AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಹಾಡಿನಲ್ಲಿ ನಟ ಗೋವಿಂದ ಬಿಂದಾಸ್​ ಡ್ಯಾನ್ಸ್​; ಇದು ‘ಪುಷ್ಪ’ಗಿಂತ ಭಯಂಕರವಾಗಿದೆ ಎಂದ ಫ್ಯಾನ್ಸ್​

ಹೊಸ ಹಾಡಿನಲ್ಲಿ ಜೂಹೀ ಖಾನ್​ ಜತೆ ಗೋವಿಂದ ಹೆಜ್ಜೆ ಹಾಕಿದ್ದಾರೆ. ‘ಸಿನಿಮಾ ಮಾಡದೆಯೂ ಒಂದು ಕಥೆಯನ್ನು ನಿರೂಪಿಸುವ ಸಾಮರ್ಥ್ಯ ಹಾಡಿಗೆ ಇದೆ ಅಂತ ನಾನು ನಂಬಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಹೊಸ ಹಾಡಿನಲ್ಲಿ ನಟ ಗೋವಿಂದ ಬಿಂದಾಸ್​ ಡ್ಯಾನ್ಸ್​; ಇದು ‘ಪುಷ್ಪ’ಗಿಂತ ಭಯಂಕರವಾಗಿದೆ ಎಂದ ಫ್ಯಾನ್ಸ್​
ಜೂಹೀ ಖಾನ್, ಗೋವಿಂದ
TV9 Web
| Edited By: |

Updated on:Jun 09, 2022 | 8:19 AM

Share

ಬಾಲಿವುಡ್​ನ ಖ್ಯಾತ ನಟ ಗೋವಿಂದ (Govinda) ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಮೊದಲಿನ ಹಾಗೆ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿಲ್ಲ. ಒಂದು ಕಾಲದಲ್ಲಿ ಪ್ರತಿ ವರ್ಷಕ್ಕೆ ಗೋವಿಂದ ನಟನೆಯ 6-7 ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆದರೆ ಈಗ ಅವರು ಗಡಿಬಿಡಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಮ್ಯೂಸಿಕ್ ವಿಡಿಯೋಗಳ (Music Video) ಮೂಲಕ ಜನರನ್ನು ರಂಜಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಕಚಗುಳಿ ಇಡುವಂತಹ ಹಾಸ್ಯ ಮತ್ತು ಮನ ಸೆಳೆಯುವಂತಹ ಡ್ಯಾನ್ಸ್​ ಮೂಲಕ ಫೇಮಸ್​ ಆದವರು ಗೋವಿಂದ. ಅವರ ಡ್ಯಾನ್ಸ್​ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದುಂಟು. ಈಗ ಗೋವಿಂದ ಅವರು ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆಯಲ್ಲಿ ಅವರು ಹೆಜ್ಜೆ ಹಾಕಿದ ಪರಿಗೆ ಫ್ಯಾನ್ಸ್ ವಾವ್​ ಎನ್ನುತ್ತಿದ್ದಾರೆ. ‘ಪ್ರೇಮ್​ ಕರೂ ಚು..’ ಎಂಬ ಈ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ (Ganesh Acharya) ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಗೋವಿಂದ ಅವರು ತಮ್ಮದೇ ಯೂಟ್ಯೂಬ್​​ ಚಾನೆಲ್​ ಹೊಂದಿದ್ದಾರೆ. ಅದರಲ್ಲಿ ಈ ಹೊಸ ಹಾಡು ಬಿಡುಗಡೆ ಆಗಿದೆ. ನಟಿ ಜೂಹೀ ಖಾನ್​ ಜೊತೆ ಗೋವಿಂದ ಸಖತ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅವರಿಗೆ ಈಗ 58 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಎನರ್ಜಿಟಿಕ್​ ಆಗಿ ಡ್ಯಾನ್ಸ್​ ಮಾಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ವಾವ್​.. ಏನು ಹೇಳಬೇಕು ಅಂತ ನನಗೆ ತಿಳಿಯುತ್ತಿಲ್ಲ. ನಿಮ್ಮ ಎನರ್ಜಿ ಬೆಂಕಿಯಂತಿದೆ. ‘ಪುಷ್ಪ’ಗಿಂತಲೂ ಭಯಂಕರವಾಗಿದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
Image
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​
Image
150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ
Image
ಹಾಲಿವುಡ್​ನ ಚಾಕೊಲೇಟ್​ ತಂದು ಬಾಲಿವುಡ್​ನಲ್ಲಿ ಗೋಲ್​ಗಪ್ಪ ಮಾಡಿದ ಆಮಿರ್​ ಖಾನ್​; ಸಖತ್​ ಟ್ರೋಲ್​
Image
ಬಾಲಿವುಡ್​ನಲ್ಲಿ ಸೋತವರ ಮಧ್ಯೆ ಗೆದ್ದ ನಿರ್ಮಾಪಕರ ಹೊಸ ಪ್ಲ್ಯಾನ್​; ಮತ್ತೆ ಬರ್ತಾನೆ ‘ಕಬೀರ್​ ಸಿಂಗ್​’

1998ರಲ್ಲಿ ಗೋವಿಂದ ಅವರು ತಮ್ಮ ಮೊದಲ ಮ್ಯೂಸಿಕ್​ ಆಲ್ಬಂ ರಿಲೀಸ್​ ಮಾಡಿದ್ದರು. ನಂತರ 2013ರಲ್ಲಿ ‘ಗೋರಿ ಥೇರೆ ನೈನಾ’ ಆಲ್ಬಂ ಬಿಡುಗಡೆ ಆಯಿತು. ಈಗ ಸಿಂಗಲ್ಸ್​ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು ಅವು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. ‘ಸಿನಿಮಾ ಮಾಡದೆಯೂ ಒಂದು ಕಥೆಯನ್ನು ನಿರೂಪಿಸುವ ಸಾಮರ್ಥ್ಯ ಹಾಡಿಗೆ ಇದೆ ಅಂತ ನಾನು ನಂಬಿದ್ದೇನೆ. ಪ್ರೇಕ್ಷಕರಿಗೆ ನಾನು ಅತ್ಯುತ್ತಮವಾದದ್ದನ್ನು ನೀಡಲು ಸದಾ ಪ್ರಯತ್ನಿಸುತ್ತೇನೆ’ ಎಂದು ಗೋವಿಂದ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Thu, 9 June 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ