Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಸೀಕ್ವೆಲ್ ಬರಲಿದೆಯೇ? ವಿವೇಕ್ ಅಗ್ನಿಹೋತ್ರಿ ನೀಡಿದ್ರು ಉತ್ತರ
The Kashmir Files 2 | The Delhi Files: ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಸೀಕ್ವೆಲ್ ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ನಿರ್ದೇಶಕ ಟ್ವಿಟರ್ನಲ್ಲಿ ಉತ್ತರಿಸಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಆಕ್ಷನ್ ಕಟ್ ಹೇಳಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಎಲ್ಲರ ಗಮನ ಸೆಳೆದಿತ್ತು. ಜತೆಗೆ ದೇಶಾದ್ಯಂತ ತೀವ್ರ ಚರ್ಚೆಯನ್ನೂ ಹುಟ್ಟುಹಾಕಿತ್ತು. ಹೀಗಾಗಿ ಸಹಜವಾಗಿಯೇ ಅವರ ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಮೂಡಿದೆ. ಈ ಹಿಂದೆ ಘೋಷಿಸಿದ್ದಂತೆ ‘ಫೈಲ್ಸ್’ ಸರಣಿಯಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸುವುದಾಗಿ ಅವರು ಹೇಳಿಕೊಂಡಿದ್ದರು. ಅದರಲ್ಲಿ ಇತಿಹಾಸದಲ್ಲಿ ದಾಖಲಾಗದ ಸ್ವತಂತ್ರ ಭಾರತದ ಕತೆಯನ್ನು ಹೇಳುವುದಾಗಿ ತಿಳಿಸಿದ್ದರು. ಈ ಸರಣಿಯ ಮೊದಲ ಚಿತ್ರವಾಗಿ ‘ದಿ ತಾಷ್ಕೆಂಟ್ ಫೈಲ್ಸ್’ ತೆರೆಕಂದಿತ್ತು. ಎರಡನೇ ಚಿತ್ರವಾಗಿ ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆಗಿತ್ತು. ಮೂರನೇ ಚಿತ್ರ ‘ದಿ ಡೆಲ್ಲಿ ಫೈಲ್ಸ್’ ಅನ್ನು (The Delhi Files) ವಿವೇಕ್ ಅಗ್ನಿಹೋತ್ರಿ ಘೋಷಿಸಿದ್ದಾರೆ. ಅದರ ಕೆಲಸಗಳು ನಡೆಯುತ್ತಿವೆ. ಇದೀಗ ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಸೀಕ್ವೆಲ್ ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ನಿರ್ದೇಶಕ ಟ್ವಿಟರ್ನಲ್ಲಿ ಉತ್ತರಿಸಿದ್ದಾರೆ.
ಇತ್ತೀಚೆಗೆ ಟ್ವೀಟ್ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಅದರಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘‘ಬಹಳಷ್ಟು ಉಗ್ರಗಾಮಿ ಸಂಘಟನೆಗಳು, ಪಾಕಿಸ್ತಾನೀಯರು, ಕಾಂಗ್ರೆಸ್, ಎಎಪಿ, ಶಿವಸೇನೆ ಮತ್ತು ಅರ್ಬನ್ ನಕ್ಸಲ್ಗಳು ‘ಕಾಶ್ಮೀರ್ ಫೈಲ್ಸ್ 2’ ಬಗ್ಗೆ ಕೇಳುತ್ತಿದ್ದಾರೆ. ಅವರೆಲ್ಲರಿಗೂ ನಿರಾಸೆ ಮಾಡುವುದಿಲ್ಲ ಎಂದು ಮಾತು ನೀಡುತ್ತೇನೆ. ‘ದಿ ಕಾಶ್ಮೀರ್ ಫೈಲ್ಸ್ ಪಾರ್ಟ್ 2’ವನ್ನು ‘ಡೆಲ್ಲಿ ಫೈಲ್ಸ್’ ಎನ್ನಬಹುದು. 2024ರಲ್ಲಿ ಅದು ತೆರೆಕಾಣಲಿದೆ’’ ಎಂದು ಟ್ವೀಟ್ ಮಾಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಟ್ವೀಟ್ ಇಲ್ಲಿದೆ:
A lot of terror Organisations, Pakistanis, Congress, AAP (now Shiv sena also) and #UrbanNaxals are asking me for Kashmir Files 2. I promise I wont disappoint you.
The part 2 is called #TheDelhiFiles.
Start building good immunity. Coming in 2024. https://t.co/yiGtE76LqN
— Vivek Ranjan Agnihotri (@vivekagnihotri) June 5, 2022
ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ 1984ರ ದೆಹಲಿ ಸಿಖ್ ಗಲಭೆಗಳನ್ನು ಆಧರಿಸಿ ‘ಡೆಲ್ಲಿ ಫೈಲ್ಸ್’ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದ್ದರು. ಇದನ್ನು ಜೀವಿಸುವ ಹಕ್ಕಿನ ವಿಚಾರದಡಿಯಲ್ಲಿ ಕಟ್ಟಿಕೊಡುವುದಾಗಿ ಅವರು ಹೇಳಿಕೊಂಡಿದ್ದರು.
ಇತ್ತೀಚೆಗೆ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸುಮಾರು 15- 20 ಕೋಟಿ ರೂ ಬಜೆಟ್ನಲ್ಲಿ ತಯಾರಾಗಿತ್ತು. ಅನುಪಮ್ ಖೇರ್, ಪಲ್ಲವಿ ಜೋಶಿ ಮೊದಲಾದವರು ನಟಿಸಿದ್ದ ಈ ಸಿನಿಮಾ ಸುಮಾರು 340 ಕೋಟಿ ರೂಗಳನ್ನು ಬಾಚಿಕೊಂಡಿತ್ತು. ಪ್ರಸ್ತುತ ಓಟಿಟಿಯಲ್ಲಿ ‘ಕಾಶ್ಮೀರ್ ಫೈಲ್ಸ್‘ ಬಿತ್ತರವಾಗುತ್ತಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ