ಬಾಲಿವುಡ್​ನಲ್ಲಿ ಸೋತವರ ಮಧ್ಯೆ ಗೆದ್ದ ನಿರ್ಮಾಪಕರ ಹೊಸ ಪ್ಲ್ಯಾನ್​; ಮತ್ತೆ ಬರ್ತಾನೆ ‘ಕಬೀರ್​ ಸಿಂಗ್​’

Kabir Singh 2: ಯಶಸ್ವಿ ಚಿತ್ರಕ್ಕೆ ಉತ್ತಮ ರೀತಿಯಲ್ಲಿ ಸೀಕ್ವೆಲ್​ ಮಾಡಿದರೆ ಗೆಲುವು ಸಿಗುತ್ತದೆ ಎಂಬ ಸೂತ್ರವನ್ನು ನಿರ್ಮಾಪಕರು ಕಂಡುಕೊಂಡಂತಿದೆ. ಹಾಗಾಗಿ ‘ಕಬೀರ್​ ಸಿಂಗ್​ 2’ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಬಾಲಿವುಡ್​ನಲ್ಲಿ ಸೋತವರ ಮಧ್ಯೆ ಗೆದ್ದ ನಿರ್ಮಾಪಕರ ಹೊಸ ಪ್ಲ್ಯಾನ್​; ಮತ್ತೆ ಬರ್ತಾನೆ ‘ಕಬೀರ್​ ಸಿಂಗ್​’
ಶಾಹಿದ್​ ಕಪೂರ್​, ಕಿಯಾರಾ ಅಡ್ವಾನಿ
Follow us
TV9 Web
| Updated By: ಮದನ್​ ಕುಮಾರ್​

Updated on: May 28, 2022 | 2:17 PM

ಅನೇಕ ದಶಕಗಳಿಂದ ಮಿಂಚಿ ಮೆರೆಯುತ್ತಿದ್ದ ಹಿಂದಿ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಅದೃಷ್ಟ ಕೈ ಕೊಟ್ಟಿದೆ. ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ಎದುರು ಬಾಲಿವುಡ್ (Bollywood)​ ಸಿನಿಮಾಗಳು ಹೀನಾಯವಾಗಿ ಸೋತಿವೆ. ಬಿ-ಟೌನ್​ ಸೆಲೆಬ್ರಿಟಿಗಳು ಮುಂದೇನು ಎಂದು ಯೋಚಿಸುವಂತಾಗಿದೆ. ‘ಆರ್​ಆರ್​ಆರ್​’, ‘ಪುಷ್ಪ’, ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳ ಭಾರಿ ಯಶಸ್ಸಿನ ಮುಂದೆ ಹಿಂದಿ ಚಿತ್ರಗಳು ಮಂಕಾದವು. ದೊಡ್ಡ ದೊಡ್ಡ ಸ್ಟಾರ್​ ನಟರ ಚಿತ್ರಗಳು ಕೂಡ ರಿಲೀಸ್​ ದಿನಾಂಕ ಮುಂದೂಡಿಕೊಂಡವು. ಇಷ್ಟೆಲ್ಲ ಆದಮೇಲೆ ಬಾಲಿವುಡ್​ ಪಾಲಿಗೆ ಗೆಲುವು ಸಿಕ್ಕಿದ್ದು ‘ಭೂಲ್ ಭುಲಯ್ಯ 2’ (Bhool Bhulaiyaa 2) ಸಿನಿಮಾ ಮೂಲಕ. ಈಗ ಆ ಚಿತ್ರದ ನಿರ್ಮಾಪಕರು ಮತ್ತೊಂದು ಯಶಸ್ಸಿಗಾಗಿ ತಂತ್ರ ರೂಪಿಸುತ್ತಿದ್ದಾರೆ. ತಮಗೆ ಯಾವುದರಿಂದ ಗೆಲುವು ಸಿಕ್ಕಿದೆಯೋ ಅದರಿಂದ ಮತ್ತೊಮ್ಮೆ ಗೆಲ್ಲುವ ಬಗೆ ಹೇಗೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಅಂದರೆ, ಸೀಕ್ವೆಲ್​ಗಳಿಂದ ಯಶಸ್ಸು ಪಡೆಯಬಹುದು ಎಂದು ಅವರು ನಂಬಿದ್ದಾರೆ. ಹಾಗಾಗಿ ‘ಕಬೀರ್​ ಸಿಂಗ್​’ ಚಿತ್ರಕ್ಕೆ ಸೀಕ್ವೆಲ್​ (Kabir Singh 2) ಮಾಡಲು ನಿರ್ಮಾಪಕರು ಸಜ್ಜಾಗುತ್ತಿದ್ದಾರೆ. ಆ ಕುರಿತು ಅಧಿಕೃತವಾಗಿಯೇ ಮಾಹಿತಿ ಹೊರಬಿದ್ದಿದೆ.

ತೆಲುಗಿನ ‘ಅರ್ಜುನ್​ ರೆಡ್ಡಿ’ ಸಿನಿಮಾವನ್ನು ‘ಕಬೀರ್​ ಸಿಂಗ್​’ ಶೀರ್ಷಿಕೆಯಲ್ಲಿ ಹಿಂದಿಗೆ ರಿಮೇಕ್​ ಮಾಡಲಾಯಿತು. ಆ ಚಿತ್ರದಲ್ಲಿ ಹೀರೋ ಆಗಿ ನಟಿಸಿ ಶಾಹಿದ್​ ಕಪೂರ್​ಗೆ ಭರ್ಜರಿ ಗೆಲುವು ಸಿಕ್ಕಿತು. ಆ ಚಿತ್ರಕ್ಕೆ ಬಂಡವಾಳ ಹೂಡಿದ್ದು ‘ಟೀ-ಸಿರೀಸ್​’ ಮತ್ತು ‘ಸಿನಿ ಒನ್​ ಸ್ಟಡಿಯೋಸ್​’ ಸಂಸ್ಥೆಗಳು. ಈ ನಿರ್ಮಾಪಕರೇ ‘ಭೂಲ್​ ಭುಲಯ್ಯ 2’ ಚಿತ್ರವನ್ನು ನಿರ್ಮಾಣ ಮಾಡಿ ಈಗ ಗೆಲುವು ಕಂಡಿದ್ದಾರೆ. ಯಾವುದೇ ಯಶಸ್ವಿ ಚಿತ್ರಕ್ಕೆ ಉತ್ತಮ ರೀತಿಯಲ್ಲಿ ಸೀಕ್ವೆಲ್​ ಮಾಡಿದರೆ ಗೆಲುವು ಸಿಗುತ್ತದೆ ಎಂಬ ಸೂತ್ರವನ್ನು ಅವರು ಕಂಡುಕೊಂಡಂತಿದೆ. ಹಾಗಾಗಿ ‘ಕಬೀರ್​ ಸಿಂಗ್​ ಪಾರ್ಟ್​ 2’ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: Bhool Bhulaiyaa 2: ಕೊನೆಗೂ ಬಾಲಿವುಡ್​​ ಚಿತ್ರವೊಂದರ ಕೈಹಿಡಿದ ಹಿಂದಿ ಪ್ರೇಕ್ಷಕರು; ‘ಭೂಲ್ ಭುಲಯ್ಯ 2’ ಕಲೆಕ್ಷನ್ ಎಷ್ಟು?

ಇದನ್ನೂ ಓದಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಕೊನೆಗೂ ಬಂತು ಬಾಲಿವುಡ್​ಗೆ ಬೂಸ್ಟ್ ಕೊಡುವ ಚಿತ್ರ; ಮೊದಲ ದಿನ ಭರ್ಜರಿ ಕಲೆಕ್ಷನ್
Image
ಬಾಲಿವುಡ್​ನಲ್ಲಿ ಮುಂದುವರಿದ ಸೋಲಿನ ಸರಣಿ; ರಣವೀರ್ ಸಿಂಗ್ ಚಿತ್ರಕ್ಕೆ ‘ಡಿಸಾಸ್ಟರ್​’ ಎಂದ ಫ್ಯಾನ್ಸ್
Image
ಸೌತ್​ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್​ ಅಬ್ರಾಹಂ; ‘ಆರ್​ಆರ್​ಆರ್​’ ಎದುರಲ್ಲಿ ಹೀನಾಯ ಸೋಲು

ಹೌದು, ನಿರ್ಮಾಪಕರಾದ ಭೂಷಣ್​ ಕುಮಾರ್​ ಮತ್ತು ಮುರಾದ್​ ಖೇತಾನಿ ಅವರು ‘ಕಬೀರ್​ ಸಿಂಗ್​ 2’ ಮತ್ತು ‘ಭೂಲ್​ ಭುಲಯ್ಯ 3’ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ‘ಪಿಂಕ್​ ವಿಲ್ಲಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಕಬೀರ್​ ಸಿಂಗ್​ ಎಂಬುದು ತುಂಬ ಇಂಟರೆಸ್ಟಿಂಗ್ ಮತ್ತು ಜನಪ್ರಿಯ​ ಪಾತ್ರ. ಖಂಡಿತವಾಗಿಯೂ ಆ ಚಿತ್ರಕ್ಕೆ 2ನೇ ಪಾರ್ಟ್​ ಮಾಡಬಹುದು. ಅದನ್ನು ಪ್ರಾಂಚೈಸ್​ ಆಗಿಸುವ ರೀತಿಯಲ್ಲಿ ನಾವು ಕಥೆ ಯೋಚಿಸಬೇಕು’ ಎಂದು ನಿರ್ಮಾಪಕರು ಹೇಳಿದ್ದಾರೆ.

ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​

ಒಂದು ವೇಳೆ ‘ಕಬೀರ್ ಸಿಂಗ್​’ ಚಿತ್ರಕ್ಕೆ ಸೀಕ್ವೆಲ್​ ಮಾಡಿದರೆ ಆ ಸಿನಿಮಾದಲ್ಲಿ ಶಾಹಿದ್ ಕಪೂರ್​ ಹೀರೋ ಆಗುತ್ತಾರಾ ಅಥವಾ ಬೇರೆ ನಟನ ಆಯ್ಕೆ ಆಗಲಿದೆಯೋ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಈ ಬಗ್ಗೆ ಆದಷ್ಟು ಬೇಗ ಇನ್ನಷ್ಟು ಅಪ್​ಡೇಟ್​ ಸಿಗಲಿ ಎಂದು ಸಿನಿಪ್ರಿಯರು ಕಾಯುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ