Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!

Vighnesh Shivan: ಈ ವಾರದ ಆರಂಭದಲ್ಲಿ ವಿಘ್ನೇಶ್ ಶಿವನ್ ಅವರ ಕುಟುಂಬದ ದೇವಸ್ಥಾನಕ್ಕೆ ನಯನತಾರಾ ಭೇಟಿ ನೀಡಿದ್ದಾರೆ. ತಮಿಳುನಾಡಿನ ವಲತ್ತೂರಿನಲ್ಲಿರುವ ಪಾಪನಾಶಂ ದೇವಾಲಯಕ್ಕೆ ಒಟ್ಟಾಗಿ ತೆರಳಿದ್ದ ಈ ಜೋಡಿ ಅಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮತ್ತೊಮ್ಮೆ ಈ ತಾರಾ ಜೋಡಿಯ ವಿವಾಹದ ವಿಚಾರ ಮುನ್ನೆಲೆಗೆ ಬಂದಿದೆ.

Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!
ವಿಘ್ನೇಶ್​ ಶಿವನ್​, ನಯನತಾರಾ
Follow us
TV9 Web
| Updated By: shivaprasad.hs

Updated on: May 26, 2022 | 8:11 AM

ಕಾಲಿವುಡ್​ನ ತಾರಾ ಜೋಡಿ ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ (Vighnesh Shivan) ಕಳೆದ ಕೆಲವು ದಿನಗಳಿಂದ ಒಟ್ಟಾಗಿ ಸುತ್ತುತ್ತಿದ್ದಾರೆ. ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಕೆಲವು ದಿನಗಳ ನಂತರ ಆ ಬಗ್ಗೆ ಮೌನ ಮುರಿದಿದ್ದರು. ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಯನತಾರಾ ಮದುವೆಯ ಆಗುವಾಗ ಎಲ್ಲಾ ಅಭಿಮಾನಿಗಳಿಗೆ ತಿಳಿಸಿಯೇ ಆಗುತ್ತೇನೆ ಎಂದಿದ್ದರು. ಆದರೆ ಸದ್ಯ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸುತ್ತಾಟಗಳನ್ನು ಗಮನಿಸಿದವರಿಗೆ ಅವರು ಈಗಾಗಲೇ ಮದುವೆಯ ತಯಾರಿಯಲ್ಲಿದ್ದಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ವಾರದ ಆರಂಭದಲ್ಲಿ ವಿಘ್ನೇಶ್ ಶಿವನ್ ಅವರ ಕುಟುಂಬದ ದೇವಸ್ಥಾನಕ್ಕೆ ನಯನತಾರಾ ಭೇಟಿ ನೀಡಿದ್ದಾರೆ. ತಮಿಳುನಾಡಿನ ವಲತ್ತೂರಿನಲ್ಲಿರುವ ಪಾಪನಾಶಂ ದೇವಾಲಯಕ್ಕೆ ಒಟ್ಟಾಗಿ ತೆರಳಿದ್ದ ಈ ಜೋಡಿ ಅಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮತ್ತೊಮ್ಮೆ ಈ ತಾರಾ ಜೋಡಿಯ ವಿವಾಹದ ವಿಚಾರ ಮುನ್ನೆಲೆಗೆ ಬಂದಿದೆ.

ಈ ಮೊದಲು ಮಾರ್ಚ್​ನಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ ಈರ್ವರೂ ಅಲ್ಲಿ ಮದುವೆ ಆಗಿದ್ಧಾರೆಂಬ ಗುಲ್ಲೂ ಹಬ್ಬಿತ್ತು. ನಂತರದಲ್ಲಿ ಅದು ಸುಳ್ಳೆಂದು ಸಾಬೀತಾಗಿತ್ತು. ಪ್ರಸ್ತುತ ತಮಿಳು ಚಿತ್ರರಂಗದ ಈ ಜೋಡಿ ಹೀಗೆ ದೇವಾಲಯಗಳಿಗೆ ಭೇಟಿ ನೀಡುತ್ತಾ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಶೀಘ್ರದಲ್ಲೇ ಈರ್ವರೂ ವಿವಾಹವಾಗಲಿದ್ಧಾರೆ ಎಂಬ ಸುದ್ದಿಗಳಿಗೆ ಪುಷ್ಠಿ ನೀಡಿದೆ. ಆದರೆ ಈ ಬಗ್ಗೆ ತಾರಾ ಜೋಡಿ ಮಾತ್ರ ಮೌನಮುರಿದಿಲ್ಲ.

ಇದನ್ನೂ ಓದಿ
Image
ಒಟಿಟಿಗೆ ಲಗ್ಗೆ ಇಡುತ್ತಿದೆ ‘ಹೀರೋಪಂತಿ 2’; ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡ ಟೈಗರ್
Image
Gujarat Titans: ಐಪಿಎಲ್​ 2022ರ ಮೊದಲ ಫೈನಲಿಸ್ಟ್ ‘ಗುಜರಾತ್ ಟೈಟನ್ಸ್’ ಆಟಗಾರರ ಪತ್ನಿಯರು ಇವರೇ ನೋಡಿ
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ
Image
ಮೇ ತಿಂಗಳನ್ನು ಕಳೆದಿದ್ದು ಹೇಗೆ ಎಂಬುದನ್ನು ಫೋಟೋ ಮೂಲಕ ವಿವರಿಸಿದ ಜಾನ್ವಿ ಕಪೂರ್

ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ದೇವಾಲಯಕ್ಕೆ ನಯನತಾರಾ ತೆರಳುತ್ತಿರುವಾಗ ಅವರಿಗೆ ವಿಘ್ನೇಶ್ ಶಿವನ್ ಬೆಂಗಾವಲಾಗಿದ್ದಾರೆ. ವಿವಾಹದ ಸಂದರ್ಭದಲ್ಲಿ ಕುಟುಂಬದ ದೇವರ ಆಶೀರ್ವಾದ ಪಡೆಯುವುದು ಪ್ರಮುಖವಾಗಿದ್ದು, ಈರ್ವರೂ ಅದೇ ಕಾರಣಕ್ಕೆ ದೇವಸ್ಥಾನಕ್ಕೆ ಬಂದಿದ್ದಾರೆಯೇ? ಎಂದು ಟ್ವಿಟರ್​ನಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ನಯನತಾರಾರ ವಿವಾಹದ ವಿಚಾರದ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯುತ್ತಿರುವುದು ಸುಳ್ಳಲ್ಲ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಕಳೆದ ಕೆಲವು ಸಮಯದ ಹಿಂದೆ ವಿಘ್ನೇಶ್ ಶಿವನ್ ನಿರ್ದೇಶನದ ‘ಕಾಥುವಾಕುಲ ರೆಂಡು ಕಾದಲ್’ ತೆರೆಕಂಡಿತ್ತು. ನಯನತಾರಾ ಆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ಹಾಗೂ ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ತ್ರಿಕೋನ ಪ್ರೇಮಕತೆಯ ಆ ಚಿತ್ರ ಗಮನಸೆಳೆದಿತ್ತು.

ಇದಲ್ಲದೇ ನಯನತಾರಾ ‘ಗಾಡ್​ಫಾದರ್’ ಚಿತ್ರದ ರಿಲೀಸ್​ಗೆ ಕಾಯುತ್ತಿದ್ದಾರೆ. ಚಿರಂಜೀವಿ ಅವರ ಸಹೋದರಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಲೂಸಿಫರ್​’ನ ರಿಮೇಕ್ ಇದಾಗಿದೆ. ಸರ್ವೈವಲ್ ಥ್ರಿಲ್ಲರ್ ಮಾದರಿಯ ‘ಒ2’ನಲ್ಲೂ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ