Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

Nayanthara Vignesh Shivan Wedding: ಅನೇಕರಿಗೆ ವಿಘ್ನೇಶ್​ ಶಿವನ್​ ಥ್ಯಾಂಕ್ಸ್​ ಹೇಳಿದ್ದಾರೆ. ‘ನನ್ನ ಬದುಕಿನ ಪ್ರೀತಿಯಾದ ನಯನತಾರಾಗೆ ಇದೆಲ್ಲವೂ ಅರ್ಪಣೆ’ ಎಂದು ಅವರು ಬರೆದುಕೊಂಡಿದ್ದಾರೆ.

Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​
ವಿಘ್ನೇಶ್ ಶಿವನ್, ನಯನತಾರಾ
Follow us
TV9 Web
| Updated By: ಮದನ್​ ಕುಮಾರ್​

Updated on:Jun 09, 2022 | 12:03 PM

ನಿರ್ದೇಶಕ ವಿಘ್ನೇಶ್​ ಶಿವನ್​ ಮತ್ತು ನಟಿ ನಯನತಾರಾ (Nayanthara) ಅವರ ಲವ್​ ಸ್ಟೋರಿ ರಹಸ್ಯವಾಗಿ ಉಳಿದಿಲ್ಲ. ಹಲವು ವರ್ಷಗಳ ಕಾಲ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಚೆನ್ನೈನಲ್ಲಿ ಜೂನ್​ 9ರಂದು ನಯನತಾರ ಹಾಗೂ ವಿಘ್ನೇಶ್​ ಶಿವನ್​ ಮದುವೆ ನೆರವೇರುತ್ತಿದೆ. ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅವರೆಲ್ಲರೂ ಆಗಮಿಸುವ ನಿರೀಕ್ಷೆ ಇದೆ. ಈ ಜೋಡಿಯ ಮದುವೆ (Nayanathara Vignesh Shivan Marriage) ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಇತ್ತೀಚೆಗೆ ಇವರ ಮದುವೆಯ ಆಹ್ವಾನ ಪತ್ರಿಕೆ ವೈರಲ್​ ಆಗಿತ್ತು. ವಿವಾಹಕ್ಕೆ ಕೆಲವೇ ಗಂಟೆಗಳು ಇದೆ ಎನ್ನುವಾಗ ವಿಘ್ನೇಶ್​ ಶಿವನ್​ (Vignesh Shivan) ಅವರು ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಅಧಿಕೃತವಾಗಿ ವಿಷಯ ತಿಳಿಸಿದ್ದಾರೆ. ಮದುವೆಯ ಹೊಸ್ತಿಲಿನಲ್ಲಿ ಅವರು ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ.

ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ಕೂಡ ಅವರಿಬ್ಬರ ಫೋಟೋಗಳೇ ಎಲ್ಲದಕ್ಕೂ ಸಾಕ್ಷಿ ಒದಗಿಸುವಂತಿದ್ದವು. ಅಂತೂ ಈ ಪ್ರೇಮಪಕ್ಷಿಗಳು ಈಗ ಬಾಳ ಬಂಧನಕ್ಕೆ ಒಳಗಾಗುತ್ತಿವೆ. ಅವರಿಗೆ ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಮತ್ತು ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
Image
ನಯನತಾರಾ- ವಿಘ್ನೇಶ್ ಮದುವೆಗೆ ಹಾಜರಿ ಹಾಕುವ ಸೆಲೆಬ್ರಿಟಿಗಳು ಯಾರ್ಯಾರು? ಇಲ್ಲಿದೆ ಲಿಸ್ಟ್
Image
ನಯನತಾರಾ-ವಿಘ್ನೇಶ್​ ಮದುವೆ ಒಟಿಟಿಯಲ್ಲಿ ಪ್ರಸಾರ? ಇದನ್ನು ಖರೀದಿಸಿದ್ದು ಯಾರು?
Image
ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?
Image
ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ ನಯನತಾರಾ? ಏನು ಇದರ ಅಸಲಿ ಸಮಾಚಾರ?

ಇದನ್ನೂ ಓದಿ: ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?

ಪ್ರೇಯಸಿಯ ಜೊತೆ ಹಸೆಮಣೆ ಏರುವುದಕ್ಕಿಂತ ಕೆಲವೇ ಗಂಟೆಗಳ ಮುನ್ನ ವಿಘ್ನೇಶ್​ ಶಿವನ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಹಲವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾವುದೇ ವ್ಯಕ್ತಿಯ ಹೆಸರನ್ನು ಅವರು ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ. ತಮ್ಮ ಜೀವನದಲ್ಲಿ ಖುಷಿ ನೀಡಿದ ಎಲ್ಲರಿಗೂ ಅವರು ಥ್ಯಾಂಕ್ಸ್​ ಹೇಳಿದ್ದಾರೆ. ‘ನನ್ನ ಬದುಕಿನ ಪ್ರೀತಿಯಾದ ನಯನತಾರಾಗೆ ಇದೆಲ್ಲವೂ ಅರ್ಪಣೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ದೇವರಿಗೆ, ಜಗತ್ತಿಗೆ, ನನ್ನ ಬದುಕಿನಲ್ಲಿ ಬಂದ ಎಲ್ಲ ಒಳ್ಳೆಯ ವ್ಯಕ್ತಿಗಳಿಗೆ ಧನ್ಯವಾದಗಳು. ಪ್ರತಿಯೊಂದು ಒಳ್ಳೆಯ ಜೀವ, ಪ್ರತಿಯೊಂದು ಒಳ್ಳೆಯ ಕ್ಷಣ, ಪ್ರತಿ ಹಾರೈಕೆ ಮತ್ತು ಪ್ರತಿ ಪ್ರಾರ್ಥನೆಯಿಂದ ಬದುಕು ಇಷ್ಟು ಸುಂದರವಾಗಿದೆ’ ಎಂದು ವಿಘ್ನೇಶ್​ ಶಿವನ್​ ಬರೆದುಕೊಂಡಿದ್ದಾರೆ. ಜೊತೆಗೆ ಒಂದಷ್ಟು ಫೋಟೋಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ನಯನತಾರಾ ಅವರು ಬಹುಭಾಷೆಯಲ್ಲಿ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ವಿಘ್ನೇಶ್​ ಶಿವನ್​ ಅವರು ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಖ್ಯಾತಿ ಗಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:36 am, Thu, 9 June 22

ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್