ಬಾಲಿವುಡ್​ನಲ್ಲಿ ಮುಂದುವರಿದ ಸೋಲಿನ ಸರಣಿ; ರಣವೀರ್ ಸಿಂಗ್ ಚಿತ್ರಕ್ಕೆ ‘ಡಿಸಾಸ್ಟರ್​’ ಎಂದ ಫ್ಯಾನ್ಸ್

ಬಾಲಿವುಡ್​ನಲ್ಲಿ ಮುಂದುವರಿದ ಸೋಲಿನ ಸರಣಿ; ರಣವೀರ್ ಸಿಂಗ್ ಚಿತ್ರಕ್ಕೆ ‘ಡಿಸಾಸ್ಟರ್​’ ಎಂದ ಫ್ಯಾನ್ಸ್
ರಣವೀರ್

ರಣವೀರ್ ಸಿಂಗ್​ಗೆ ನಾಯಕಿ ಆಗಿ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಶಾಲಿನಿ ಪಾಂಡೆ ನಟಿಸಿದ್ದಾರೆ. ಈ ಸಿನಿಮಾ ಮಕಾಡೆ ಮಲಗುವ ಸೂಚನೆ ಸಿಕ್ಕಿದೆ. ವಿಮರ್ಶಕರ ವಲಯದಲ್ಲಿ ಚಿತ್ರಕ್ಕೆ ಋಣಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

TV9kannada Web Team

| Edited By: Rajesh Duggumane

May 13, 2022 | 3:59 PM

ಬಾಲಿವುಡ್​ನಲ್ಲಿ (Bollywood) ಸೋಲಿನ ಸರಣಿ ಮುಂದುವರಿದಿದೆ. ಕೊರೊನಾ ಮೂರನೆ ಅಲೆ ಬಳಿಕ ‘ಸೂರ್ಯವಂಶಿ’ ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹೊರತುಪಡಿಸಿ ಮತ್ತಾವ ಬಾಲಿವುಡ್​ ಚಿತ್ರಗಳ ಬಳಿಯೂ ಗೆಲ್ಲಲು ಸಾಧ್ಯವಾಗಿಲ್ಲ. ‘ಕೆಜಿಎಫ್ 2’ ಬಳಿಕ ತೆರೆಗೆ ಬಂದ ಎಲ್ಲಾ ಬಾಲಿವುಡ್ ಸಿನಿಮಾಗಳು ಸೋತಿವೆ. ಇಂದು (ಮೇ 13) ತೆರೆಗೆ ಬಂದ ರಣವೀರ್ ಸಿಂಗ್ (Ranveer Singh) ನಟನೆಯ ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾ (Jayeshbhai Jordaar ) ಕೂಡ ನೆಲಕಚ್ಚುವ ಸೂಚನೆ ಸಿಕ್ಕಿದೆ. ವಿಮರ್ಶಕರು ಹಾಗೂ ಸಿನಿಪ್ರಿಯರಿಂದ ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಕೆಲವರು ಈ ಚಿತ್ರವನ್ನು ಡಿಸಾಸ್ಟರ್ ಎಂದು ಬಣ್ಣಿಸಿದರೆ ಇನ್ನೂ ಕೆಲವರು ತಲೆನೋವು ಭರಿಸುವ ಚಿತ್ರ ಎಂದು ಕರೆದಿದ್ದಾರೆ.

ಈ ಮೊದಲು ಹೀರೋ ಆಗಿ ಗುರುತಿಸಿಕೊಂಡಿದ್ದ ದಿವ್ಯಾಂಗ್​ ಠಕ್ಕರ್ ಅವರು ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್​ಗೆ ನಾಯಕಿ ಆಗಿ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಶಾಲಿನಿ ಪಾಂಡೆ ನಟಿಸಿದ್ದಾರೆ. ಈ ಸಿನಿಮಾ ಮಕಾಡೆ ಮಲಗುವ ಸೂಚನೆ ಸಿಕ್ಕಿದೆ. ಸಿನಿಮಾ ನೋಡಿದ ಬಹುತೇಕರು ನೆಗೆಟಿವ್ ವಿಮರ್ಶೆ ನೀಡುತ್ತಿದ್ದಾರೆ. ‘ಬೇಸರ-ತಲೆನೋವು ತರಿಸುವ ಸಿನಿಮಾ. ಇದೊಂದು ಡಿಸಾಸ್ಟರ್​’ ಎಂದು ಶಿವ ಸತ್ಯಮ್ ಎಂಬುವವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಮರ್ಶಕರ ವಲಯದಲ್ಲೂ ಚಿತ್ರಕ್ಕೆ ಋಣಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾವನ್ನು ಒಂದು ವಾಕ್ಯದಲ್ಲಿ ಬಣ್ಣಿಸಿದ್ದು ‘ಕಳಪೆ’ ಎಂದು ಕರೆದಿದ್ದಾರೆ. ವಿಮರ್ಶಕ ರೋಹಿತ್ ಜೈಸ್ವಾಲ್ ಐದಕ್ಕೆ ಒಂದು ಸ್ಟಾರ್ ನೀಡಿದ್ದಾರೆ.

‘ಅರ್ಜುನ್​ ರೆಡ್ಡಿ’ ಸಿನಿಮಾದಿಂದ ಖ್ಯಾತಿ ಹೆಚ್ಚಿಸಿಕೊಂಡ ಶಾಲಿನಿ ಪಾಂಡೆ ಸತತ ಸೋಲು ಕಂಡರು. ಈ ಸೋಲಿನ ಸರಣಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆದಂತೆ ಆಗಿದೆ. ರಣವೀರ್ ನಟನೆಯ ‘83’ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿಲ್ಲ. ಈಗ ಈ ಸಿನಿಮಾದಿಂದ ರಣವೀರ್ ಸೋಲು ಉಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada