ವಿಜಯ್ ದೇವರಕೊಂಡ ಬರ್ತ್​ಡೇಗೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್​

ವಿಜಯ್ ದೇವರಕೊಂಡ ಬರ್ತ್​ಡೇಗೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್​
ವಿಜಯ್-ರಶ್ಮಿಕಾ

ಮೇ 9 ವಿಜಯ್ ದೇವರಕೊಂಡ ಜನ್ಮದಿನ. ಈ ವಿಶೇಷ ದಿನದಂದು ಅವರ ಫ್ಯಾನ್ಸ್ ವಿಶ್​ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರೀತಿಯಿಂದ ಶುಭಕೋರಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಕಡೆಯಿಂದ ಕೋನೆಪಕ್ಷ ಒಂದು ಸ್ಟೇಟಸ್​ ಕೂಡ ಬಂದಿಲ್ಲ.

TV9kannada Web Team

| Edited By: Rajesh Duggumane

May 10, 2022 | 9:45 AM

ವಿಜಯ್​ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಡುವೆ ಒಳ್ಳೆಯ ಗೆಳೆತನವಿದೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಇವರಿಬ್ಬರ ಸಂಬಂಧ ಗೆಳೆತನಕ್ಕೆ ಮಾತ್ರ ಸೀಮಿತವಾಗಿಲ್ಲ, ಇವರು ಕಪಲ್ಸ್​ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಆದರೆ, ಈ ಜೋಡಿ ಆ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅನೇಕ ಬಾರಿ ಮುಂಬೈ ಬೀದಿಗಳಲ್ಲಿ ಇವರು ಒಟ್ಟಾಗಿ ತಿರುಗಿದ್ದಿದೆ. ಆದರೆ, ಈಗ ಇವರ ವಿಚಾರದಲ್ಲಿ ಅಭಿಮಾನಿಗಳಿಗೆ ಸಣ್ಣ ಅನುಮಾನವೊಂದು ಮೂಡಿದೆ. ಫ್ಯಾನ್ಸ್​ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ, ವಿಜಯ್ ದೇವರಕೊಂಡ ಬರ್ತ್​​ಡೇಗೆ (Vijay Devarakonda Birthday) ರಶ್ಮಿಕಾ ವಿಶ್ ಮಾಡದೆ ಇರುವುದು.

ಮೇ 9 ವಿಜಯ್ ದೇವರಕೊಂಡ ಜನ್ಮದಿನ. ಈ ವಿಶೇಷ ದಿನದಂದು ಅವರ ಫ್ಯಾನ್ಸ್ ವಿಶ್​ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರೀತಿಯಿಂದ ಶುಭಕೋರಿದ್ದಾರೆ. ಸಮಂತಾ ಅವರು ವಿಜಯ್ ದೇವರಕೊಂಡ ಜತೆಗಿನ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಕಡೆಯಿಂದ ಕೊನೆಪಕ್ಷ ಒಂದು ಸ್ಟೇಟಸ್​ ಕೂಡ ಬಂದಿಲ್ಲ. ಇದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

‘ಗೀತ ಗೋವಿಂದಂ’ ಸಿನಿಮಾ ಮೂಲಕ ವಿಜಯ್ ಹಾಗೂ ರಶ್ಮಿಕಾ ಮೊದಲ ಬಾರಿಗೆ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲಿ ಲಿಪ್​ಲಾಕ್​ ದೃಶ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಸಿನಿಮಾ ತೆರೆಕಂಡ ಬಳಿಕ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ‘ಡಿಯರ್ ಕಾಮ್ರೇಡ್​’ ಸಿನಿಮಾದಲ್ಲಿ ಇಬ್ಬರೂ ಮತ್ತೆ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲೂ ಲಿಪ್​ಲಾಕ್​ ದೃಶ್ಯಗಳು ಮುಂದುವರಿದವು. ಇದಕ್ಕೆ ಕೆಲವರು ನೆಗೆಟಿವ್ ಕಮೆಂಟ್ ಮಾಡಿದರೂ ರಶ್ಮಿಕಾ ತಲೆಕೆಡಿಸಿಕೊಂಡಿರಲಿಲ್ಲ.

ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರು ಹಿಂದಿಯಲ್ಲಿ ‘ಗುಡ್​ಬೈ’ ಹಾಗೂ ‘ಮಿಷನ್​ ಮಜ್ನು’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಲೈಗರ್’ ಸಿನಿಮಾ ಮೂಲಕ ವಿಜಯ್ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ, ಇಬ್ಬರೂ ಮುಂಬೈನಲ್ಲಿ ಸಾಕಷ್ಟು ಸಮಯ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ವೇಳೆ ಜಿಮ್​ನಲ್ಲಿ, ಹೋಟೆಲ್​ನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇವರ ನಡುವೆ ಪ್ರೀತಿ ಇದೆ ಎನ್ನುವ ಮಾತು ಗಾಸಿಪ್ ಮಂದಿಯ ಬಾಯಿಂದ ಕೇಳಿ ಬಂದಿತ್ತು.

ಮೇ 9ರ ಬೆಳವಣಿಗೆ ಈಗ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬೇರೆ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ವಿಶ್ ಮಾಡಿಲ್ಲ. ಇದನ್ನು ನೋಡಿ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳದೆ ಇರುವುದು ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಅನುಮಾನವನ್ನು ಹೆಚ್ಚಿಸಿದೆ. ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada