AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR: ಹಾಲಿವುಡ್​​ ಜನಪ್ರಿಯ ಬರಹಗಾರನಿಂದ ‘ಆರ್​ಆರ್​ಆರ್​​’ಗೆ ಶಹಬ್ಬಾಸ್​ಗಿರಿ; ಚಿತ್ರ ನೋಡಿ ಹೇಳಿದ್ದೇನು ಗೊತ್ತಾ?

C.Robert Cargill | SS Rajamouli: ‘ಆರ್​ಆರ್​​ಆರ್​’ ಚಿತ್ರಕ್ಕೆ ಹಾಲಿವುಡ್​​ನ ಖ್ಯಾತ ಬರಹಗಾರನಿಂದ ವಿಶೇಷ ಮನ್ನಣೆ ಸಿಕ್ಕಿದೆ. ‘ಡಾಕ್ಟರ್ ಸ್ಟ್ರೇಂಜ್’ ಫ್ರಾಂಚೈಸ್​ ಬರಹಗಾರ ಸಿ.ರಾಬರ್ಟ್​​​ ಕಾರ್ಗಿಲ್​​ ಚಿತ್ರ ನೋಡಿ ಸಂತಸ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು? ಇಲ್ಲಿದೆ ನೋಡಿ.

RRR: ಹಾಲಿವುಡ್​​ ಜನಪ್ರಿಯ ಬರಹಗಾರನಿಂದ ‘ಆರ್​ಆರ್​ಆರ್​​’ಗೆ ಶಹಬ್ಬಾಸ್​ಗಿರಿ; ಚಿತ್ರ ನೋಡಿ ಹೇಳಿದ್ದೇನು ಗೊತ್ತಾ?
ಸಿ.ರಾಬರ್ಟ್​​ ಕಾರ್ಗಿಲ್​ (ಎಡ ಚಿತ್ರ), ‘ಆರ್​ಆರ್​ಆರ್​’ ಪೋಸ್ಟರ್​ (ಬಲ ಚಿತ್ರ)
TV9 Web
| Edited By: |

Updated on: Jun 08, 2022 | 8:25 AM

Share

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಚಿತ್ರ ದೇಶ-ವಿದೇಶದಲ್ಲಿ ಹೆಸರು ಮಾಡುತ್ತಿದ್ದು. ರಿಲೀಸ್ ಆಗಿ ಬಹಳಷ್ಟು ಸಮಯವಾದರೂ ಕೂಡ ಜನರು ಇಷ್ಟಪಟ್ಟು ಚಿತ್ರಗಳನ್ನು ನೋಡುತ್ತಿದ್ದಾರೆ. ವಿಶೇಷವಾಗಿ ನೆಟ್​​ಫ್ಲಿಕ್ಸ್​​ನಲ್ಲಿ ಚಿತ್ರ ತೆರೆಕಂಡ ಮೇಲೆ ಇದು ವಿದೇಶಿಗರ ಗಮನ ಸೆಳೆದಿದೆ. ರಾಮ್​ ಚರಣ್ (Ram Charan) ಹಾಗೂ ಜ್ಯೂ.ಎನ್​ಟಿಆರ್ (Jr NTR)​​ ನಟನೆಯ ಚಿತ್ರವನ್ನು ಕೆಲ ವಿದೇಶಿಗರು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ‘ಆರ್​ಆರ್​​ಆರ್​’ ಚಿತ್ರಕ್ಕೆ ಹಾಲಿವುಡ್​​ನ ಖ್ಯಾತ ಬರಹಗಾರನಿಂದ ವಿಶೇಷ ಮನ್ನಣೆ ಸಿಕ್ಕಿದೆ. ಹಾಲಿವುಡ್​ನಲ್ಲಿ ‘ಡಾಕ್ಟರ್ ಸ್ಟ್ರೇಂಜ್’ (Doctor Strange) ಸರಣಿ ಅಪಾರ ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ಆ ಫ್ರಾಂಚೈಸ್​ನ ಎರಡನೇ ಚಿತ್ರ ರಿಲೀಸ್ ಆಗಿದ್ದು, ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದೆ. ಆ ಚಿತ್ರಗಳ ಸಹ-ಬರಹಗಾರ ಸಿ.ರಾಬರ್ಟ್​​ ಕಾರ್ಗಿಲ್ ಇದೀಗ ‘ಆರ್​ಆರ್​ಆರ್​’ ಚಿತ್ರ ನೋಡಿ ಮೆಚ್ಚಿದ್ದಾರೆ.

ರಾಬರ್ಟ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಚಿತ್ರ ನೋಡಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘‘ಸ್ನೇಹಿತರು ಹೇಳಿದ ನಂತರ ಚಿತ್ರ ವೀಕ್ಷಿಸಿದೆ. ನಾನು ನೋಡಿದ್ದರಲ್ಲೇ ಇದು ಅತ್ಯಂತ ಪ್ರಾಮಾಣಿಕವಾದ ಪ್ರಯತ್ನ ಹಾಗೂ ಅದ್ಭುತವಾದ ಬ್ಲಾಕ್​ಬಸ್ಟರ್​​​ ಚಿತ್ರ. ಈ ವಾರ ಮತ್ತೊಮ್ಮೆ ಚಿತ್ರ ವೀಕ್ಷಿಸುತ್ತೇನೆ’’ ಎಂದು ರಾಬರ್ಟ್​​ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
Image
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​
Image
Shilpa Shetty Birthday: ಶಿಲ್ಪಾ ಶೆಟ್ಟಿಗೆ ಬರ್ತ್​ಡೇ ಸಂಭ್ರಮ; ಆ ಒಂದು ವಿಚಾರಕ್ಕೆ ಭಿನ್ನವಾಗಿ ನಿಲ್ಲುತ್ತಾರೆ ಕರಾವಳಿ ಬೆಡಗಿ
Image
ಚಿರುಗೆ ಬೆಲ್ಟ್‌ನಲ್ಲಿ ಹೊಡೆದ ಘಟನೆ ನೆನೆದ ಅರ್ಜುನ್ ಸರ್ಜಾ
Image
‘ಕೆಲವೊಂದು ಯುದ್ಧಗಳನ್ನು ನಾನೇ ಗೆಲ್ಲಬೇಕಿದೆ’; ಸಹಾಯ ಮಾಡಲು ಬಂದ ಹರ್ಷನಿಗೆ ಒಂದೇ ಮಾತಲ್ಲಿ ಉತ್ತರಿಸಿದ ಭುವಿ

ರಾಬರ್ಟ್​​ ಟ್ವೀಟ್​ಗೆ ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಒಂದು ಕಾಮೆಂಟ್​ಗೆ ಪ್ರತಿಕ್ರಿಯೆ ನೀಡುತ್ತಾ ರಾಬರ್ಟ್​​ ಅವರು, ‘ಚಿತ್ರವನ್ನು ಮೂಲ ಭಾಷೆಯಲ್ಲಿ ಮತ್ತೊಮ್ಮೆ ನೋಡಬೇಕು’ ಎಂದು ಹೇಳಿಕೊಂಡಿದ್ದಾರೆ.

ಸಿ.ರಾಬರ್ಟ್​​ ಕಾರ್ಗಿಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಬಾಕ್ಸಾಫೀಸ್​ನಲ್ಲಿ ಇದುವರೆಗೆ ಸುಮಾರು 1,150 ಕೋಟಿ ರೂ ಗೂ ಅಧಿಕ ಮೊತ್ತವನ್ನು ಚಿತ್ರ ಬಾಚಿಕೊಂಡಿದೆ. ವಿಎಫ್​ಎಕ್ಸ್​ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿರುವ ಈ ಚಿತ್ರದಲ್ಲಿ ರಾಮ್​ ಚರಣ್, ಜ್ಯೂ ಎನ್​ಟಿಆರ್​​ ಜತೆಗೆ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮೊದಲಾದವರು ಅಭಿನಯಿಸಿದ್ದಾರೆ.

ಕಳೆದ ತಿಂಗಳು ಓಟಿಟಿಗೆ ‘ಆರ್​ಆರ್​ಆರ್​’ ಕಾಲಿಟ್ಟಿತ್ತು. ನೆಟ್​​ಫ್ಲಿಕ್ಸ್​ನಲ್ಲಿ ಹಿಂದಿ ಅವತರಣಿಕೆ ಪ್ರದರ್ಶನವಾಗುತ್ತಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳು ಜೀ5ನಲ್ಲಿ ಬಿತ್ತರವಾಗುತ್ತಿವೆ. ನೆಟ್​ಫ್ಲಿಕ್ಸ್​​ನಲ್ಲಿ ಈ ಚಿತ್ರ ಟ್ರೆಂಡಿಂಗ್ ಪಟ್ಟಿಯಲ್ಲಿದ್ದು, ಇಂಗ್ಲೀಷ್ ಅಲ್ಲದ ಭಾಷೆಗಳಲ್ಲಿ ಮೊದಲ ಸಾಲಿನಲ್ಲಿತ್ತು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ