸರೇ ಹೇಳುವಂತೆ ನೀರಿನ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಟ್ರೇಲರ್​ನಲ್ಲಿ ಬರುವ ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಡಾಕ್ಟರ್​ ಸ್ಟ್ರೇಂಜ್​’ ಸಿನಿಮಾದ ಸೀಕ್ವೆಲ್ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರದ ಆರಂಭದಲ್ಲಿ ‘ಅವತಾರ್​: ದಿ ವೇ ಆಫ್​ ವಾಟರ್​’ನ ಟ್ರೇಲರ್ ಬಿತ್ತರಗೊಂಡಿದೆ. 3ಡಿಯಲ್ಲಿ ಈ ಟ್ರೇಲರ್ ನೋಡಿ ಸಿನಿಪ್ರಿಯರು ಮತ್ತಷ್ಟು ಥ್ರಿಲ್ ಆಗಿದ್ದಾರೆ. ‘ಅವತಾರ್​ ಸೀಕ್ವೆಲ್​ ಚಿತ್ರವನ್ನು 3ಡಿಯಲ್ಲಿ ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ.

ಐದು ಸಿನಿಮಾಗಳು ‘ಅವತಾರ’ ಸರಣಿಯಿಂದ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳು ಹಿಡಿದಿವೆ. ‘ಅವತಾರ್ 2’ ಜತೆಗೆ ಇನ್ನುಳಿದ ಮೂರು ಸಿನಿಮಾಗಳ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ. ‘ಅವತಾರ್ 3’ 2024ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ‘ಅವತಾರ್ 4’ ಡಿಸೆಂಬರ್ 18, 2026ರಂದು ರಿಲೀಸ್ ಆಗುತ್ತಿದೆ. ‘ಅವತಾರ್ 5’ 2028ರ ಡಿಸೆಂಬರ್ 22ರಂದು ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ
Image
ವಿಜಯ್ ದೇವರಕೊಂಡ ಬರ್ತ್​ಡೇಗೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್​
Image
ಭಾರತದಲ್ಲಿ ಮೂರು ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಡಾಕ್ಟರ್​ ಸ್ಟ್ರೇಂಜ್’ ಸೀಕ್ವೆಲ್
Image
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
Image
13 ವರ್ಷಗಳ ಬಳಿಕ ಬರುತ್ತಿದೆ ‘ಅವತಾರ್’ ಸೀಕ್ವೆಲ್​; ವರ್ಷಾಂತ್ಯಕ್ಕೆ ‘ಅವತಾರ್​ 2’, 2028ಕ್ಕೆ ‘ಅವತಾರ್​ 5’

ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್​ಮಸ್ ಇರುವುದರಿಂದ ದೊಡ್ಡ ಸಿನಿಮಾ ನಿರ್ಮಾಪಕರು ಈ ಸಂದರ್ಭದಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡಲು ಆದ್ಯತೆ ನೀಡುತ್ತಾರೆ. ಕಳೆದ ವರ್ಷ ಡಿಸೆಂಬರ್ 16ರಂದು ‘ಸ್ಪೈಡರ್​ ಮ್ಯಾನ್: ನೋ ವೇ ಹೋಂ’ ಚಿತ್ರ ರಿಲೀಸ್ ಆಗಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಬಾರಿ ರಿಲೀಸ್ ಆಗುತ್ತಿರುವ ಅವತಾರ್​: ದಿ ವೇ ಆಫ್​ ವಾಟರ್’ ಸಿನಿಮಾ ಯಾವ ರೀತಿಯಲ್ಲಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:06 am, Tue, 10 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ